ಈಗಾಗಲೇ ಕೊರೊನಾದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.. ಅದರಲ್ಲೂ ಮದ್ಯಮ ವರ್ಗದ ಜನರ ಜೀವನವಂತೂ ಹೇಳಲು ಅಸಾಧ್ಯ.. ಅದಾಗಲೇ ಬಹಳಷ್ಟು ಜನ ಇದ್ದ ಚೂರು ಪಾರು ಒಡವೆಯನ್ನು ಕೂಡ ಮಾರಿಕೊಂಡಿದ್ದಾರೆ.. ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ.. ಸದ್ಯ ಇತ್ತೀಚೆಗೆ ಜೀವನ ಸ್ವಲ್ಪ ಸುಧಾರಣೆಯಾಗುತ್ತಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯದಲ್ಲಿ ದೀಪಾವಳಿ ಹಬ್ಬ ಬಂದಿದೆ.. ಸರಳವಾಗಿಯಾದರೂ ದೀಪಾವಳಿ ಆಚರಿಸಿ ಕವಿದಿರುವ ಕತ್ತಲನ್ನು ಹೋಗಲಾಡಿಸೆಂದು ಜನರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.. ಆದರೆ ಸರಳವಾಗಿ ಹಬ್ಬ ಆಚರಣೆ ಮಾಡಲು ಸಹ ಸಾರಿಗೆ ನೌಕರರಿಗೆ ತೊಂದರೆಯಾಗಿದೆ..

ಹೌದು ಸಾರಿಗೆ ನೌಕರರಿಗೆ ಇನ್ನೂ ಸಹ ಸಂಬಳವಾಗಿಲ್ಲ.. ಸಂಬಳವಿಲ್ಲದ ಕಾರಣ ಮನೆಯಲ್ಲಿ ಮಕ್ಕಳಿಗೆ ಹೊಸ ಬಟ್ಟೆಯಾಗಲಿ ಅಥವಾ ಮತ್ತೊಂದಾಗಲಿ ಕೊಡಿಸಲು ಕಷ್ಟ ಪಡುವಂತಾಗಿದೆ.. ಹೊಸ ಬಟ್ಟೆ ಕೇಳಿದರೆ ಸಂಬಳವಾಗಿಲ್ಲ ಎಂದು ಅಪ್ಪ ಹೇಳುವ ಮಾತುಗಳಿಂದ ನೊಂದುಕೊಂಡ ಅದೆಷ್ಟೋ ಮಕ್ಕಳು ಈಗ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡು ವೀಡಿಯೋಗಳನ್ನು ಹಾಕುತ್ತಿದ್ದಾರೆ..

cm-uncle

ಹೌದು ಸಾರಿಗೆ ನೌಕರರ ಮಕ್ಕಳು ವೀಡಿಯೋ ಮೂಲಕ ಮುಖ್ಯಮಂತ್ರಿಗಳನ್ನು ಸಂಬಳ ನೀಡುವಂತೆ ಮನವಿ ಮಾಡಿದ್ದು ಜೊತೆಗೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆಯೂ ಮನವಿ ಮಾಡಿದ್ದಾರೆ.. ಸದ್ಯ ಪುಟ್ಟ ಮಕ್ಕಳು ಕೇಳಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ.. ಇಲ್ಲಿದೆ ನೋಡಿ ಪುಟ್ಟ ಮಕ್ಕಳು ಹೇಳಿರುವ ಮಾತುಗಳು..

