ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಖ-ಳ-ನಾಯಕರು ತಮ್ಮ ಅಭಿನಯದ ಮೂಲಕ ಹಲವಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು 90ರ ದಶಕದಲ್ಲಿ ಇಂತಹ ಖ-ಳ-ನಾಯಕರಲ್ಲಿ ಪ್ರಮುಖವಾದವರು ಹಿರಿಯ ನಟ ವಜ್ರಮುನಿ. ಹೌದು ಅವರ ಹೆಸರಿನಲ್ಲಿ ಒಂದು ರೀತಿಯ ಭಯ ಕಾಣಿಸಿಕೊಳ್ಳುತ್ತಿತ್ತು. ಇನ್ನೂ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ, ಹಲವಾರು ಖ್ಯಾತ ಇದರೊಂದಿಗೆ ಖ-ಳ-ನಾಯಕರಾಗಿ ಅಭಿನಯಿಸಿದ್ದಾರೆ. ಹೌದು ಸುಮಾರು 300 ಚಿತ್ರಗಳಲ್ಲಿ ನಟಿಸಿದ ನಟ ವಜ್ರಮುನಿ ಅವರು ಹಲವಾರು ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ತುಂಟನಾಗಿದ್ದ ಇವರು ಓದಿನ ಕಡೆಗೆ ಹೆಚ್ಚು ಗಮನ ನೀಡದೆ ನಾಟಕರಂಗದತ್ತ ತಮ್ಮ ಚಿತ್ತವನ್ನು ಹರಿಸಿದರು. ಇನ್ನು ಇವರು ‘ಪ್ರಚಂಡ ರಾವಣ’ ಎಂಬ ನಾಟಕದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದು ಇವರಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಹೀಗೆ ನಾಟಕರಂಗದ ಮೂಲಕ ಸಿನಿಮಾರಂಗದ ವಜ್ರಮುನಿ ಮುಖ ಮಾಡಿದರು. ಅವರು ಅಭಿನಯಿಸಿದ ಕನ್ನಡ ಚಿತ್ರಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಇನ್ನೂ ಇಂತಹ ಖ್ಯಾತ ನಟ ವಜ್ರಮುನಿ ಅವರ ಕುಟುಂಬ ಎಲ್ಲಿದೆ? ಹೇಗಿದೆ? ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ನಟ ವಜ್ರಮುನಿ ಅವರು 1967 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ‘ಸಾವಿರ ಮೆಟ್ಟಿಲು’ ಎಂಬ ಸಿನಿಮಾದಲ್ಲಿ ನಟನಾಗಿ ನಟಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆದರೆ ಆ ಚಿತ್ರ ತೆರೆಕಾಣಲಿಲ್ಲ. ನಂತರ ಮತ್ತೆ ಪುಟ್ಟಣ್ಣ ಕಣಗಾಲ್ ಅವರ ‘ಮಲ್ಲಮ್ಮನ ಪವಾಡ’ ಎಂಬ ಚಿತ್ರದಲ್ಲಿ ಅಭಿನಯಿಸಿದ ವಜ್ರಮುನಿ ಅವರು ಸಾಕಷ್ಟು ಖ್ಯಾತಿ ಪಡೆದರು. ನಂತರ ಅವರಿಗೆ ಸಾಕಷ್ಟು ಯಶಸ್ಸು ಅವರನ್ನು ತಂದುಕೊಟ್ಟಿದ್ದು ‘ಸಂಪತ್ತಿಗೆ ಸವಾಲ್’ ಎಂಬ ಸಿನಿಮಾ. ಈ ಸಿನಿಮಾದ ಮೂಲಕ ಯಶಸ್ಸಿನ ಹಾದಿ ಹಿಡಿದ ವಜ್ರಮುನಿ ಅವರು ಹಿಂದೆ ತಿರುಗಿ ನೋಡಿದ ಕ್ಷಣಗಳೇ ಇಲ್ಲ. ಹೀಗೆ ಒಂದಾದ ನಂತರ ಬಂದು ಯಶಸ್ಸಿನ ಚಿತ್ರಗಳನ್ನು ನೀಡಿದ ವಜ್ರಮುನಿ ಅವರು ಖ-ಳ-ನಾಯಕರಾಗಿದ್ದರೂ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ನಂತರ ವಜ್ರಮುನಿ ಅವರು ಗೆಜ್ಜೆ ಪೂಜೆ, ನಾಗರಹಾವು, ಬಹದ್ದೂರ್ ಗಂಡು, ಬಂಗಾರದ ಮನುಷ್ಯ, ಭಕ್ತ ಕುಂಬಾರ, ಗಿರಿಕನ್ಯೆ, ಆಕಸ್ಮಿಕ, ಪ್ರೇಮದ ಕಾಣಿಕೆ, ಶಂಕರ್ ಗುರು ಹೀಗೆ ಮುಂತಾದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅವರು ‘ತಾಯಿಗಿಂತ ದೇವರಿಲ್ಲ’, ‘ಬ್ರಹ್ಮಾಸ್ತ್ರ’, ‘ಗಂಡಭೇರುಂಡ’ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದರು. ಹೀಗೆ ಹಲವಾರು ರೀತಿಯಲ್ಲಿ ಗುರುತಿಸಿಕೊಂಡ ವಜ್ರಮುನಿಯವರಿಗೆ ಮೂರು ಜನ ಮಕ್ಕಳಿದ್ದಾರೆ.

ಹೌದು ಹಿರಿಯ ನಟ ವಜ್ರಮುನಿಯವರಿಗೆ ಮೂರು ಜನ ಗಂಡು ಮಕ್ಕಳಿದ್ದು, ಮೊದಲ ಇಬ್ಬರು ಮಕ್ಕಳು ತೋಟ ಹಾಗೂ ಹೈನುಗಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕೊನೆಯ ಮಗ ಕಾಂಟ್ರಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇವರೆಲ್ಲ ಕೂಡಿ ಇದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಅಂಜನ ಪುರದಲ್ಲಿ ತೋಟದ ಮನೆಯಲ್ಲಿ ವಾಸವಿದ್ದಾರೆ. ಇನ್ನು ವಜ್ರಮುನಿಯವರ ಮಕ್ಕಳು ಯಾರು ಕೂಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿಲ್ಲ. ಮೊದಲ ಇಬ್ಬರು ಮಕ್ಕಳು ತೋಟದ ಮನೆಯಲ್ಲಿ ಹೈನುಗಾರಿಕೆ ಹಾಗೂ ತೋಟಗಾರಿಕೆ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಇನ್ನು ಈ ವಿಡಿಯೋ ಹಾಗೂ ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •