ಇತ್ತಿಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಸಿನಿ ಇಂಡಸ್ಟ್ರಿ ಯಲ್ಲಿ ಕೇಳಿ ಬರುತ್ತಲೇ ಇವೆ, ಚಿತ್ರದಲ್ಲಿ ಒಂದು ಹೆಣ್ಣು ನಟನೆ ಮಾಡಬೇಕು ಎಂದರೆ, ಅವಕಾಶಕ್ಕಾಗಿ ಕೆಲ ನಿರ್ಮಾಪಕರು ನಟಿ ಆಗಬೇಕು ಎಂಬ ಕನಸು ಹೊತ್ತ ಹೆಣ್ಣುಮಕ್ಕಳನ್ನು, ಅನುಭವಿಸಬೇಕು ಎಂಬ ಕಾಮದ ಆಸೆಯಂತೆ, ಕೆಲವು ಷರತ್ತುಗಳನ್ನು ಹಾಕುವುದು. ಮಾಮೂಲಿ ಹಾಗೆ, ಈ ತರ ಘಟನೆಯು ಎಲ್ಲಾ ಇಂಡಸ್ಟ್ರಿ ಯಲ್ಲಿ ನಡೆಯುತ್ತವೇ ಎಂದರೆ ತಪ್ಪಾಗುತ್ತದೆ, ಹೌದು ಕೆಲ ನಿರ್ಮಾಪಕರು ಈ ರೀತಿ ಮಾಡುತ್ತಾರೆ…   

ಕೆಲವು ತಿಂಗಳ ಹಿಂದೆ ಸದ್ದು ಮಾಡಿದ್ದ ಮೀಟೂ ಅಭಿಯಾನ ಮತ್ತೆ ಮುಂದುವರೆದಿದ್ದು, ಈ ಬಾರಿ ಇತ್ತ, ನಟಿ ಶೃತಿ ಮರಾಠೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೇ ‘ಕಾಂಪ್ರಮೈಸ್’, ‘ಒನ್ ನೈಟ್’ ಪದ ಬಳಕೆ ಮಾಡಿದ್ದ ನಿರ್ಮಾಪಕನ ತಲೆ ತಿರುಗಿ ನಿಲ್ಲುವಂತೆ ಪ್ರತ್ಯುತ್ತರ ಕೊಟ್ಟ, ಆ ಹೆಮ್ಮೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.  

ಇದರ ಬಗ್ಗೆ ನಟಿ ಶೃತಿ ಮರಾಠೆ ಹ್ಯೂಮನ್ಸ್ ಆಫ್ ಬಾಂಬೇ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಚಿತ್ರವೊಂದರ ನಿಮಿತ್ತ ನಾನು ನಿರ್ಮಾಪಕರೊಂದಿಗೆ ಮಾತನಾಡುತ್ತಿದ್ದೆ. ಆ ಸಮಯದಲ್ಲಿ ಇಬ್ಬರ ಮಾತು ಸಿನಿಮಾ ಕುರಿತಾಗಿಯೇ ಇತ್ತು, ತದನಂತರ ಬಳಿಕ ಇದ್ದಕ್ಕಿದ್ದ ಹಾಗೆ ಅತ್ತ ನಿರ್ಮಾಪಕರು ಈ ‘ಕಾಂಪ್ರಮೈಸ್’, ‘ಒನ್ ನೈಟ್’ ನಂತಹ ಪದ ಹೇಳಲು ಆರಂಭಿಸಿದರು . ಆ ಸಮಯದಲ್ಲಿ ಇವರು ಏನು ನನ್ನಲ್ಲಿ ಆಸೆ ಪಡುತ್ತಿರಬಹುದು ಎಂದು ನನಗೆ ತಿಳಿಯಿತು..ಅಲ್ಲದೆ ಈ ಚಿತ್ರ ನಾನು ನಟಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಬಿಟ್ಟೆ..

Actress-Shruti-Marathe

ತದನಂತರದಲ್ಲಿ ಅವರು ಕೇಳಿದ ಆ ಎರಡು ಮಾತಿನ ಶೈಲಿಗೆ ಉತ್ತರ ಕೊಟ್ಟೆ ಬರಬೇಕು ಎಂದು ತಿಳಿದು, ನಿರ್ಮಾಪಕನಿಗೆ ತಿರುಗೇಟು ನೀಡುವ ಉದ್ದೇಶದಿಂದ “ಈ ಚಿತ್ರದ ನಾಯಕಿಯಾದ ನಾನು ನಿರ್ಮಾಪಕರಾದ ನಿಮ್ಮೊಂದಿಗೆ ಮಲಗಬೇಕು ಸರಿ. ಮತ್ತು ಹಾಗಾದರೆ ಚಿತ್ರದ ನಾಯಕ ನಟ ಯಾರೋಂದಿಗೆ ಮಲಗಬೇಕು ಎಂದು ತಿರುಗೇಟು ನೀಡಿದ್ದೆ. ನಾನು ನೀಡಿದ ಉತ್ತರಕ್ಕೆ ಆ ನಿರ್ಮಾಪಕ ಸ್ಥಬ್ಧವಾಗಿದ್ದ. ಅಂದು ನಾನು ಬೇಕಿದ್ದರೆ ಏನೂ ಹೇಳದೆ ಬರ ಬಹುದಿತ್ತು. ಆದರೆ ನಾನು ಎಲ್ಲ ಹೆಣ್ಣು ಮಕ್ಕಳ ಪರವಾಗಿ, ಹೆಣ್ಣಿನ ಮೇಲೆ ಆಗುವ ಇಂಥ ಎಷ್ಟೋ ಶೋಷಣೆ ಗೆ, ಇಂತಹ ಕಾಮ ಇರೋ ಸ್ವಲ್ಪ ನಿರ್ಮಾಪಕರಿಗೆ, ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಆ ರೀತಿ ಉತ್ತರ ಕೊಟ್ಟು ಬಂದೆ ಎಂದ ನಟಿ ಶ್ರುತಿ ಅವರು..

ಅಂತೆಯೇ ನಾನು ಒಂದು ಚಿತ್ರದಲ್ಲಿ ಬಿಕಿನಿ ಹಾಕಿ ನಟನೆ ಮಾಡಿದ್ದೆ. ಅದು ಕೇವಲ ಅವಕಾಶಕ್ಕಾಗಿ ಮಾತ್ರ ಅದನ್ನು ಬಿಟ್ಟು ಬೇರೆ ಯಾವ ಉದ್ದೇಶದಿಂದ ಆ ರೀತಿ ಬಟ್ಟೆ ಹಾಕುವುದಿಲ್ಲ, ಅದು ಅಲ್ಲದೇ ಅದು ಅವರ ಪರಿಸ್ಥಿತಿ ಗೆ ಆ ರೀತಿ ಇರುತ್ತಾರೆ ಸುಮ್ಮನೆ ಟ್ರೋಲ್ ಮಾಡಿ ಹೆಣ್ಣು ಮಕ್ಕಳ ಮನಸಿಗೆ ನೋವು ಉಂಟು ಮಾಡಬೇಡಿ ಎಂದು ಹೇಳುತ್ತಾ ಈ ವಿಚಾರವನ್ನು ಹಂಚಿಕೊಂಡರು ನಟಿ ಶ್ರುತಿ ಅವರು, ಈ ಮಾಹಿತಿ ತಪ್ಪದೇ ಶೇರ್ ಮಾಡಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •