ಸದ್ಯ ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್.. ಅಭಿಮಾನಿಗಳ ಬಾಸ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿ ಯಾಗಿದ್ದು ಅಭಿಮಾನಿಗಳು ಸಂತೋಷದಲ್ಲಿದ್ದಾರೆ.. ಹೌದು ಸದ್ಯ ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು ಈ ಸಂತೋಷದ ನಡುವೆ ಕೃಷಿ ಇಲಾಖೆಯ ರಾಯಭಾರಿಯಾಗಿರುವ ವಿಚಾರ ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ.. ಆದರೆ ಕೃಷಿ ಇಲಾಖೆಯ ರಾಯಭಾರಿಯಾಗಲು ದರ್ಶನ್ ಅವರು ಪಡೆದ ಹಣವೆಷ್ಟು ಗೊತ್ತಾ? ಇಲ್ಲಿದೆ ನೋಡಿ..

Department-of-Agriculture

ದರ್ಶನ್ ಅವರು ಪ್ರಾಣಿ ಪ್ರಿಯರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಮೈಸೂರಿನಲ್ಲಿನ ದರ್ಶನ್ ಅವರ ಫಾರ್ಮ್ ನಲ್ಲಿ ನೂರಕ್ಕೂ ಹೆಚ್ಚು ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದು ಹೆಚ್ಚಿನ ಸಮಯ ಮೈಸೂರಿನಲ್ಲಿಯೇ ಕಳೆಯುತ್ತಾರೆ.. ಇನ್ನು ದರ್ಶನ್ ಅವರು ಎಷ್ಟು ಪ್ರಾಣಿ ಪ್ರಿಯರೋ ಅಷ್ಟೇ ಪರಿಸರ ಪ್ರಿಯರು ಹೌದು.. ಪರಿಸರ ಸಂರಕ್ಷಣೆಗಾಗಿ ಪ್ರತಿ ವರ್ಷ ದೊಡ್ಡ ದೊಡ್ಡ ಮರಗಳಾಗುವಂತಹ ವಿವಿದ ಜಾತಿಯ ಸಾವಿರಾರು ಗಿಡಗಳನ್ನು ನೆಡೆಸುತ್ತಾರೆ.. ಅಷ್ಟೇ ಅಲ್ಲದೇ ತಮ್ಮ ಅಭಿಮಾನಿಗಳಿಗೂ ಸಹ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿ ಗಿಡಗಳನ್ನು ನೆಡಲು ಪ್ರೇರೇಪಣೆ ಮಾಡುತ್ತಾರೆ.. ಸದ್ಯ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿರುವ ದರ್ಶನ್ ಅವರು ಇದೀಗ ಕೃಷಿ ಇಲಾಖೆಯ ರಾಯಭಾರಿಯೂ ಹೌದು..

Department-of-Agriculture

ಹೌದು ಮೊನ್ನೆಮೊನ್ನೆಯಷ್ಟೇ ರಾಜ್ಯದ ಕೃಷಿ ಸಚಿವರಾದ ಬಿ ಸಿ ಪಾಟಿಲ್ ಅವರು ದರ್ಶನ್ ಅವರ ಮೈಸೂರಿನ ಫಾರ್ಮ್ ಗೆ ತೆರಳಿ ದರ್ಶನ್ ಅವರ ಬಳಿ ಈ ವಿಚಾರ ತಿಳಿಸಿದ್ದಾರೆ.. ಅದೇ ಸಮಯದಲ್ಲಿ ರಾಯಭಾರಿಯಾಗಲು ಸಂಭಾವನೆಯ ವಿಚಾರವೂ ಸಹ ಚರ್ಚೆಯಾಗಿದೆ.. ಹೌದು ಕೃಷಿ ರಾಯಭಾರಿಯಾಗಲು ಒಪ್ಪಿದ ದರ್ಶನ್ ಅವರು ಬಿಸಿ ಪಾಟಿಲ್ ಅವರಿಗೆ ಕಂಡೀಷನ್ ಒಂದನ್ನು ಹಾಕಿದ್ದಾರೆ.. ಪ್ರತೊಯೊಂದು ಇಲಾಖೆಗೂ ರಾಯಭಾರಿ ಆದವರಿಗೆ ಗೌರವ ಧನವನ್ನು ನಿಗದಿ ಮಾಡಿ ನೀಡಲಾಗುತ್ತದೆ.. ಆ ಸ್ಟಾರ್ ಗಳು ಆ ಇಲಾಖೆಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಿರುತ್ತದೆ.. ಜೊತೆಗೆ ಆ ಇಲಾಖೆಯ ಜಾಹಿರಾತುಗಳಲ್ಲಿ ಅಭಿನಯಿಸಬೇಕಿರುತ್ತದೆ.. ಆದದೆ ದರ್ಶನ್ ಅವರು ಹಣದ ವಿಚಾರವಾಗಿ ಷರತ್ತೊಂದನ್ನು ಹಾಕಿದ್ದಾರೆ..

Department-of-Agriculture

ಹೌದು ಉಚಿತವಾಗಿ ರಾಯಭಾರಿಯನ್ನಾಗಿ ಮಾಡುವುದಾದರೆ ನಾನು ಖಂಡಿತ ರಾಯಭಾರಿಯಾಗುವೆ.. ಸಂಭಾವನೆ ಕೊಟ್ಟು ಮಾಡುವುದಾದರೆ ದಯವಿಟ್ಟು ಬೇಡ ಎಂದಿದ್ದಾರೆ.. ಹೌದು ದರ್ಶನ್ ಅವರು ಒಂದು ರೂಪಾಯಿಯೂ ಹಣ ಪಡೆಯದೇ ಕೃಷಿ ಇಲಾಖೆಯ ರಾಯಭಾರಿಯಾಗಿದ್ದು ಮುಂದೆ ಕೃಷಿ ಇಲಾಖೆಗೆ ಸಂಬಂಧ ಪಟ್ಟಂತೆ ಬರುವ ಜಾಹಿರಾತುಗಳಿಗೆ ದರ್ಶನ್ ಅವರೇ ಉಚಿತವಾಗಿ ಅಭಿನಯಿಸಲಿದ್ದಾರೆ..

ಈ ಹಿಂದೆಯೂ ಸಹ ಡಾ.ರಾಜ್ ಕುಮಾರ್ ಅವರು ನಂದಿನಿ ಹಾಲಿನ ಜಾಹಿರಾತನ್ನು ಉಚಿತವಾಗಿ ಯಾವುದೇ ಸಂಭಾವನೆ ಪಡೆಯದೆ ಮಾಡಿಕೊಟ್ಟಿದ್ದರು.. ಅದಾದ ಬಳಿಕ ಪುನೀತ್ ರಾಜ್ ಕುಮಾರ್ ಅವರೂ ಸಹ ಯಾವುದೇ ಹಣ ಪಡೆಯದೆ ನಂದಿನಿ ಹಾಲಿನ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.. ಇದೀಗ ದರ್ಶನ್ ಅವರು ಕೃಷಿ ಇಲಾಖೆಗೆ ರಾಯಭಾರಿಯಾಗಿದ್ದು ಅವರೂ ಸಹ ಯಾವುದೇ ಸಂಭಾವನೆ ಪಡೆಯದೇ ಮುಂಬರುವ ಕೃಷಿ ಇಲಾಖೆಯ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •