ಮಧುಮೇಹ ಎಂದಾಕ್ಷಣ ಕೆಲವರಲ್ಲಿ ಅಳುಕಿನ ಭಾವ ಎದುರಾಗುತ್ತದೆ. ಇದರಿಂದ ತಮ್ಮ ಜೀವನವೇ ಮುಗಿದ ಹಾಗೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇನ್ನು ಕೆಲವರು ಅನೇಕ ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಾ ನರಳುತ್ತಿರುತ್ತಾರೆ. ತಾವು ಸೇವಿಸುವ ಔಷಧಿಗಳಿಂದ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗಿ ಅನೇಕ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಾಣವು ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಪ್ರಾಕೃತಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗುವ ಸುಲಭದ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಿದೆ.

ಮೆಂತೆ ಸೊಪ್ಪು ಹೆಚ್ಚಾಗಿ ಸೇವಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ಮೆಂತೆ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಟೈಪ್ 2 ಮಧುಮೇಹಿಗಳಿಗೆ ಇದು ಉತ್ತಮ ಪರಿಹಾರವಾಗಿದ್ದು ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣವನ್ನು ಜೀವಕೋಶಗಳು ಹೀರಿಕೊಳ್ಳಲು ನೆರವಾಗುತ್ತದೆ. ಮೆಂತೆಸೊಪ್ಪಿನ ದೋಸೆ, ಸಾರು ಹಾಗೂ ಮೆಂತೆಕಾಳುಗಳನ್ನು ನೆನೆಸಿ ಅರೆದು ಸೇರಿಸಿ ಮಾಡಿದ ಖಾದ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಕಂಡುಕೊಳ್ಳಬಹುದು.

ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಗಂಟೆ ಮೊದಲು ಕುಡಿಯಬೇಕು.

ಮಧುಮೇಹ: ಖಾಲಿಹೊಟ್ಟೆಯಲ್ಲಿ ಸಕ್ಕರೆ ಪರೀಕ್ಷೆ ಏಕೆ ಮುಖ್ಯ? | Vartha Bharati- ವಾರ್ತಾ ಭಾರತಿ

ಒಣ ಹಣ್ಣುಗಳು ಒಣ ಹಣ್ಣುಗಳು “ನಿಧಾನವಾಗಿ ಜೀರ್ಣವಾಗುವ” ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ. ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ

ಬೆಂಡೆಕಾಯಿ ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •