ಜೀಕನ್ನಡ ವಾಹಿನಿಯಲ್ಲಿ ನಾ-ಗಿಣಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ನಾ-ಗಿಣಿ ಧಾರಾವಾಹಿಯಲ್ಲಿ ಇವರ ಅಭಿನಯ, ದೀಪಿಕಾ ಧರಿಸುತ್ತಿದ್ದ ಕಾಸ್ಟ್ಯೂಮ್ಸ್, ಆಭರಣಗಳು ಎಲ್ಲವೂ ಕೂಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕೂಡ ಸ್ಪರ್ಧಿಸಿ, ತಮ್ಮ ಡ್ಯಾನ್ಸ್ ಸ್ಕಿಲ್ಸ್ ಇಂದ ಜಡ್ಜ್ ಗಳಿಂದ ಮೆಚ್ಚುಗೆ ಪಡೆದಿದ್ದರು. ಜೊತೆಗೆ ಜೀಕನ್ನಡ ವಾಹಿನಿಯಲ್ಲಿ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿದ್ದರು. ನಂತರ ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಕೂಡ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಇಷ್ಟವಾದರು. ನಿಜ ಜೀವನದಲ್ಲಿ ದೀಪಿಕಾರ ಸ್ವಭಾವ ಎಂಥದ್ದು, ಎಲ್ಲರೊಡನೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರ ಅಭಿಮಾನಿಗಳಿಗೆ ಗೊತ್ತಾಯಿತು. ಇನ್ನೇನು ದೀಪಿಕಾ ಫಿನಾಲೆ ತಲುಪುತ್ತಾರೆ ಎಂದುಕೊಳ್ಳುವಷ್ಟರಲ್ಲಿ, ಎ-ಲಿಮಿನೇಟ್ ಆಗಿದ್ದರು.

ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಗಳಿಸಿರುವ ದೀಪಿಕಾರ ವೈಯಕ್ತಿಕ ಜೀವನದ ಒಂದು ವಿಚಾರ ಎಲ್ಲರಿಗೂ ಆಶ್ಚರ್ಯ ನೀಡುವಂಥದ್ದು. ದೀಪಿಕಾ ದಾಸ್ ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ, ಯಶ್ ಅವರ ಚಿಕ್ಕಮ್ಮನ ಮಗಳು ದೀಪಿಕಾ. ದರೆ ಒಮ್ಮೆ ಕೂಡ ಯಶ್ ನನ್ನ ಅಣ್ಣ ಎಂದು ಮಾಧ್ಯಮದ ಮುಂದೆ ಅಥವಾ ಇನ್ನೆಲ್ಲಿಯೂ ಹೇಳಿಕೊಂಡಿಲ್ಲ. ದೀಪಿಕಾ ದಾಸ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಾಗಲೂ ಕೂಡ ತಾನು ಯಶ್ ತಂಗಿ ಎಂದು ಎಲ್ಲೂ ಹೇಳಿಕೊಳ್ಳದೆ ಬಂದರು. ಈಗ ಕೂಡ ದೀಪಿಕಾ ದಾಸ್ ಅವರು ಯಾವುದೇ ಕಾರ್ಯಕ್ರಮದಲ್ಲಿ, ಸಂದರ್ಶನಗಳಲ್ಲಿ ತಾನು ಯಶ್ ತಂಗಿ ಎಂದು ಹೇಳಿಕೊಳ್ಳುವುದಿಲ್ಲ! ಇದಕ್ಕೆ ಕಾರಣ ಏನು ಗೊತ್ತಾ? ತಿಳಿಯಲು ಮುಂದೆ ಓದಿ..

deepika-yashs-sister

ಯಶ್ ಅವರ ಚಿಕ್ಕಮ್ಮನ ಮಗಳೇ ಆದರೂ ದೀಪಿಕಾ ದಾಸ್ ಎಲ್ಲಿಯೂ ನಾನು ಯಶ್ ತಂಗಿ ಎಂದು ಹೇಳಿಕೊಂಡಿಲ್ಲ, ಇದಕ್ಕೆ ಕಾರಣ ಯಶ್ ನನ್ನ ಅಣ್ಣ ಎಂದು ಹೇಳಿಕೊಂಡು ಅವಕಾಶ ಪಡೆಯುತ್ತಾರೆ ಎಂದು ಜನ ಮಾತನಾಡಿಕೊಳ್ಳುವುದು ದೀಪಿಕಾರಿಗೆ ಇಷ್ಟವಿಲ್ಲ. ಇದಲ್ಲದೆ ತಾನು ಯಶ್ ಅವರ ತಂಗಿ ಎಂದು ಹೇಳಿಕೊಂಡರೆ, ಇಂಡಸ್ಟ್ರಿಯಲ್ಲಿ ಕೆಲವೊಂದು ಜನ ಯಶ್ ಅವರಿಂದ ದೀಪಿಕಾ ದಾಸ್ ಇಷ್ಟೊಂದು ಹೆಸರು ಮಾಡಿದ್ದಾರೆ ಎಂದು ಮಾತಾಡುತ್ತಾರೆ. ಯಶ್ ಹೆಸರು ಹೇಳಿಕೊಂಡು ಅವಕಾಶ ಪಡೆದುಕೊಳ್ಳಲು ಆಕೆಗೆ ಇಷ್ಟವಿಲ್ಲ. ಹಾಗಾಗಿ ಯಶ್ ತಮ್ಮ ಸಂಬಂಧಿ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ದೀಪಿಕಾ. ಯರದ್ದೇ ಹೆಸರು ಹೇಳಿಕೊಂಡು ಬರುವುದರಿಂದ ಯಾವುದೇ ಪ್ರಯೋಜನ ಇಲ್ಲ, ಪ್ರತಿಭೆ ಇದ್ದು ಅದರಿಂದ ಸಾಧಿಸಬೇಕು ಎನ್ನುತ್ತಾರೆ ದೀಪಿಕಾ.

ಇದು ನಿಜಕ್ಕೂ ಒಳ್ಳೆಯ ಸಂಗತಿ. ತಮಗೆ ತಿಳಿದಿರುವ ಯಾರಾದರೂ ಇಂಡಸ್ಟ್ರಿಯಲ್ಲಿ ಇದ್ದರೆ ಅದರ ಉಪಯೋಗ ಪಡೆಯಲು ಪ್ರಯತ್ನಿಸುವವರ ಮ-ಧ್ಯೆ ದೀಪಿಕಾ ಭಿ-ನ್ನವಾಗಿ ನಿಲ್ಲುತ್ತಾರೆ. ಬಿಗ್ ಬಾಸ್ ನಂತರ ಇನ್ನಷ್ಟು ಫೇಮಸ್ ಆಗಿರುವ ದೀಪಿಕಾ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಇವರು, ಅಪ್ಲೋಡ್ ಮಾಡುವ ಫೋಟೋಗಳು ಬಹಳ ವೈ-ರಲ್ ಆಗುತ್ತವೆ. ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ದೀಪಿಕಾ. ಸದ್ಯ ದೀಪಿಕಾ ದಾಸ್ ಅವರು ನಾಗಿಣಿ ಎಂಬ ಧಾರಾವಾಹಿಯಲ್ಲಿ ಬಹಳ ಬ್ಯುಸಿ ಆಗಿದ್ದು, ಸಾಕಷ್ಟು ಸೋಶಿಯಲ್ ಮೀಡಿಯಾ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಕಡೆಯ ಬಾರಿ ದೀಪಿಕಾ ದಾಸ್ ಅವರು ಯಶ್ ಬಗ್ಗೆ ಮಾತಾಡಿದ್ದು KGF ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ! ಅಣ್ಣನ ದೊಡ್ಡ ಸಿನಿಮಾಗೆ ಒಳ್ಳೇದ್ ಆಗಲಿ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು ದೀಪಿಕಾ ದಾಸ್! ದೀಪಿಕಾ ದಾಸ್ ಅವರ ಈ ಸ್ವಾಭಿಮಾನಿ ತಾಣಕ್ಕೆ ನಮ್ಮ ಕಡೆ ಯಿಂದ ಒಂದು ಸಲಾಂ! ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಕಿರುತೆರೆ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •