ದೇಹದಲ್ಲಿ ಸ್ವಲ್ಪ ಏನಾದ್ರು ಹೆಚ್ಚು ಕಡಿಮೆ ಆದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬುದಾಗಿ ಗೊತ್ತಾಗುತ್ತದೆ ಅಲ್ಲದೆ ಕೆಲವೊಮ್ಮೆ ಯಾವುದೇ ಅನಾರೋಗ್ಯ ಸಮಸ್ಯೆ ಕಂಡು ಹಿಡಿಯಲು ವೈದ್ಯರೇ ಕೆಲವೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಬನ್ನಿ ಎಂಬುದಾಗಿ ಹೇಳುತ್ತಾರೆ ಹೌದು ಮೂ ತ್ರ ಪರೀಕ್ಷೆ, ರಕ್ತ ಪರೀಕ್ಷೆ ಇವುಗಳ ಆಧಾರದ ಮೇಲೆ ವೈದ್ಯರು ಇಂತಹ ಕಾಯಿಲೆ ರೋಗ ಇದೆ ಅನ್ನೋದನ್ನ ಹೇಳುತ್ತಾರೆ.

ಹಾಗೆಯೆ ಮೂ ತ್ರದ ಬಣ್ಣವನ್ನು ತಿಳಿದು ನಮ್ಮ ಅರೋಗ್ಯ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳಬಹುದು ಅದು ಹೇಗೆ ಅನ್ನೋದನ್ನ ಮುಂದೆ ನೋಡಿ, ಮಲ ಮೂತ್ರದ ಮೂಲಕ ಕೂಡ ಆರೋಗ್ಯವನ್ನು ತಿಳಿದುಕೊಳ್ಳಬಹುದು ಎಂಬುದಾಗಿ ಹೇಳುತ್ತಾರೆ ತಜ್ಞರು.ಮೂತ್ರದ ಬಣ್ಣ ಏನಾದ್ರು ತಿಳಿ ಹಳದಿ ಬಣ್ಣದಲ್ಲಿ ಇದ್ರೆ ಅದು ಸಾಮಾನ್ಯವಾಗಿ ನಾರ್ಮಲ್ ಎಂಬುದಾಗಿ ಹೇಳಲಾಗುತ್ತದೆ. ಇದರಿಂದ ಮನುಷ್ಯನ ಅರೋಗ್ಯ ಚನ್ನಾಗಿದೆ ಅನ್ನೋದನ್ನ ತಿಳಿದುಕೊಳ್ಳಬಹುದು.

ಇನ್ನು ಎರಡನೆಯದಾಗಿ ಮೂತ್ರ ನೀರಿನ ಬಣ್ಣದಲ್ಲಿ ಇದ್ರೆ ನಿಮ್ಮ ಶರೀರಕ್ಕೆ ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದಾಗಿ ಅಂದರೆ ನೀವು ಹೆಚ್ಚು ನೀರು ಕುಡಿಯುತ್ತಿದ್ದಿರಿ ಎಂಬುದಾಗಿ ತಿಳಿಯಲಾಗುತ್ತದೆ. ಆ ಸಂದರ್ಭದಲ್ಲಿ ಕಡಿಮೆ ನೀರು ಕುಡಿದರೂ ನಡೆಯುತ್ತದೆ. ಅರೋಗ್ಯ ಚನ್ನಾಗಿದೆ ಎಂದರ್ಥ.ಮೂರನೆಯದಾಗಿ ಡಾರ್ಕ್ ಹಳದಿ ಬಣ್ಣದಲ್ಲಿ ಮೂತ್ರ ಇದ್ರೆ: ದೇಹದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಎಂದರ್ಥ ಆಗಾಗಿ ನೀವು ನೀರು ಕುಡಿಯುವುದನ್ನು ಹೆಚ್ಚು ಮಾಡಬೇಕಾಗುತ್ತದೆ.ನಾಲ್ಕನೆಯದಾಗಿ ಮೂತ್ರದ ಬಣ್ಣ ಜೇನಿನ ಬಣ್ಣದಲ್ಲಿದ್ದರೆ ದೇಹಕ್ಕೆ ಬೇಕಾದಷ್ಟು ನೀರು ಸಿಗುತ್ತಿಲ್ಲ ಎಂಬುದನ್ನು ತಿಳಿಯಲಾಗುತ್ತದೆ ಆದುದರಿಂದ ಹೆಚ್ಚು ನೀರು ಕುಡಿಯಿರಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಐದನೆಯದಾಗಿ ನಿಮ್ಮ ಬಣ್ಣ ಏನಾದ್ರು ನಸು ಕಂದು ಬಣ್ಣವನ್ನು ಹೊಂದಿದ್ದರೆ ಲಿವರ್ ಸಮಸ್ಯೆ ಇರುವ ಸಾಧ್ಯತೆ ಇದೆ ತುಂಬಾ ಕಡಿಮೆ ಪ್ರಮಾಣದಲ್ಲಿ ನೀರಿನ ಸೇವನೆ ಮಾಡುತ್ತಿದ್ದೀರಿ ಎಂದು ಅರ್ಥ, ವೈದ್ಯರನ್ನು ತಕ್ಷಣ ಕಾಣುವುದು ಉತ್ತಮ ಹಾಗು ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು.ಇನ್ನು ಕೊನೆಯದಾಗಿ ಮೂತ್ರದ ಬಣ್ಣ ಕೆಂಪು ಗುಲಾಬಿ ಬಣ್ಣ ಹೊಂದಿದ್ದರೆ ಕೆಲವೊಮ್ಮೆ ಕಿಡ್ನಿ ಸಮಸ್ಯೆ, ಮೂತ್ರ ನಾಳದ ಸೋಂಕು, ಟ್ಯೂಮರ್ ಲಕ್ಷಣ ಕೂಡ ಆಗಿರುವ ಸಾಧ್ಯತೆ ಇರುತ್ತದೆ ವೈದ್ಯರನ್ನು ಭೇಟಿ ನೀಡುವುದು ಒಳ್ಳೆಯದು. ಒಟ್ಟಾರೆಯಾಗಿ ಮನುಷ್ಯನ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಿದೆ ಆದ್ದರಿಂದ ಹೆಚ್ಚು ನೀರು ಸೇವನೆ ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •