ಕೆಲ ದಿನಗಳ ಹಿಂದಷ್ಟೇ ಜಗ್ಗೇಶ್ ಅವರು ನಿರ್ಮಾಪಕರೊಬ್ಬರ ಜೊತೆ ದರ್ಶನ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ತೋತಾಪುರಿ ಸಿನಿಮಾ ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರನ್ನು ದರ್ಶನ್ ಅವರ ಅಭಿಮಾನಿಗಳು ಮುತ್ತಿಗೆ ಹಾಕಿ ಅವರಿಂದ ಕ್ಷಮೆ ಕೇಳಿಸಿದ್ದರು.. ಆನಂತರ ಒಂದು ದಿನದ ಬಳಿಕ ಜಗ್ಗೇಶ್ ಅವರು ಆಕ್ರೋಶ ಹೊರ ಹಾಕಿದ್ದರು.. ನಾನು ರವಿಚಂದ್ರನ್ ಶಿವಣ್ಣ ಎಲ್ಲಾ ಹೋದ್ಮೇಲೆ ಏನ್ ಮಾಡ್ತೀರಾ.. ದರ್ಶನ್ ಜೊತೆಲಿದ್ದ ಹುಡುಗರೇ ಬಂದು ನನ್ನ ಮುತ್ತಿಗೆ ಹಾಕಿ ಆ ರೀತಿ ನಡೆದುಕೊಂಡ್ರಿ.. ಹಿರಿಯ ನಟ ಅಂತ ಸ್ವಲ್ಪನಾದರು ಬೆಲೆ ಬೇಡವಾ ಎಂದೆಲ್ಲಾ ಹೇಳಿಕೊಂಡಿದ್ದರು..
Darshan

ಆದರೆ ಆ ಬಳಿಕ ದರ್ಶನ್ ಅವರು ತಮ್ಮ ಅಭಿಮಾನಿಗಳು ನಡೆದುಕೊಂಡ ರೀತಿಗೆ ಜಗ್ಗೇಶ್ ಅವರ ಬಳಿ ಕ್ಷಮೆ ಕೇಳಿದರು ಎನ್ನಲಾಗಿತ್ತು.. ಅಂತಹ ಸಮಯದಲ್ಲಿ ಪ್ರಬುದ್ಧರಾಗಿ ಯೋಚಿಸಿ ಜಗ್ಗೇಶ್ ಅವರ ಮೇಲೆ ಕೋಪಗೊಂಡಿದ್ದ ಅಭಿಮಾನಿಗಳನ್ನು ಶಾಂತರನ್ನಾಗಿಸಿದ್ದರು..

ಇನ್ನು ಆ ವಿಚಾರವಾಗಿ ದರ್ಶನ್ ಅವರು ಅಷ್ಟಕ್ಕೇ ಸುಮ್ಮನಾಗಬಹುದಿತ್ತು.. ಆದರೆ ಇಂದೂ ಸಹ ಜಗ್ಗೇಶ್ ಅವರ ವಿಚಾರವಾಗಿ ನಡೆದುಕೊಂಡ ರೀತಿ ದರ್ಶನ್ ಅವರ ದೊಡ್ಡಗುಣವನ್ನು ತೋರುತ್ತದೆ.. ದರ್ಶನ್ ಅವರು ಇಂದು ಜಗ್ಗೇಶ್ ಅವರ ವಿಚಾರದಲ್ಲಿ ಮಾಡಿದ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಹೌದು ಇಂದು ಜಗ್ಗೇಶ್ ಅವರ ಹುಟ್ಟುಹಬ್ಬ.. ದರ್ಶನ್ ಅವರು ಹಳೆಯ ಯಾವುದೇ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಇಂದು ಜಗ್ಗೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.. ಅದರಲ್ಲೂ ಜಗ್ಗೇಶ್ ಅವರನ್ನು ಅಣ್ಣ ಎನ್ನುವ ಮೂಲಕ ತಮ್ಮ‌ ಮನಸ್ಸಿನಲ್ಲಿ ಯಾವುದೇ ಬೇಸರವಿಲ್ಲ ಎಂಬುದನ್ನು ತೋರಿದ್ದಾರೆ.. ಹೌದು ಇಂದು ಜಗ್ಗೇಶ್ ಅವರ ಹುಟ್ಟುಹಬ್ಬವಿದ್ದ ಕಾರಣ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ “ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ..” ಎಂದು ಬರೆದು ಪೋಸ್ಟ್ ಮಾಡಿದ್ದು ಕೆಲವೇ ನಿಮಿಷಗಳಲ್ಲಿ ದರ್ಶನ್ ಅವರ ಪೋಸ್ಟ್ ಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಜಗ್ಗೇಶ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.. ಇನ್ನೂ ಕೆಲವರು ಇದೇ ಕಾರಣಕ್ಕೆ.. ಇದೇ ರೀತಿಯ ದೊಡ್ಡ ಗುಣಕ್ಕೆ ದರ್ಶನ್ ಅವರು ಹೆಚ್ಚು ಇಷ್ಟವಾಗೋದು ಎಂದು ಕಮೆಂಟ್ ಮಾಡಿದ್ದಾರೆ..

ಇನ್ನು ಇಂದು ಜಗ್ಗೇಶ್ ಅವರ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವೂ ಸಹ ಹೌದು.. ಪುನೀತ್ ರಾಜ್ ಕುಮಾರ್ ಅವರಿಗೂ ಸಹ ದರ್ಶನ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ “ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ರಾಜ್ ಕುಮಾರ್.. ಶುಭವಾಗಲಿ” ಎಂದು ಬರೆದು ಶುಭಾಶಯ ತಿಳಿಸಿದ್ದಾರೆ.. ಕಲಾವಿದರೆಂದೂ ಸ್ಯಾಂಡಲ್ವುಡ್ ಎಂಬ ಒಂದೇ ಕುಟುಂಬದ ಸದಸ್ಯರು.. ಅವರೆಲ್ಲರೂ ಅನ್ಯೂನ್ಯವಾಗಿಯೇ ಇರುತ್ತಾರೆ.. ಸುಮ್ಮನೆ ಅವರ ಹೆಸರುಗಳಲ್ಲಿ ಅಭಿಮಾನಿಗಳು ಸ್ಟಾರ್ವಾರ್ ಮಾಡುವುದು ಕಡಿಮೆಯಾಗಬೇಕಷ್ಟೇ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •