ಮಣಿಪುರದಲ್ಲಿ ಉಗ್ರರ ದಾಳಿ: ಮೂವರು ಯೋಧರ ವೀರ ಮರಣ, ನಾಲ್ವರಿಗೆ ಗಾಯ.

ಇಂಫಾಲ್: ಈಶಾನ್ಯ ಭಾರತದಲ್ಲಿ ಮತ್ತೊಮ್ಮೆ ಉಗ್ರರು ಭದ್ರತಾಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಮಣಿಪುರದ  ಬಾಂಡೇಲ್ ಜಿಲ್ಲೆಯ ಗಡಿ ಭಾಗದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ ಗೆ ಸೇರಿದ ಮೂವರು  ಯೋಧರು ಹುತಾತ್ಮರಾಗಿದ್ದಾರೆ. ಇತರ ನಾಲ್ಕು ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಉಗ್ರರು ಈ ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಭದ್ರತಾಪಡೆಗಳನ್ನು ರವಾನಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದ್ದು, ಉಗ್ರರಿಗೆ ಸೂಕ್ತ ಪ್ರತ್ಯುತ್ತರ ನೀಡಲು ವ್ಯೂಹ ಹೆಣೆಯಲಾಗಿದೆ.

ಕೇಂದ್ರ ಸರ್ಕಾರದ ಕಟ್ಟು  ನಿಟ್ಟಿನ ಕ್ರಮಗಳಿಂದಾಗಿ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಿತ್ತು. ನೆರೆಯ ಮ್ಯಾನ್ಮಾರ್ ದೇಶದಲ್ಲಿನ ಉಗ್ರರ ಅಡಗುತಾಣಗಳನ್ನು ಕೂಡ ನಾಶಪಡಿಸಲಾಗಿತ್ತು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!