ಕಾಂಗ್ರೆಸ್ ನಲ್ಲಿದ್ದ ನಟಿ ಭಾವನ ಬಿಜೆಪಿ ಕದ ತಟ್ಟಲು ಕಾರಣ ರಮ್ಯಾರಂತೆ ! ಹೌದು ಭಾವನಾಗೆ ರಮ್ಯಾ ಟಿಕೆಟ್ ತಪ್ಪಿಸಿರೋದೇ ಬಿ ಎಸ್ ಯಡಿಯೂರಪ್ಪ ಮನೆಗೆ ಬೇಟಿ ನೀಡಲು ಕಾರಣ. ಹೀಗಂತ ಭಾವನಾಗೆ ಕರೆ ಮಾಡಿದ ಕಾಂಗ್ರೆಸ್ ಅಭಿಮಾನಿಗಳಿಗೆ ಭಾವನಾರೇ ಹೇಳಿದ್ದಾರಂತೆ.

ಭಾವನಾ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಭಾವನ ದಿನ ಬೆಳಗಾದರೆ ಕಾವೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಿತ್ತು.

Congress

ಜನಾಶೀರ್ವಾದ ಯಾತ್ರೆಗೆ ಬಂದ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ನಟಿ ಭಾವನ ಸ್ವಲ್ಪ ಹೆಚ್ಚೇ ಮಿಂಚಿದ್ದಾರೆ. ಅಲ್ಲಿಂದ ನಂತರ ಭಾವನಾರವರು ರಮ್ಯಾರವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಲ್ಲೆಲ್ಲಿ ಅಡ್ಡಗಾಲಿಡಬೇಕೋ ಅಲ್ಲಲ್ಲಿ ಅಡ್ಡಗಾಲಿಕ್ಕಿದ್ದಾರಂತೆ.

ಇಷ್ಟಾದರೂ ಸಹಿಸಿಕೊಂಡಿದ್ದರೂ ಭಾವನಾರಿಗೆ ಘಾಸಿಯಾಗಿದ್ದು ಟಿಕೆಟ್ ವಿಚಾರ. ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದ ಭಾವನಾ ಹೆಸರು ಸ್ಕ್ರೀನಿಂಗ್ ಕಮಿಟಿಯವರೆಗೂ ಹೋಗಿತ್ತು. ಕೊನೆಗೆ ಟಿಕೆಟ್ ಕೈ ತಪ್ಪಿದೆ. ಟಿಕೆಟ್ ಕೈ ತಪ್ಪಿದ್ದು ಬೇಜಾರಿಲ್ಲ. ಟಿಕೆಟ್ ತಪ್ಪಿಸಿದ್ದು ರಮ್ಯಾ ಎಂದು ಗೊತ್ತಾಗುತ್ತಲೇ ಭಾವನಾ ಕಾಂಗ್ರೆಸ್ಸಿನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ.

Congress

ಇದಿಷ್ಟು ಭಾವನರವರು ಬಿ ಎಸ್ ಯಡಿಯೂರಪ್ಪ ಮನೆಗೆ ಬೇಟಿ ನೀಡಲು ನಿಜವಾದ ಕಾರಣವಾದರೂ ಇದನ್ನು ಅಧಿಕೃತಗೊಳಿಸಬೇಕಾದವರು ನಟಿ ಭಾವನ. ಸುದ್ದಿ ಸಮಗ್ರವು ಈ ಬಗ್ಗೆ ನಟಿ ಭಾವನಾರನ್ನು ಸಂಪರ್ಕಿಸಲು ಯತ್ನಿಸಿ ವಿಫಲವಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •