ಧೋನಿ ಕಷ್ಟದಲ್ಲಿ ಇದ್ದಾಗ ಅಂಬಿ

ಧೋನಿ ಕಷ್ಟದಲ್ಲಿ ಇದ್ದಾಗ ಅಂಬಿ ಎಷ್ಟು ಹಣ ಕೊಟ್ಟಿದ್ರು ಗೊತ್ತಾ?ವಿಷ್ಯ ಬಿಚ್ಚಿಟ್ಟ ಭಾವುಕರಾದ ಸುಮಲತಾ ಹೇಳಿದ್ದೇನು

Home Kannada News/ಸುದ್ದಿಗಳು

ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್, ಕಲಿಯುಗ ಕರ್ಣ ಎಂದೇ ಖ್ಯಾತಿ ಪಡೆದಿದ್ದವರು ನಟ ಅಂಬರೀಶ್. ಇವರ ಸ್ವಭಾವ ಒರಟಾದರು ಮನಸ್ಸು ಮಗುವಿನಂಥದ್ದು, ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಬದುಕಿದ್ದ ಅಷ್ಟು ದಿನಗಳ ಕಾಲ ಅನೇಕ ಜನರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅಂಬರೀಶ್ ಅವರ ಈ ಸಹಾಯ ಮನೋಭಾವದಿಂದಲೇ ಅವರಿಗೆ ಬಹು ದೊಡ್ಡ ಅಭಿಮಾನಿ ಬಳಗ ಇದೆ. ಅಂಬರೀಶ್ ಅವರು ಜನರಿಗೆ ತಾವು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಅಂಬರೀಶ್ ಅವರ ಮನೆಯ ಮುಂದೆ ಕಷ್ಟ ಎಂದು ಯಾರೇ ಹೋದರು, ಅವರನ್ನು ಖಾಲಿ ಕೈಯಲ್ಲಿ ಕಳಿಸಿದ್ದೆ ಇಲ್ಲ..

ನಟ ಅಂಬರೀಶ್ ಚಿತ್ರರಂಗದಲ್ಲಿ, ಚಿತ್ರರಂಗದ ಹೊರಗೆ, ಸಾಮಾನ್ಯ ಜನರು ಹೀಗೆ ಅನೇಕರು ಅಂಬರೀಶ್ ಅವರ ಸಹಾಯ ಪಡೆದಿದ್ದಾರೆ. ಇದೀಗ ನಟ ಅಂಬರೀಶ್ ಅವರು ಬಹಳ ವರ್ಷಗಳ ಹಿಂದೆ ಕ್ರಿಕೆಟರ್ ಎಂ.ಎಸ್.ಧೋನಿ ಅವರ ಆಟದ ವೈಖರಿ ಮೆಚ್ಚಿ ಅವರಿಗೆ 2 ಲಕ್ಷ ಹಣ ನೀಡಿ ಸಹಾಯ ಮಾಡಿದ ಘಟನೆ ಈಗ ಬೆಳಕಿಗೆ ಬಂದಿದೆ. ಅಂಬರೀಶ್ ಅವರ ಪತ್ನಿ ಹಿರಿಯನಟಿ ಮತ್ತು ಸಂಸದೆ ಸುಮಲತಾ ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅಂಬರೀಶ್ ಅವರು ಎಂ.ಎಸ್.ಧೋನಿ ಅವರಿಗೆ 2 ಲಕ್ಷ ಚೆಕ್ ನೀಡಿ ಸಹಾಯ ಮಾಡಿದ್ದರು ಎನ್ನುವ ವಿಚಾರದ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು.

ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಸುಮಲತಾ ಅವರು ಆ ಘಟನೆಯ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಈ ಘಟನೆ ಇಂದ ರೆಬೆಲ್ ಸ್ಟಾರ್ ಬಗ್ಗೆ ಎಲ್ಲರಿಗೂ ಇದ್ದ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ..”ಅಂಬರೀಶ್ ಅವರು ಮಾಡುತ್ತಿದ್ದ ಸಹಾಯ ಎಲ್ಲಿಯೂ ಹೊರಗಡೆ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಮಾಡುವ ಸಹಾಯದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇಂತಹ ವಿಷಯಗಳನ್ನು ಅನಿರೀಕ್ಷಿತವಾಗಿ ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ಈ ವಿಚಾರದಲ್ಲೇ ಯಾವುದೇ ಅಚ್ಚರಿ ಇಲ್ಲ, ಅವರನ್ನು ಪ್ರೀತಿಸುವ ಜನ ಅವರನ್ನು ದಾನ ಕರ್ಣ ಎಂದು ಕರೆಯುತ್ತಿದ್ದರು..” ಎಂದು ಟ್ವೀಟ್ ಮಾಡಿದ್ದಾರೆ ಸುಮಲತಾ.

2004 ರಲ್ಲಿ ಬೆಂಗಳೂರಿನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಭರ್ಜರಿಯಾಗಿ ಆಟ ಆಡಿದ್ದ ಕೂಲ್ ಹುಡುಗ ಎಮ್.ಎಸ್.ಧೋನಿ ಅವರನ್ನು ಮೆಚ್ಚಿ, ರಾಂಚಿಯಿಂದ ಬಂದು ಕಷ್ಟದಲ್ಲಿದ್ದ ಧೋನಿ ಅವರಿಗೆ 2 ಲಕ್ಷ ರೂಪಾಯಿಯ ಚೆಕ್ ನೀಡಿದ್ದರು ನಟ ಅಂಬರೀಶ್. ಇದಲ್ಲದೆ ಇದರ ಬಗ್ಗೆ ಖುದ್ದು ಧೋನಿ ಅವರೇ ಒಂದು ಸಂದರ್ಶನದಲ್ಲಿ ಹೇಳಿ ಭಾವುಕರಾಗಿದ್ದರೆ. ನಮ್ಮ ಅಂಬಿ ಅವರ ಒಳ್ಳೆಯ ಮನಸ್ಸು ಇದ್ದರಿಂದ ತಿಳಿಯುತ್ತದೆ. ಈ ವಿಷಯವನ್ನು ತಿಳಿದು, ಧೋನಿ ಅವರ ಅಭಿಮಾನಿಗಳು ಅಂಬರೀಷ್ ಅವರ ಫೋಟೋ ಹಾಕಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸುಮಲತಾ ಅವರು ಈ ವಿಚಾರಗಳ ಬಗ್ಗೆ ಮಾತಾಡಿ ಭಾವುಕರಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...