“ಸಿ ಎಂ ಅಂಕಲ್ ಪ್ಲೀಸ್ ಅಪ್ಪನಿಗೆ ಸಂಬಳ ಕೊಡಿ.. ಅಕ್ಕ ಪಕ್ಕದ ಮನೆಯವರೆಲ್ಲಾ ಹಬ್ಬ ಮಾಡ್ತಾ ಇದ್ದಾರೆ.. ಆದರೆ ನಮ್ಮ ಮನೆಯಲ್ಲಿ ಮಾತ್ರ ಹಬ್ಬ ಮಾಡ್ತಾ ಇಲ್ಲ.. ಹೊಸ ಬಟ್ಟೆ ಕೂಡ ಇಲ್ಲ.. ಅಪ್ಪನನ್ನ ಕೇಳಿದ್ರೆ.. ಇನ್ನು ಸಂಬಳ ಆಗಿಲ್ಲ ಅಂತಾರೆ.. ಪ್ಲೀಸ್ ಸಿಎಂ ಅಂಕಲ್ ನಮ್ ಅಪ್ಪನಿಗೆ ಸಂಬಳ ಕೊಡಿ” ಎಂದು ಒಂದು ಮಗು ಮನವಿ ಮಾಡಿದರೆ ಮತ್ತೊಂದು ಮಗು ಕೂಡ “ಸಿಎಂ ಅಂಕಲ್ ಸಾರಿಗೆ ನೌಕರರಿಗೆ ಸಂಬಳ ಕೊಡಿ.. ಮನೆಯಲ್ಲಿ ಹಬ್ಬ ಮಾಡಲು ದುಡ್ಡಿಲ್ಲ‌.. ಪ್ಲೀಸ್ ಸಂಬಳ ಕೊಡಿ.. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ‌‌ ಮಾಡಿ.. ಆಗ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಕೇಳಿಕೊಂಡಿದೆ..

ಇನ್ನು ಮತ್ತೊಬ್ಬ ಸಾರಿಗೆ ನೌಕರರ ಮಗ ಮಾತನಾಡಿ.. ನಾನೊಬ್ಬ ಸಾರಿಗೆ ನೌಕರನ ಮಗ.. ನಮ್ಮ ಮನೆಯಲ್ಲಿ ಹಬ್ಬವಿಲ್ಲ.. ಸಾರಿಗೆ ನೌಕರನ ಮಗನಾಗಿದ್ದೇ ತಪ್ಪಾ? ಹಗಲು ರಾತ್ರಿ ದುಡಿತಾರೆ.. ಆದರೆ ಸರಿಯಾಗಿ ಸಂಬಳ ಇಲ್ಲ.. ಬೇರೆ ಯಾವುದೇ ಸೌಲಭ್ಯವಿಲ್ಲ.. ಹುಷಾರಿಲ್ಲ ಅಂದರೆ ಹಣವಿಲ್ಲ.. ಸಾಲ ಮಾಡಿ ಮಾಡಿ ಎಷ್ಟು ಅಂತ ಜೀವನ ಮಾಡಕ್ಕಾಗತ್ತೆ? ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ.. ಆಗ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಸಾರಿಗೆಯವರಿಗೂ ಸಿಗುತ್ತೆ.. ಹಗಲು ರಾತ್ರಿ ದುಡಿಯುವುದಕ್ಕೆ ಒಂದು ಅರ್ಥ ಸಿಗುತ್ತದೆ.. ದಯವಿಟ್ಟು ಸಂಬಳ ಕೊಟ್ಟು ಹಬ್ಬ ಮಾಡಲು ಅವಕಾಶ ಮಾಡಿಕೊಡಿ ಎಂದಿದ್ದಾರೆ..

ಒಟ್ಟಿನಲ್ಲಿ ಈ ದೀಪಾವಳಿ ಸಾರಿಗೆ ನೌಕರರಿಗೆ ಸಂಬಳ ವಿಲ್ಲದ ಕತ್ತಲೆಯ ದೀಪಾವಳಿಯಾಗಿದ್ದು ಈ ಬಗ್ಗೆ ಸಾರಿಗೆ ನಿಗಮ ಏನು ನಿರ್ಧಾರ ಕೈಗೊಳ್ಳುವುದೋ ಕಾದು ನೋಡಬೇಕಿದೆ.. ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ನೌಕರರ ಮಕ್ಕಳ ವೀಡಿಯೋಗಳು ವೈರಲ್ ಆಗುತ್ತಿದ್ದು ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡುವರಾ ಕಾದು ನೋಡಬೇಕಿದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •