ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುವ ರತ್ನ ಸಿನಿಮಾ ಬಿಡುಗಡೆಯಾದ ಮೊದಲ ಕೆಲವು ದಿನಗಳ ಕಾಲ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಕೇವಲ ಬೆರಳೆಣಿಕೆಯ ದಿನಗಳಲ್ಲಿ ಥಿಯೇಟರ್ ವೀಕ್ಷಕರ ಸಂಖ್ಯೆಯನ್ನು ಶೇಕಡ 50 ಕ್ಕೆ ಇಳಿಸಲಾಗಿತ್ತು, ಇದಾದ ಬಳಿಕ ಕನ್ನಡ ಚಿತ್ರರಂಗ ಒಗ್ಗೂಡಿ ಮಾಡಿದ ಮನವಿಗೆ ಶೇಕಡ ನೂರರಷ್ಟು ಜನರಿಗೆ ಮತ್ತಷ್ಟು ದಿನಗಳ ಕಾಲಾವಕಾಶ ನೀಡಲಾಗಿತ್ತು.

ಆದರೆ ಶೇಕಡಾ ಐವತ್ತರಷ್ಟು ಹಾಸನ ಬರ್ತಿ ಅವಕಾಶವಿದ್ದರೂ ಕೂಡ ಯುವರತ್ನ ಸಿನಿಮಾವನ್ನು 28 ಕೋಟಿ ಗಳಿಗೆ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಮೆಜಾನ್ ಪ್ರೈಮ್ ನಲ್ಲಿಯೂ ಕೂಡ ಯುವ ರತ್ನ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇಂತಹ ಸಂದರ್ಭದಲ್ಲಿ ಬಿಡುಗಡೆಯಾದ ದಿನದಿಂದಲೂ ಕೂಡ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಕಲೆಕ್ಷನ್ ಕುರಿತು ಹೊರ ಹಾಕಿರಲಿಲ್ಲ, ಆದರೆ ಇದೀಗ ಪಕ್ಕ ಬಲ್ಲಮೂಲಗಳಿಂದ ಚಿತ್ರದ ಕಲೆಕ್ಷನ್ ಹೊರ ಬಂದಿದ್ದು, ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ ಅಂದರೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುವ ಮುನ್ನ ಯುವ ರತ್ನ ಸಿನಿಮಾ ಕೇವಲ 30 ಕೋಟಿ ಗಳಿಸಿದ್ದು ಎಂಬುದು ತಿಳಿದು ಬಂದಿದೆ. ಪೊಗರು ನಲವತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದರೇ ರಾಬರ್ಟ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಎರಡು ಚಿತ್ರಗಳ ಕಲೆಕ್ಷನ್ ಮೀರಿಸುವಲ್ಲಿ ಯುವರತ್ನ ಸಿನಿಮಾ ಥಿಯೇಟರ್ ಗಳಲ್ಲಿ ವಿಫಲವಾಗಿದೆ, ಆದರೆ ಅಮೆಜಾನ್ ಪ್ರೈಮ್ ಮೊತ್ತವನ್ನು ಕುಡಿದರೆ ಯುವರತ್ನ ಸಿನಿಮಾ ಪೊಗರು ಚಿತ್ರವನ್ನು ಮೀರಿಸಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •