ಸಧ್ಯಕ್ಕೆ ಎಲ್ಲಾ ಕಡೆ ರಾಬರ್ಟ್ ಸಿನಿಮಾ ಅಬ್ಬರ ಹೆಚ್ಚಾಗಿದೆ. ಮಾರ್ಚ್ 11ರಂದು ಮಹಾಶಿವರಾ-ತ್ರಿ ಹಬ್ಬದ ದಿನ ಕರ್ನಾಟಕ ಮತ್ತು ಅಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಗ್ರಾಂಡ್ ಆಗಿ ರಿಲೀಸ್ ಆಗಿ, ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಒಂದೂವರೆ ವರ್ಷಗಳ ನಂತರ ನಟ ದರ್ಶನ್ ಅಭಿನಯದ ಸಿನಿಮಾ ತೆರೆಕಂಡಿದ್ದು, ದರ್ಶನ್ ಅವರನ್ನು ತೆರೆಮೇಲೆ ನೋಡಿ ಅಭಿಮಾನಿಗಳು ಬಹಳ ಥ್ರಿ-ಲ್ ಆಗಿದ್ದಾರೆ. ಕರೊ-ನಾ ಲಾಕ್ ಡೌನ್ ನಂತರ ತೆರೆಕಂಡಿರುವ ಎರಡನೇ ಬಿಗ್ ಬಜೆಟ್ ಸಿನಿಮಾ ಆಗಿದೆ ರಾಬರ್ಟ್.


ರಾಬರ್ಟ್ ಸಿನಿಮಾ ರಿಲೀಸ್ ಆದ ದಿನ, ಹಲವಾರು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ರಾಬರ್ಟ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದರು. ರಾಬರ್ಟ್ ರಿಲೀಸ್ ದಿನ ನಟಿ ರಕ್ಷಿತಾ ಪ್ರೇಮ್ ದರ್ಶನ್ ಅವರ ಬಗ್ಗೆ ಒಂದು ಸೀ-ಕ್ರೆಟ್ ವಿಷಯವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ದರ್ಶನ್ ರಕ್ಷಿತಾ ಬೆಸ್ಟ್ ಫ್ರೆಂಡ್ಸ್ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಇವರಿಬ್ಬರು ಸ್ಯಾಂಡಲ್ ವುಡ್ ನ ಸೂಪರ್ ಜೋಡಿ ಕೂಡ ಹೌದು. ಹಲವಾರು ಸಿನಿಮಾಗಳಲ್ಲಿ ದರ್ಶನ್ ರಕ್ಷಿತಾ ಜೊತೆಯಾಗಿ ನಟಿಸಿದ್ದಾರೆ. ದರ್ಶನ್ ಅವರ ಪ್ರತಿ ಸಿನಿಮಾ ರಿಲೀಸ್ ಆಗುವಾಗಲು ನಟಿ ರಕ್ಷಿತಾ ಶುಭ ಕೋರುತ್ತಾರೆ.

ರಾಬರ್ಟ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತಾ, “ರಾಬರ್ಟ್ ಸಿನಿಮಾಗೆ ಎಲ್ಲೆಡೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಿರ್ದೇಶಕ ತರುಣ್ ಮತ್ತು ದರ್ಶನ್ ಅವರ ಕೆಲಸ ಅದ್ಭುತವಾಗಿದೆ. ” ಎಂದು ಟ್ವೀಟ್ ಮಾಡಿದ್ದಾರೆ ರಕ್ಷಿತಾ. ಜೊತೆಗೆ ದರ್ಶನ್ ಅವರ ಬಗ್ಗೆ ಒಂದು ಸೀ-ಕ್ರೆಟ್ ವಿಷಯವನ್ನ ಬಹಿರಂಗ ಪಡಿಸಿದ್ದಾರೆ. ರಾಬರ್ಟ್ ಸಿನಿಮಾ ಬಿಡುಗಡೆ ಆಗಿದ್ದು ಶಿವರಾ-ತ್ರಿ ಹಬ್ಬದ ದಿನ, ಹಬ್ಬದ ಸಂಭ್ರಮ ಒಂದು ಕಡೆಯಾದರೆ ರಾಬರ್ಟ್ ಸಿನಿಮಾ ರಿಲೀಸ್ ಆದ ಸಂಭ್ರಮ ಮತ್ತೊಂದು ಕಡೆ ಮನೆಮಾಡಿತ್ತು. ಹಬ್ಬದಂದು ದರ್ಶನ್ ಅವರ ಒಂದು ಸೀ-ಕ್ರೆಟ್ ಕುರಿತು ನಟಿ ರಕ್ಷಿತಾ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾರೆ.

ದರ್ಶನ್ ಅವರು ಹು-ಟ್ಟಿದ್ದು ಶಿವರಾ-ತ್ರಿ ಹಬ್ಬದ ದಿನ ಎಂದು ತಿಳಿಸಿದ್ದಾರೆ ನಟಿ ರಕ್ಷಿತಾ. 1977, ಫೆಬ್ರವರಿ 16 ಬುಧವಾರದಂದು ನಟ ದರ್ಶನ್ ಹುಟ್ಟಿದರು. ಅಂದು ಮಹಾಶಿವರಾ-ತ್ರಿ ಆಗಿತ್ತು ಎಂದು ನಟಿ ರಕ್ಷಿತಾ ದರ್ಶನ್ ಅವರ ಹುಟ್ಟುಹಬ್ಬದ ಕುರಿತು ಹೇಳಿದ್ದಾರೆ. ಶಿವರಾ-ತ್ರಿ ಹಬ್ಬದಂದೆ ರಾಬರ್ಟ್ ಸಿನಿಮಾ ಬಿಡುಗಡೆ ಆಗಿರುವುದು ವಿಶೇಷ. ನಟಿ ರಕ್ಷಿತಾ ರಾಬರ್ಟ್ ಸಿನಿಮಾವನ್ನು ಇನ್ನು ವೀಕ್ಷಿಸಿಲ್ಲ. ಆದರೆ ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಬಹಳ ಸಂತೋಷಪಟ್ಟಿದ್ದಾರೆ. ರಾಬರ್ಟ್ ಸಿನಿಮಾ ರೆಸ್ಪಾನ್ಸ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಬೆಸ್ಟ್ ಫ್ರೆಂಡ್ ದರ್ಶನ್ ಅವರಿಗೆ ಶುಭಕೋರಿದ್ದಾರೆ ನಟಿ ರಕ್ಷಿತಾ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •