ಇದೀಗ ಎಲ್ಲೆಡೆ ಬಿಗ್ ಬಾಸ್ ಮನೆಯ ಸುದ್ದಿಗಳು. ಹೌದು ನಿನ್ನೆತಾನೆ ಅಷ್ಟೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೋರ್ವ ಸ್ಪರ್ಧಿಯ ಆಗಮನವಾಗಿದೆ. ಹೌದು ವಿಶೇಷ ಅವಕಾಶದ ಮೂಲಕ ಬಿಗ್ ಬಾಸ್ ಮನೆಗೆ ಈಗ ಹೊಸ ಸ್ಪರ್ಧಿಯೊಬ್ಬರು ಕಾಲಿಟ್ಟಿದ್ದಾರೆ. ಇನ್ನು ಇವರನ್ನು ನೋಡಿದ ಉಳಿದ ಬಿಗ್ ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದು, ಅದರಲ್ಲಿ ಪ್ರಶಾಂತ್ ಸಂಬರ್ಗಿ ಅವರು ತುಂಬಾನೆ ಶಾಕ್ ಆಗಿದ್ದಾರೆ. ಹೌದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದ ವ್ಯಕ್ತಿಯನ್ನು ನೋಡಿ ಮನೆ ಮಂದಿಯೆಲ್ಲ ಬೆಚ್ಚಿಬಿದ್ದಿದೆ. ಹಾಗಾದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಸ್ಪರ್ದಿ ಯಾರು? ಅವರನ್ನು ನೋಡಿ ಪ್ರಶಾಂತ್ ಸಂಬರ್ಗಿ ಶಾಕ್ ಆಗಿದ್ದಕ್ಕೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಇದೀಗ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ಆ ಮೂಲಕ ಬಂದವರು ಚಕ್ರವರ್ತಿ ಚಂದ್ರಚೂಡ್. ಇವರು ವೃತ್ತಿಯಲ್ಲಿ ಬರಹಗಾರರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹೀಗೆ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಆಶ್ಚರ್ಯವೆಂದರೆ ಇವರು ನಟಿ ಶ್ರುತಿ ಅವರೊಂದಿಗೆ ಎರಡನೇ ಮದುವೆಯಾದ ವ್ಯಕ್ತಿ. ಹೌದು ನಟಿ ಶ್ರುತಿ ಹಾಗೂ ಮಹೇಂದ್ರ ಅವರು ಇಬ್ಬರು ಬೇರೆಯಾದ ನಂತರ ಚಕ್ರವರ್ತಿ ಅವರು ನಟಿ ಶ್ರುತಿ ಅವರನ್ನು ಎರಡನೇ ಮದುವೆಯಾಗಿದ್ದರು. ಇನ್ನು ನಟಿ ಶ್ರುತಿ ಅವರು ಮಹೇಂದ್ರ ಅವರನ್ನು ಬಿಟ್ಟು ಚಕ್ರವರ್ತಿಯವರ ಜೊತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ವಿಚಿತ್ರ ಏನೆಂದರೆ ಚಕ್ರವರ್ತಿ ಚಂದ್ರಚುಡ್ ಅವರಿಗೆ ಕೂಡ ನಟಿ ಶ್ರುತಿ ಅವರೊಂದಿಗೆ ಎರಡನೆಯ ಮದುವೆಯಾಗಿತ್ತು. ಇನ್ನು ಚಕ್ರವರ್ತಿಯವರು ಮೊದಲ ಹೆಂಡತಿ ಮಂಜುಳಾ ಅವರ ಒಪ್ಪಿಗೆ ಇಲ್ಲದೆ ನಟಿ ಶ್ರುತಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೇ ಕಾರಣಕ್ಕಾಗಿ ಮಂಜುಳಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಂತರದಲ್ಲಿ ನಟಿ ಶ್ರುತಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರು ಕೋರ್ಟಿಗೆ ಹಾಜರಾಗಿ ತಮ್ಮ ಮದುವೆ ಅಸಿಂಧು ಮಾಡಿಕೊಂಡರು. ಇದೇ ಕಾರಣಕ್ಕಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಇನ್ನು ಎರಡು ಮದುವೆಯ ನಂತರ ಮತ್ತೊಂದು ಮದುವೆಗೆ ಚಕ್ರವರ್ತಿ ಚಂದ್ರಚೂಡ್ ಅವರು ಪ್ರಯತ್ನಿಸಲಿಲ್ಲ.

ಹೀಗೆ ವೈವಾಹಿಕ ಜೀವನದಲ್ಲಿ ಎರಡು ಬಾರಿ ಸೋತ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಹೇಳಿಕೊಂಡಿದ್ದಾರೆ. ಇನ್ನು ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರ್ಗಿ ಅವರಿಗೆ ಮೊದಲಿನಿಂದಲೂ ಸ್ನೇಹವಿದೆ. ಚಕ್ರವರ್ತಿ ಚಂದ್ರಚೂಡ್ ಅವರಿಗೆ ಪ್ರಶಾಂತ್ ಸಂಬರ್ಗಿ ಅವರ ಎಲ್ಲ ವಿಚಾರಗಳು ಗೊತ್ತಿವೆ. ಈ ಹಿಂದೆ ಚಕ್ರವರ್ತಿ ಚಂದ್ರಚೂಡ್ ಅವರು ಬರೆದ ಕಥೆ ಸಿನಿಮಾ ಆಗುತ್ತಿತ್ತು. ಇನ್ನು ಈ ಸಿನಿಮಾವನ್ನು ಪ್ರಶಾಂತ್ ಸಂಬರ್ಗಿ ಅವರೇ ನಿರ್ಮಾಣ ಮಾಡುತ್ತಿದ್ದರು. ಆದರೆ ಸರಿಯಾಗಿ ನಿರ್ದೇಶಕರು ಇಲ್ಲದೆ ಈ ಸಿನಿಮಾದ ಚಿತ್ರೀಕರಣ ಮಾಡಲಾಗಲಿಲ್ಲ. ಅಷ್ಟೇ ಅಲ್ಲದೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದ ಚಕ್ರವರ್ತಿ ಚಂದ್ರಚೂಡ್ ಅವರು ಉಳಿದ ಸ್ಪರ್ಧಿಗಳಿಗೆ ಅಂಕಗಳನ್ನು ಕೂಡ ನೀಡಿದ್ದಾರೆ.

ಹೌದು ಚಕ್ರವರ್ತಿ ಚಂದ್ರಚೂಡ್ ಅವರು ಉಳಿದ ಸ್ಪರ್ಧಿಗಳಿಗೆ ಅಂಕಗಳನ್ನು ನೀಡಿದ್ದು, ಶಂಕರ ಅಶ್ವತ್ ಅವರಿಗೆ ಸೊನ್ನೆ, ರಾಜೀವ್ ಅವರಿಗೆ ಒಂದು, ಶುಭಾ ಪೂಂಜಾ ಅವರಿಗೆ 2,  ವಿಶ್ವನಾಥ್ ಮತ್ತು ಶಮಂತ್ ಅವರಿಗೆ ಅರ್ಧ ಹೀಗೆ ಪ್ರತಿಯೊಬ್ಬ ಸ್ಪರ್ಧಿಗೆ ಅಂಕ ನೀಡಿದ್ದು, ಇವರಿಗೆ ಮಾತ್ರ ಎರಡು ಅಂಕದ ಒಳಗೆ ಅಂಕ ನೀಡಿದ್ದಾರೆ. ಇನ್ನು ಅಂಕವನ್ನು ತಿಳಿದ ಈ ಸ್ಪರ್ಧಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಏನೇ ಆಗಲಿ ಇದೀಗ ಬಂದ ಚಕ್ರವರ್ತಿ ಚಂದ್ರಚೂಡ ಅವರ ಸುದ್ದಿ ಬಿಗ್ ಬಾಸ್ ಮನೆಯಲ್ಲಿ ಹರಿದಾಡಲಿದೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •