ಜೀವನ ಅಂದರೇನೇ ಒಂತರಾ ವಿಚಿತ್ರ. ಅದಕ್ಕೆ ಹಿರಿಯರು ಹೇಳುತ್ತಾರೆ ಯಶಸ್ಸು ಸಿಕ್ಕಾಗ ಹಿಗ್ಗಬೇಡ, ಫೇಲ್ಯೂರ್ ಆದಾಗ ನಿರಾಶನಾಗಬೇಡ ಎಂದು. ಈ ಮಾತಿಗೆ ನಿದರ್ಶನವಾಗಿದ್ದಾರೆ ಈ ನಟಿ. ಅದೇ ರೀತಿ ಇಲ್ಲೊಬ್ಬರು ನಟಿ ಕೇವಲ ಒಂದೇ ಒಂದು ಹಾಡಿನಿಂದ ಸಿಕ್ಕಾಪಟ್ಟೆ ಹೆಸರು ಬಂತು. ಒಂದೇ ದಿನದಲ್ಲಿ ಟಾಪ್ ನಟಿಯಾಗಿಬಿಟ್ಟಳು. ಇನ್ನು ಸ್ಯಾಂಡಲ್ವುಡ್ ನಲ್ಲಿ ಕೂಡ ನಟಿಸಿರುವ ಆ ನಟಿಯೇ ಮುಮೈತಾ ಖಾನ್. ಇವರ ಡ್ಯಾನ್ಸ್ ನೋಡಿ ಕೇವಲ ಪ್ರೇಕ್ಷಕರು ಮಾತ್ರವಲ್ಲದೆ ನಿರ್ಮಾಪಕರು ಕೂಡ ಫಿದಾ ಆಗಿದ್ದರು. ಈ ನಟಿಗೆ ಎಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಯಿತು ಎಂದರೆ ಇವರ ಒಂದು ಕಾಲ್ ಶೀಟ್ ಗಾಗಿ ತಿಂಗಳ ಗಟ್ಟಲೆ ಕಾಯುವಷ್ಟು.

 

 

ಇನ್ನು ಒಂದು ದಿನವೂ ಫ್ರೀ ಇಲ್ಲದೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಳು ನಟಿ ಮುಮೈತಾ ಖಾನ್. ಆದರೆ ಇದೆ ಸಮಯದಲ್ಲಿ ಸರಿಯಾದ ಯೋಜನೆಗಳನ್ನ ಮಾಡಿಕೊಳ್ಳದ ಮುಮೈತಾ ಖಾನ್ ತಾನು ಪ್ರೀತಿಸುತ್ತಿದ್ದ ಪ್ರಿಯತಮನಿಗೋಸ್ಕರ ನೀರಿನಂತೆ ಹಣವನ್ನ ಖರ್ಚು ಮಾಡಿದ್ಲು. ಇದು ಎಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಗಿತ್ತು ಎಂದರೆ ತನ್ನ ಬಾಯ್ ಫ್ರೆಂಡ್ ಗೆ ಇಷ್ಟ ಆಗುವ ತರ ಬರೋಬ್ಬರಿ ೪೦ ಲಕ್ಷ ಕೊಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು.

 

 

ಇದೆಲ್ಲದರ ಜೊತೆಗೆ ಐಷರಾಮಿ ಜೀವನ ಬೇರೆ. ಇನ್ನು ಸ್ಯಾಂಡಲ್ವುದು ಸೇರಿದನಂತೆ ಟಾಲಿವುಡ್ ನಲ್ಲಿ ಕೂಡ ಹೊಸ ನಟಿಯರ ಆಗಮನವಾಯಿತು. ಇದರಿಂದ ನಟಿ ಮುಮೈತಾ ಖಾನ್ ಅವಕಾಶಗಳು ಇಲ್ಲದಾಯಿತು. ಮನುಷ್ಯನಿಗೆ ಕಷ್ಟ ಬಂದಾಗ, ಹತ್ತಿರವಿದ್ದವರು ಕೂಡ ದೂರವಾಗುತ್ತಾರೆ ಎಂಬಂತೆ ಆಕೆಯ ಪ್ರಿಯತಮ ಕೂಡ ಕೈ ಕೊಡುತ್ತಾನೆ.’

 

 

ಇನ್ನು ಐಷಾರಾಮಿ ಜೀವನಕ್ಕೆ ಹೊಂದಿಕೊಂಡಿದ್ದ ಈ ನಟಿ ಜೀವನ ನಡೆಸುವುದೇ ಕಷ್ಟವಾಗುತ್ತಾ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ ವಿಧಿಯಿಲ್ಲದೇ ಆಂಧ್ರದ ಹಳ್ಳಿಯೊಂದರಲ್ಲಿ ನಡೆದ ಜಾತ್ರೆಯೊಂದರಲ್ಲಿ ರೆಕಾರ್ಡ್ ಡಾನ್ಸ್ ಮಾಡಲಿಕ್ಕೆ ಒಪ್ಪಿಕೊಂಡಾ ಈ ನಟಿ ಜನರ ಮಧ್ಯೆ ಡಾನ್ಸ್ ಮಾಡುವ ಸ್ಥಿತಿ ಎದುರಾಯಿತು. ಅದಕ್ಕೆ ಹೊಳೋದು ನಾವು ಚೆನ್ನಾಗಿ ದುಡಿಯುತ್ತಿರುವಾಗ ನಮ್ಮ ಮುಂದಿನ ಜೀವನಕ್ಕೆಂದು ಸ್ವಲ್ಪ ಹಣವನ್ನಾದರೂ ಉಳಿಸಿ ಇಡಬೇಕು.

 

 

ಅದರಲ್ಲೂ ನಟಿ ನಟಿಯರ ಜೀವನ ಅಷ್ಟೊಂದು ಸುಲಭವಲ್ಲ. ಏಕೆಂದರೆ ಅವರು ನಟಿಸುವ ಒಂದೇ ಒಂದೇ ಚಿತ್ರ ಅವರನ್ನ ಸ್ಟಾರ್ ಮಾಡುತ್ತದೆ, ಇಲ್ಲವೇ ಅವರ ಮೇಲೆ ಏಳಲು ಆಗದಂತೆ ಅವರ ಸಿನಿಮಾ ಜೀವನವನ್ನೇ ನಾಶ ಮಾಡಿಬಿಡಬಹುದು. ಸ್ನೇಹಿತರೇ, ನಟಿ ಮುಮೈತಾ ಖಾನ್ ಡಾನ್ಸ್ ಮಾಡಿದ ಕನ್ನಡದ ಯಾವ ಚಿತ್ರ ನಿಮಗೆ ಇಷ್ಟ ಎಂದು ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •