ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ಕಾರ್ಯಕ್ರಮ ಈಗಾಗಲೇ ಆರಂಭವಾಗಿ ಒಂದು ವಾರ ಮುಗಿದಿದೆ. ಒಂದು ವಾರ ಮುಕ್ತಾಯ ಆಗುವುದರ ಜೊತೆಗೆ ಮೊದಲ ವಾರದಲ್ಲಿಯೇ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬಂದಾಗಿದೆ. ನಿನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಒಬ್ಬರು ಬಿಗ್ಬಾಸ್ ಮನೆಯಿಂದ ಔಟಾಗಿ ಹೊರಬಂದಿದ್ದಾರೆ. ಹೌದು ಪ್ರಿಯ ಓದುಗರೇ ಟಿಕ್ ಟಾಕ್ ಸ್ಟಾರ್ ಧನುಶ್ರೀಯವರು ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಆಟದಿಂದ ಹೊರ ಉಳಿದಿದ್ದು, ತಮ್ಮ ಮನೆ ಸೇರುವಂತಾಗಿದೆ.

Dhanushree

ಇದರ ಜೊತೆ ಬಿಗ್ಬಾಸ್ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಎಲ್ಲ ಸ್ಪರ್ಧಿಗಳಿಗೂ ವಾರಕ್ಕೆ ಇಂತಿಷ್ಟು ಎಂದು ಪೇಮೆಂಟ್ ಫಿಕ್ಸ್ ಮಾಡಲಾಗಿರುತ್ತದೆ, ಹಾಗೇ ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಸ್ಪರ್ಧಿಗಳಿಗೆ ಹಣವನ್ನು ಕೊಡಲಾಗುತ್ತದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೆದರೂ ಒಂದು ಮಟ್ಟಿಗೆ ಜನಪ್ರಿಯತೆ ಹೊಂದಿರುವ ವ್ಯಕ್ತಿಗಳನ್ನು ಸಹ ಈ ಬಾರಿಯೂ  ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು. ಇದರ ಸಾಲಿನಲ್ಲಿ ಧನುಶ್ರೀ, ರಘು, ಹಾಗೂ ಶಮಂತ್, ಬಿಗ್ ಬಾಸ್ ಮನೆ ಸೇರಿದ್ದರು.

ಆದ್ರೆ ಹೆಚ್ಚು ಅಪೇಕ್ಷೆ ಪಟ್ಟ ಬಿಗ್ಬಾಸ್ ಪ್ರೇಕ್ಷಕರಿಗೆ, ಅಷ್ಟಾಗಿ ಹೇಳಿಕೊಳ್ಳುವ ಹಾಗೆ ಧನುಶ್ರೀಯಿಂದ ಪರ್ಫಾರ್ಮೆನ್ಸ್ ಬರಲಿಲ್ಲ ಎಂದೇನಿಸುತ್ತದೆ, ಆದಕಾರಣ ಟಿಕ್ ಟಾಕ್ ಸ್ಟಾರ್ ಧನುಶ್ರೀ ಬಿಗ್ಬಾಸ್ ಮನೆಯಿಂದ ಹೊರಬಿದ್ದರು. ಹೌದು ಮೊದಲ ವಾರವೇ ತಮ್ಮ ಜರ್ನಿನನ್ನ ಮುಗಿಸಿದ ಧನುಶ್ರೀ ಅವರಿಗೆ, ಒಂದು ವಾರಕ್ಕೆ ಬರಿ 20 ಸಾವಿರ ರೂಪಾಯಿ ಹಣ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತು ಇನ್ನುಳಿದ 16 ಸ್ಪರ್ಧಿಗಳು ತಮ್ಮ ಪಯಣವನ್ನು ಬಿಗ್ ಬಾಸ್ ಮನೆಯ ಒಳಗೆ ಮುಂದುವರಿಸಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •