ಮನುಷ್ಯ ತಾನು ಮಾಡುವ ಕೆಲಸದ ಮೇಲೆ ಪ್ರೀತಿ, ಬದುಕಿನಲ್ಲಿ ಒಂದು ನಿರ್ಧಿಷ್ಟವಾದ ಗುರಿ ಇದ್ರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎಂಬುವುದಕ್ಕೆ ನಾವು ಹಲವು ನಿದೆರ್ಶನಗಳನ್ನು ನಿಮಗೆ ಹೇಳಿದ್ದೀವಿ, ಇವತ್ತು ಕೂಡ ಅಂತಹದ್ದೇ ಒಂದು ಬದುಕಿಗೆ ಅಗತ್ಯ ಹಾಗೂ ಅವಶ್ಯವಿರುವ ಸ್ಪೂರ್ತಿದಾಯಕವಾದ ಕಥೆ ಹೇಳ್ತೀವಿ. ಇವತ್ತಿನ ನಮ್ಮ ಕಥಾ ನಾಯಕಿ ಅಪ್ಪನಿಗಾಗಿ ಬದುಕಿನಲ್ಲಿ ಗುರಿ ಇಟ್ಟುಕೊಂಡು, ಅಪ್ಪನಿಗೋಸ್ಕರ ಗುರಿಯನ್ನು ರೀಚ್ ಆಗಲೇಬೇಕು ಅಂತ ಧೃಢ ಸಂಕಲ್ಪ ಮಾಡಿಕೊಂಡು ಗುರಿಯನ್ನು ತಲುಪಿದ ದಿಟ್ಟ ಮಹಿಳೆಯ ಕತೆಯಿದು. ಅಂದಹಾಗೇ ನಮ್ಮ ಕಥಾನಾಯಕಿಯ ಹೆಸರು ರೋಹಿಣಿ ಭಾಜೀ. ಈಕೆ ಮೂಲತಃ ಮಹಾರಾಷ್ಟ್ರದವರು, ಚಿಕ್ಕ ವಯಸ್ಸಿನಿಂದಲೇ ಅತಿಯಾಗಿ ಆ್ಯಕ್ಟೀವ್ ಆಗಿದ್ರು, ಓಟ, ಪಾಠಗಳೆರೆಡರಲ್ಲಿಯೂ ಸಹ ಮುಂಚೂಣಿಯಲ್ಲಿದ್ದರು.

ಒಂದು ದಿನ ರೋಹಿಣಿ ದಣಿದ ತನ್ನಪ್ಪನನ್ನು ನೋಡಿ ಏನಾಯ್ತು ಯಾಕಿಷ್ಟು ಸುಸ್ತಾಗಿದ್ಯಾ ಅಂತ ಪ್ರಶ್ನಿಸ್ತಾರೆ, ಆಗ ಆಕೆಯ ಅಪ್ಪ ಹೇಳಿದ ಆ ಮಾತೇ ಇವತ್ತು ರೋಹಿಣಿಯವರು ಒಬ್ಬ ಉತ್ತಮ ದಕ್ಷ ಐಎಎಸ್ ಆಫೀಸರ್ ಆಗಲು ಮೂಲ ಕಾರಣವಾಯ್ತು, ಅಷ್ಟಕ್ಕೂ ಅವರಪ್ಪ ಏನು ಹೇಳಿದ್ರು ಗೊತ್ತಾ? ರೋಹಿಣಿಯವರ ತಂದೆ ವೃತ್ತಿಯಲ್ಲಿ ಕೃಷಿಕನಾಗಿದ್ರು, ಅವರದೇ ಆದ ಒಂದಷ್ಟು ಎಕರೆ ಜಮೀನುಗಳು ಇದ್ದವು. ಜಮೀನಿಗೆ ಸಂಬಂಧಪಟ್ಟ ಯೋಜನೆಗಳ ಫಲಾನುಭವಿಯಾಗಲಿಕ್ಕೆ ಅವರು ನಿತ್ಯವೂ ಕಲೆಕ್ಟರ್ ಆಫೀಸಿನ ಬಳಿ ಓಡಾಡ್ತಾ ಇರುತ್ತಾರೆ, ಬಹುಷಃ ನಿಮಗೆಲ್ಲ ಗೊತ್ತಿರಬೇಕು ಒಂದು ವಿಚಾರಕ್ಕೆ, ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳ ಸಹಿ ಹಾಕಿಸಿಕೊಳ್ಳೊದು ಬಹಳ ಕಷ್ಟವಾದ ಕೆಲಸ..

ಇದಂತು ಕಲೆಕ್ಟರ್ ಸೈನ್ ಅಂದ್ರೆ ಸಿಕ್ಕಾಪಟ್ಟೆ ಅಲೆಯಬೇಕಾದ ಪರಿಸ್ಥಿತಿ ಹಲವೆಡೆಯಿದೆ, ಇದೇ ಪರಿಸ್ಥಿತಿಯನ್ನು ರೋಹಿಣಿ ಅವರ ತಂದೆ ಸಹ ಅನುಭವಿಸಿದ್ರು, ಇದನ್ನೇ ಅವರು ಮಗಳ ಬಳಿ ಹೇಳಿಕೊಂಡ್ರು. ಆಗಿನಿಂದಲೂ ತಾನೊಬ್ಬ ಐಎಎಸ್ ಅಧಿಕಾರಿಯಾಗಬೇಕು, ನನ್ನಪ್ಪನಂತೆ ಜನರು ಸರ್ಕಾರಿ ಅಧಿಕಾರಿಗಳ ಸಹಿಗೆ ಪರದಾಡಬಾರದು ಅಂತ ರೋಹಿಣಿ ಚಿಕ್ಕವಯಸ್ಸಿನಲ್ಲಿ ಅಂದುಕೊಂಡಿರ್ತಾಳೆ. ಹಾಗೆಯೇ ಮುಂದೆ ಇಂಜಿನಿಯರಿಂಗ್ ಮಾಡಿ ನಂತರ ಯುಪಿಎಸ್​​ಸಿ ಪರೀಕ್ಷೆ ಬರೆಯುತ್ತಾರೆ, ಈ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಪಡೆಯದೇ ಯಾರ ಸಹಾಯವನ್ನು ಪಡೆಯದೇ ಸ್ವಯಂ ಅಭ್ಯಸಿಸುತ್ತಾರೆ. ಮುಂದೆ ಕಷ್ಟಪಟ್ಟು ಓದಿ ಉತ್ತೀರ್ಣಳಾಗಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರೆ.

ಮುಂದೆ ಈಕೆ ಮಾಡಿದ ಸಾಧನೆ ಎಂತದ್ದದ್ದಂದ್ರೆ ತಮಿಳುನಾಡಿನಲ್ಲಿ 170 ಜನ ಪುರುಷ ಐಎಎಸ್ ಅಧಿಕಾರಿಗಳ ಮಧ್ಯೆ ಒಬ್ಬಳೇ ಒಬ್ಬಳು ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗ್ತಾಳೆ, ಇದು ಎಷ್ಟೋ ಜನ ಹೆಣ್ಣುಮಕ್ಕಳಿಗೆ ಸಹ ಪ್ರೇರಣೆಯಾಗಿದೆ.
ನಂತರ ತನ್ನ ಆಸೆಯಂತೆ ಬಡವರಿಗೆ, ಅಸಹಾಯಕರಾಗಿ ನೆರಳಾಗಿ ಬಡಬಗ್ಗರು ಸರ್ಕಾರಿ ಕಚೇರಿಗಳಿಗೆ ಸುಖಾಸುಮ್ಮನೆ ಅಲೆದಾಡುವುದನ್ನ ನಿಲ್ಲಿಸಲು ಅಗತ್ಯ ಕ್ರಮ ಸಹ ಕೈಗೊಳ್ತಾರೆ.

ಒಬ್ಬ ಸಾಮನ್ಯ ಹೆಣ್ಣುಮಗಳು ತನ್ನಪ್ಪನಿಗಾಗಿ, ಬದುಕಿನಲ್ಲಿ ಒಂದು ಗುರಿಯಿಟ್ಟು ಆ ಗುರಿಯನ್ನು ರೀಚ್ ಆದ ಪರಿಯೇ ಇನ್ಸಿಪಿರೇಷನಲ್..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •