Osita Him

ಫೇಮಸ್ ಆಗಿರುವ ಕಾಮಿಡಿ ಕುಳ್ಳನ ಆದಾಯ ಕೇಳಿದರೆ ನಿಮ್ಮ ತಲೆ ತಿರುಗುತ್ತೆ!ಎಷ್ಟು ಗೊತ್ತಾ

Home

ಈ ಪ್ರಪಂಚದಲ್ಲಿ ಪ್ರತಿಭೆ ಇರುವ ಅದೆಷ್ಟೋ ಕಲಾವಿದರಿದ್ದಾರೆ. ಹಣ ಇರುವವರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಕೆಲಸ ಕಷ್ಟವಲ್ಲ. ಹಣವಿದ್ದರೆ ಪ್ರತಿಭೆ ಪ್ರದರ್ಶಿಸಲು ಯಾವುದಾದರೂ ಒಂದು ವೇದಿಕೆ ಸಿಗುತ್ತದೆ. ಆದರೆ ಬಡತನದ ಕುಟುಂಬದಲ್ಲಿ ಜನಿಸಿದ ಅದೆಷ್ಟೋ ಪ್ರತಿಭೆಗಳು ಹಣ ಇಲ್ಲದ ಕಾರಣ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಾಗದೆ ಕಣ್ಮರೆಯಾಗಿದ್ದಾರೆ. ಇಂತಹ ಪರಿಸ್ಥಿತಿ ಕೆಲ ವರ್ಷಗಳ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು ಇರುವುದರಿಂದ ಎಲ್ಲರೂ ಕೂಡ ತಮ್ಮ ಪ್ರತಿಭೆಯನ್ನು ಸುಲಭವಾಗಿ ಪ್ರದರ್ಶಿಸಬಹುದು. ಹೀಗೆ ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದು ಅವಕಾಶ ಪಡೆದುಕೊಂಡು ಕಲಾವಿದರ ಬಗ್ಗೆ ಇತ್ತೀಚೆಗೆ ನಾವು ಕೇಳಿರುತ್ತೇವೆ. ಅಂತಹ ಒಂದು ಒಸೀಟ ಹಿಮ್. ಇವರು ಮೂಲತಃ ನೈಜೀರಿಯಾದವರು. ಈ ಯುವಕನ ಹೆಸರು ನಿಮಗೆ ತಿಳಿದಿಲ್ಲದೆ ಹೋದರೂ, ಇವರ ಮುಖ ಪರಿಚಯ ನಿಮಗೆಲ್ಲರಿಗೂ ಇರುತ್ತದೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಯಾವುದೇ ಸೋಶಿಯಲ್ ಮೀಡಿಯಾ ಆಪ್ ತೆಗೆದರು ಇವರ ಫೋಟೋ ಮತ್ತು ವಿಡಿಯೋಗಳು ಬರುತ್ತವೆ. ಇವರ ಫೋಟೋ ಉಪಯೋಗಿಸಿ ಹಲವಾರು ಮೀಮ್ ಗಳನ್ನು ಕೂಡ ಮಾಡಲಾಗಿದೆ.

ಇಂದು ಇಷ್ಟು ಜನಪ್ರಿಯತೆ ಪಡೆದಿರುವ ಈತ ಈ ಮಟ್ಟಕ್ಕೆ ಏರಿದ ಹಾದಿ ಸುಲಭವಾಗಿರಲಿಲ್ಲ. ಬಹಳ ಬಡ ಕುಟುಂಬದಲ್ಲಿ ಜನಿಸಿದ ಒಸೀಟ ಹಿಮ್ ಅವರ ಪ್ರಸ್ತುತ ವಯಸ್ಸು 38 ವರ್ಷಗಳು. ಆದರೆ ಇವರ ದೇಹ ಬೆಳವಣಿಗೆ ಆಗಿಲ್ಲ. ಇಂದಿಗೂ ಕೂಡ ಚಿಕ್ಕ ಹುಡುಗನ ಹಾಗೆ ಇದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೂ ಕೂಡ ಸಾಕಷ್ಟು ಜನ ಇವರನ್ನು ಗೇ-ಲಿ ಮಾಡಿದ್ದರು, ನೀನು ಭೂ-ಮಿಗೆ ಭಾರ, ನಿನ್ನಿಂದ ಏನು ಪ್ರ-ಯೋಜನವಿಲ್ಲ ಎಂದು ಹೇಳಿದ್ದರು. ಆದರೆ ಈ ಮಾತುಗಳಿಂದ ಛಲ ಬಿಡದ ಈತ ಇಂದು ಆ ಎಲ್ಲಾ ಮಾತುಗಳನ್ನು ಸು-ಳ್ಳು ಮಾಡಿದ್ದಾನೆ.

Osita Him

ಸುಮಾರು 15 ರಿಂದ 20 ವರ್ಷದ ಹಿಂದೆಯೇ ಕಾಮಿಡಿ ವಿಡಿಯೋಗಳನ್ನು ಮಾಡಲು ಶುರು ಮಾಡಿದ್ದರು ಒಸೀಟ ಹಿಮ್. ಈತನ ಕಾಮಿಡಿ ವಿಡಿಯೋಗಳು ನೈಜೀರಿಯಾದಲ್ಲಿ ವೈ-ರಲ್ ಆಗಲು ಶುರುವಾದವು. ಅಲ್ಲಿ ಇವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿದರು. ಈ ಜನಪ್ರಿಯತೆಯಿಂದ 200ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತು. ಇಂದು ಇಂಟರ್ನ್ಯಾಷನಲ್ ಸ್ಟಾರ್ ಆಗಿದ್ದಾರೆ ಒಸೀಟ ಹಿಮ್ . ಇಂದು ಈತನ ವಾರ್ಷಿಕ ಆದಾಯ ಸರಿಸುಮಾರು 28 ಕೋಟಿ. ಒಂದು ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೆ ಬಹಳ ಸಂತೋಷ ಪಡುತ್ತಿದ್ದ ಹುಡುಗ ಈತ. ಆದರೆ ಇಂದು ಸ್ಟಾರ್ ಗಳಷ್ಟೇ ಜನಪ್ರಿಯತೆ ಪಡೆದು ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ.

ವಿಡಿಯೋಗಳಲ್ಲಿ ಈತನ ಜೊತೆ ಇರುವ ಮತ್ತೊಬ್ಬ ಹುಡುಗ ಕೂಡ ಬಹಳ ಪ್ರತಿಭಾನ್ವಿತ. ಆತನು ಕೂಡ ಒಳ್ಳೆಯ ಹಣ ಗಳಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಒಸೀಟ ಹಿಮ್ ಅವರ ವಿಡಿಯೋಗಳು ಆರಂಭದಲ್ಲಿ ಹೆಚ್ಚಿನ ವೀಕ್ಷಣೆ ಪಡೆಯುತ್ತಿರಲಿಲ್ಲ. ಆದರೆ ಈಗ ಇವರ ವಿಡಿಯೋಗಳಿಗೆ ಕೋಟಿಗಟ್ಟಲೆ ವೀಕ್ಷಣೆಗಳಾಗುತ್ತವೆ. ಇದರಿಂದಲೇ ಸಾಕಷ್ಟು ಹಣ ಗಳಿಸುತ್ತಾನೆ ಒಸೀಟ ಹಿಮ್. ತಾನು ಬೆಳೆದು ತನ್ನ ಜೊತೆಗಿರುವವರನ್ನು ಸಹ ಬೆಳೆಸಿದ್ದಾನೆ. ನಟನೆಯ ಜೊತೆಗೆ ಹಲವಾರು ಸಿನಿಮಾಗಳಿಗೆ ಬಂಡವಾಳ ಹೂಡಿ, ನಿರ್ಮಾಣ ಕೂಡ ಮಾಡಿದ್ದಾನೆ. ನನ್ನಿಂದ ಏನು ಸಾಧ್ಯವಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ನಮ್ಮಲ್ಲಿ ಯಾವ ಪ್ರತಿಭೆ ಇದೆ ಎಂಬುದನ್ನು ಅರಿತು, ಅದರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಿಗುವುದು ಖಂಡಿತ ಎಂಬುದಕ್ಕೆ ಉದಾಹರಣೆ ಈತ.

ಇಂತಹ ಇನ್ನಷ್ಟು ಅಪರೂಪದ ಇಂಟೆರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...