ನಮ್ಮ ಜೀವನದಲ್ಲಿ ಬಹಳ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ ಎಂದರೆ ಅದು ‘ಹೋಳಿ ಹಬ್ಬ’ದ ದಿನ.. ಈ ವಿಶೇಷವಾದ ದಿನದಂದು ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ಪ್ರತಿಯೊಬ್ಬರಿಗೂ ಕೂಡ ವಿಶೇಷವಾದ ಸಂತೋಷವನ್ನು ವಿಶೇಷವಾದ . ಬಣ್ಣ ಬಣ್ಣದಿಂದ ಬಹಳ ವರ್ಣರಂಜಿತವಾದ ಈ ಹೋಳಿ ಹಬ್ಬದಲ್ಲಿ ಪ್ರತಿಯೊಬ್ಬರೂ ಕೂಡ ಪರಸ್ಪರ ತಮ್ಮ ಬದುಕಿನ ಸಂತೋಷವನ್ನು ಹಂಚಿಕೊಳ್ಳುತ್ತಾರೆ.

ಆದರೆ ಈ ವಿಭಿನ್ನವಾದ ಹಬ್ಬದ ಆಚರಣೆಯನ್ನು ಕೇವಲ ಭಾರತ ಹಾಗೂ ನೇಪಾಳದಲ್ಲಿ ಮಾತ್ರ ಆಚರಿಸುತ್ತಿದ್ದು, ಈ ಹಬ್ಬವೂ ಪವಿತ್ರವಾದ ಧಾರ್ಮಿಕ ಹಿನ್ನೆಲೆಯನ್ನು ಕೂಡ ಒಳಗೊಂಡಿದೆ. ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಪುರಣಾಕಾಲದಿಂದಲೂ ಮಾನವೀಯತೆ ಭಾವನೆಯಿಂದ ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು,ಏಕತೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುತ್ತದೆ.

ವಿವಿಧ ಬಣ್ಣಗಳೊಂದಿಗೆ ಆಚರಿಸಲ್ಪಡುವ ಈ ಹೋಳಿ ಹಬ್ಬವೂ ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಹೋಳಿ ಹಬ್ಬ. ಇನ್ನು ಈ ಹಬ್ಬದದಿದಂದು ನಗರಗಳಲ್ಲಿ ಎಲ್ಲಾ ಜನರು ಒಟ್ಟುಗೂಡಿ ಬಣ್ಣವನ್ನು ಹಚ್ಚುತ್ತಾ ಸಂಭ್ರಮ ಪಾಡುತ್ತಾರೆ. ಈಗಿನ ಕಾಲದಲಂತು ಪ್ರತಿಯೊಂದನ್ನು ಕಾಲೇಜಿನಲ್ಲೂ ಕೂಡ ಈ ಹಬ್ಬವನ್ನು ಆಚರಿಸಲಾಗುತ್ತಾದೆ. ಇದರ ಜೊತೆಗೆ ಕೆಲ ಪುಂಡರು ರಸ್ತೆಯಲ್ಲಿ ಯಾರೇ ಕಂಡರು ಕೂಡ ಅವರಿಗೆ ಬಣ್ಣಗಳನ್ನು ಹಚ್ಚು ದಂದಲೇ ಮಾಡುತ್ತಾರೆ.

ಹೆಣ್ಣು ಮಕ್ಕಳಿಗಂತು ಉದ್ದೇಶಪೂರ್ವಕವಾಗಿ ಹಚ್ಚಿ ಅವರಿಂದ ಬೈಸಿಕೊಳ್ಳುವುದು ಉಂಟು. ಕಾರಣ ಎಲ್ಲರಿಗೂ ಈ ಬಣ್ಣದ ಹಬ್ಬ ಇಷ್ಟವಾಗುವುದಿಲ್ಲ. ಇದನ್ನೆ ಮನಸ್ಸನಲ್ಲಿಟ್ಟುಕೊಂಡ ಕೆಲವರು ಯೂಟ್ಯೂಬ್ ರ್ ಗಳು ಜನರಿಗೆ ಮನರಂಜನೆ ನೀಡಲು ಹೋಳಿ ಪ್ರಾಂಕ್ ವಿಡಿಯೋ ಮಾಡಿದ್ದಾರೆ. ಕಾಲಿ ಬಕಿಟ್ ಇಟ್ಟುಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ಯುವತಿಯರಿಗೆ ಬಣ್ಣದ ನೀರನ್ನು ಎರೆಯಲು ಬಂದಾಗ ಯುವತಿಯರು ಓಡುವ ಪರಿ ಹಾಗೂ ಬೇಡಿಕೊಳ್ಳುವ ಪರಿ ನಗುತರಿಸುತ್ತಿದೆ. ಈ ವಿಡಿಯೋದಲ್ಲಿ ಇದನ್ನು ವೀಕ್ಷಿಸಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •