ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಪ್ರೇಮಲೋಕ ಸಿನಿಮಾ ನಿರ್ದೇಶನ ಮಾಡಿದ ನಂತರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಆ ವೇಳೆಗೆ ಕನ್ನಡ ಚಿತ್ರರಂಗದಲ್ಲಿ ಅಂತಹ ಸಂಚಲನ ಉಂಟು ಮಾಡುವಂತಹ ಸಿನಿಮಾಗಳು ತೆರೆ ಮೇಲೆ ಬಂದಿರಲಿಲ್ಲ. ಅಂದಿನ ಯುವಕರೆಲ್ಲರೂ ಪ್ರೇಮಲೋಕ ಸಿನಿಮಾದ ಫ್ಯಾನ್‌ ಆಗಿಬಿಟ್ಟಿದರು. ರವಿಚಂದ್ರನ್‌ ಅವರನ್ನು ಸಿನಿಮಾದಲ್ಲಿ ನೋಡಿಯೇ ಅದೆಷ್ಟೋ ಜನ ಪ್ರೇಮ ವಿವಾಹವನ್ನೂ ಮಾಡಿಕೊಂಡಿದ್ದರು. ಅಲ್ಲದೇ ಅವರ ರೀತಿಯಲ್ಲೇ ಪ್ರೀತಿ ಮಾಡುವುದನ್ನೂ ಕಲಿತಿದ್ದರು.

 

ಒಟ್ಟಾರೆ ಇಡೀ ಕನ್ನಡ ಸಿನಿಮಾರಂಗದಲ್ಲಿ ಹೊಸ ಇತಿಹಾಸವನ್ನು ಬರೆದವರು ರವಿಚಂದ್ರನ್‌ ಎಂಬುದರ್ಲಲಿ ಎರಡು ಮಾತಿಲ್ಲ. ಅವರ ಕಲ್ಪನಾ ಶೈಲಿ, ಅದ್ಧೂರಿ ಸೆಟ್ಗಳು, ಒಂದು ಚಿತ್ರಕ್ಕಿಂತ ಮತ್ತೊಂದು ಚಿತ್ರದಲ್ಲಿ ವಿಭಿನ್ನವಾದ ಕಥೆಗಳು ಹೀಗೆ ಅವರ ಪ್ರತಿಯೊಂದು ಶೈಲಿಯನ್ನೂ ಅಂದಿನ ಯುವಕರು ಚಾಚೂ ತಪ್ಪದೇ ಅನುಕರಿಸುತ್ತಿದ್ದರು. ಆ ಕಾಲದ ಹುಡುಗರ ಫೇವರೇಟ್‌ ರೋಮಿಯೋ ಆಗಿದ್ದರು ರವಿಚಂದ್ರನ್‌ ಅವರು.

 

 

ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಪ್ರೀತಿಸುವ ಸೀನ್‌ಗಳೇ ಇರುತ್ತಿದ್ದವು. ಎಲ್ಲಾ ಪ್ರೀತಿ, ಪ್ರೇಮವನ್ನು ಹಸಿ ಹಸಿಯಾಗಿ ತೆರೆ ಮೇಲೆ ತೋರಿಸುತ್ತಿದ್ದರು. ಇದಕ್ಕೆ ಹಳ್ಳಿಮೇಷ್ಟ್ರು ಸಿನಿಮಾ ಕೂಡ ಹೊರತಾಗಿರಲಿಲ್ಲ. ಹ‍ಳ್ಳಿಮೇಷ್ಟ್ರು ಸಿನಿಮಾದಲ್ಲಿ ನಟಿ ವಿಂದ್ಯಾ ಹೆಸರಿನ ನಾಯಕಿ ರವಿಚಂದ್ರನ್‌ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಕೆಯ ನಿಜವಾದ ಹೆಸರು ಫರ್ಹೀನ್. ಇವರು ಹಿಂದಿ ಚಿತ್ರದ ಜಾಂತಿರೇನಾ ಚಿತ್ರದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು.

 

ಇವರು ನೋಡಲು ಹಿಂದಿ ಚಿತ್ರರಂಗದ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಹೋಲುತ್ತಿದ್ದರಿಂದ ಇವರನ್ನು ನೋಡಿದವರು ಮರುಳಾಗದವರೇ ಇಲ್ಲ. ಹಾಗಾಗಿಯೇ ರವಿಚಂದ್ರನ್‌ ಅವರು ತಮ್ಮ ಹಳ್ಳಿಮೇಷ್ಟ್ರು ಸಿನಿಮಾಕ್ಕೆ ವಿಂದ್ಯಾ ಎಂಬ ಹೆಸರಿನ ಮೂಲಕ ನಾಯಕಿಯನ್ನಾಗಿ ಪರಿಚಯ ಮಾಡಿಸಿದರು. ಈಕೆ ವಿಷ್ಣುವರ್ಧನ್‌ ಅವರ ಜೊತೆಗೆ ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ನಟನೆ ಮಾಡುವ ಈ ನಟಿ ಚಿತ್ರೀಕರಣದ ವೇಳೆ ಮಾತ್ರ ಆಗಾಗ ಕಿರಿಕ್‌ ಮಾಡುವ ಚಾಳಿಯನ್ನು ಹೊಂದಿದ್ದರು.

 

 

ಇದು ವಿಪರೀತಕ್ಕೆ ಹೋಗಿ ರವಿಚಂದ್ರನ್‌ ಅವರು ತನ್ನ ಮೇಲೆ ಅತ್ಯಾಚಾರ ಪ್ರಯತ್ನ ಮಾಡಿದರು ಎಂದು ಆರೋಪ್‌ ಮಾಡಿಬಿಟ್ಟಳು. ಈಗಾಗಲೇ ರವಿಚಂದ್ರನ್‌ ಅವರ ತಂದೆ ವೀರಸ್ವಾಮಿ ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕರಾಗಿದ್ದರು. ಹಾಗಾಗಿ ಸಹಜವಾಗಿಯೇ ರವಿಚಂದ್ರನ್‌ ಅವರಿಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಹಾಗಾಗಿ ಲಕ್ಷಾಂತರ ಜನರ ಮುಂದೆ ತನ್ನ ಮಾನವನ್ನು ಕಳೆದ ಕಾರಣಕ್ಕಾಗಿ ಆಕೆಯ ವಿರುದ್ಧ ೧ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು.

 

 

ವಿಂದ್ಯಾ ಸಲುವಾಗಿ ರವಿಚಂದ್ರನ್‌ ಅವರು ಮೊದಲ ಬಾರಿಗೆ ಕೋರ್ಟ್‌ ಮೆಟ್ಟಿಲು ಹತ್ತುವಂತಾಯಿತು.
ಆದರೆ ಕೋರ್ಟ್‌ ನಲ್ಲಿ ತೀರ್ಪು ಮಾತ್ರ ರವಿಚಂದ್ರನ್‌ ಅವರ ಪರವಾಗಿ ಬಂದಿದ್ದರಿಂದ ಎಲ್ಲರ ಎದುರಿಗೆ ವಿಂದ್ಯಾ ಅವರು ರವಿಚಂದ್ರನ್‌ ಅವರನ್ನು ಕ್ಷಮೆ ಯಾಚಿಸಿದರು. ಈ ಘಟನೆ ನಡೆದ ನಂತರ ಆಕೆಯ ಬಾಲಿವುಡ್‌ ಅಥವಾ ಸ್ಯಾಂಡಲ್‌ ವುಡ್‌ ನಲ್ಲಿಯೂ ನಟಿಸಲು ಅವಕಾಶ ಸಿಗಲಿಲ್ಲ.

ಹಾಗಾಗಿ ಅವರು ಅಂದಿನ ಖ್ಯಾತ ಕ್ರಿಕೆಟರ್‌ ಮನೋಜ್‌ ಪ್ರಭಾಕರ್‌ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದರು. ಮನೋಜ್‌ ಅವರು ಈಗಾಗಲೇ ಮದುವೆ ಮಾಡಿಕೊಂಡಿದ್ದರು.ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಫರ್ಹೀನ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಪ್ರಸ್ತುತ ಅವರು ದೆಹಲಿಯಲ್ಲಿ ವಾಸವಾಗಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •