ಇದು ಇಂಟರ್ನೆಟ್ ಯುಗ. ಯುವಕ ಯುವತಿಯರು ಸೇರಿದಂತೆ ಮಕ್ಕಳಿಂದ ಮುದುಕರವರೆಗೂ ಸಾಮಾಜಿಕ ಜಾಲತಾಣಗಳನ್ನ ಹೆಚ್ಚಾಗಿ ಬಳಸುವವರು ಇದ್ದಾರೆ. ತಮ್ಮ ದಿನನಿತ್ಯದ ಕೆಲಸಗಳು ಸೇರಿದಂತೆ ಫೋಟೋಗಳು ಮತ್ತು ವಿಡಿಯೊಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಒಂದು ವಾಟ್ಸ್ ಆ್ಯಪ್ ಅತಿ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿದೆ. ಕಾರಣ ಇದರಲ್ಲಿ ವಿಶೇಷವಾದ ಫೀಚರ್ ಗಳು ಇವೆ. ಅಂತಹ ಒಂದು ಪೀಚರ್ ಗಳಲ್ಲಿ ತುಂಬಾ ಉತ್ತಮವಾದದ್ದು ಎಂದರೆ ನಾವು ಅಪ್ಪಿ ತಪ್ಪಿ ಕಳುಹಿಸಿದ ಮೆಸೇಜ್ ಗಳನ್ನು ಡಿಲೀಟ್ ಮಾಡುವುದು.

Delete

ಮೊದಲು ಇದರ ಅವಧಿ 7 ನಿಮಿಷಗಳು ಇತ್ತು. ಈಗ ಮೆಸೇಜ್ ಮಾಡಿದ 68 ನಿಮಿಷದ ಒಳಗೆ ನಾವು ತಪ್ಪಾಗಿ ಕಳುಹಿಸಿದ ಅಥವಾ ಯಾವುದೇ ಸಂದೇಶವನ್ನು ನಮ್ಮ ಮತ್ತು ನಾವು ಸೆಂಡ್ ಮಾಡಿದ ವ್ಯಕ್ತಿಯ ವಾಟ್ಸ್ ಆ್ಯಪ್ ನಿಂದ ಡಿಲೀಟ್ ಮಾಡಬಹುದು. ಹಾಗಾದ್ರೆ ಇದು ಮಾಡೋದು ಹೇಗೆ ಅಂತ ತಿಳಿಯೋಣ ಬನ್ನಿ..ಅಂತೆಯೇ ಹಾಗೆ ಡಿಲೀಟ್ ಮಾಡಲಾದ ಮೆಸೇಜ್ ಗಳು ಏನು ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ ಒಂದು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದು what’s remover+ ಎಂಬ ಆ್ಯಪ್.

Delete

ಇದನ್ನು ಇನ್ಸ್ಟಾಲ್ ಮಾಡಿಕೊಂಡ ಮೇಲೆ ಯಾವ ಆ್ಯಪ್ ಮೂಲಕ ಓಪನ್ ಮಾಡಬೇಕು ಎಂದು ಕೇಳುತ್ತದೆ. ಆಗ ವಾಟ್ಸ್ ಆ್ಯಪ್ ಎಂದು ಸೆಲೆಕ್ಟ್ ಮಾಡಿ. ನಂತರ ಯಾರೇ ಡಿಲೀಟ್ ಮಾಡಿದ ಮೆಸೇಜ್ ಗಳು ನಿಗಧಿತ ಅವಧಿಯ ಒಳಗೆ ನೋಡ ಬಹುದಾಗಿದೆ. ಆದರೆ ಇಲ್ಲಿ ಅಳಿಸಿದ ಫೋಟೋಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಇದೇ ರೀತಿ ನೋಟಿಫಿಕೇಶನ್ ಹಿಸ್ಟರಿ ಎಂಬ ಆ್ಯಪ್ ಇದೆ. ಇದರ ಮೂಲಕವೂ ಡಿಲೀಟ್ ಆದ ವಾಟ್ಸಪ್ ಮೆಸೇಜ್ ಗಳನ್ನು ನೋಡಬಹುದು. ಆದರೆ ಇವು ತರ್ಡ್ ಪಾರ್ಟಿ ಆ್ಯಪ್ ಗಳು ಆಗಿರುವುದರಿಂದ ನಿಮ್ಮ ವಯಕ್ತಿಕ ಮಾಹಿತಿಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •