ಕಾಲೇಜು

ಕಾಲೇಜು ಸಮಯದಲ್ಲೇ ಕ್ಲಾಸಿಗೆ ಚಕ್ಕರ್ ಹೊಡೆದು ವಿದ್ಯಾರ್ಥಿಗಳ ಲವ್ವಿ ಡವ್ವಿ…

Crime/ಅಪರಾಧ Home Kannada News/ಸುದ್ದಿಗಳು

ಶಿರಸಿ ಕಾಲೇಜುಗಳಲ್ಲಿ ನಿಯಮ ಮೀರಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಿಡಿಯೋ ವೈರಲ್ ಆಗಿದೆ. ಕಾಲೇಜು ಸಮಯದಲ್ಲೇ ಮಸ್ತಿ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ ಹೆಚ್ಚಿದೆ.

ಕಾಲ ಬದಲಾಗಿದೆ. ಯುವಪೀಳಿಗೆ (Youths) ದಾರಿ ತಪ್ಪಿದೆ. ನಂಬಲಾಗದಂತಹ ಕೆಲಸಗಳನ್ನು ಇಂದಿನ ಯುವಕ, ಯುವತಿಯರು ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ, ಮತ್ತೊಂದು ತಪ್ಪು ಮಾಡುವುದಕ್ಕೂ ಈ ಯುವಪೀಳಿಗೆ ಮುಂದಾಗುತ್ತಾರೆ. ಈಗ ಕಾರವಾರ (Karwar)ದಲ್ಲಿ ಒಂದು ಘಟನೆ ನಡೆದಿದೆ. ಅಪ್ಪ(Father), ಅಮ್ಮ (Mother) ಮಕ್ಕಳನ್ನು ನಂಬಿ ಕಾಲೇಜಿ (College)ಗೆ ಕಳುಹಿಸುತ್ತಾರೆ. ಮಕ್ಕಳು ಓದಿ ದೊಡ್ಡವರಾಗಿ ಒಳ್ಳೆ ಹೆಸರು ಮಾಡಲಿ ಎಂಬುಂದು ಅವರ ಕನಸು. ಆದರೆ, ಈಗಿನ ಕಾಲದ ಮಕ್ಕಳು ಆ ಕನಸು (Dream)ಗಳನ್ನು ನುಚ್ಚುನೂರು ಮಾಡುತ್ತಿದ್ದಾರ. ಕಾಲೇಜಿಗೆ ಹೋಗದೇ, ಮೋಜು ಮಸ್ತಿ ಮಾಡುತ್ತಿದ್ದಾರೆ. ಅದೂ ಕಾಲೇಜು ಸಮವಸ್ತ್ರದಲ್ಲೇ.
ಹೌದು, ಶಿರಸಿಯಲ್ಲಿ ಕಾಲೇಜು ಸಮಯದಲ್ಲೇ ಕ್ಲಾಸಿಗೆ ಚಕ್ಕರ್ ಹೊಡೆದು ವಿದ್ಯಾರ್ಥಿಗಳ ಲವ್ವಿ ಡವ್ವಿ ನಡೆಸಿದ್ದಾರೆ. ಶಿರಸಿ ಯಲ್ಲಾಪುರ ನಾಖಾ ಬಳಿಯ ಖಾಸಗಿ ಕಾಮರ್ಸ್ ಕಾಲೇಜಿ (Commerce)ನ ವಿದ್ಯಾರ್ಥಿಗಳ ಮಸ್ತಿ ವೀಡಿಯೋ ಬಹಿರಂಗವಾಗಿದೆ. ಯುವಕ-ಯುವತಿಯರ ಮೋಜು ಮಸ್ತಿಯ ವಿಡಿಯೋ ಇದೀಗ ವೈರಲ್​ ಆಗುತ್ತಿದೆ. ಇವರಿಗೆ ಹೇಳೋರ, ಕೇಳೋರು ಯಾರು ಇಲ್ವಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಈ ರೀತಿ ಪೋಷಕರಿಗೆ ನಂಬಿಕೆ ದ್ರೋಹ ಮಾಡುತ್ತಿರುವ ಇವರನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಕೈಯಲ್ಲಿ ಎಣ್ಣೆ ಬಾಟ್ಲಿ.. ಯವತಿಯರ ಜೊತೆ ಲವ್ವಿ ಡವ್ವಿ!
ಶಿರಸಿ ಕಾಲೇಜುಗಳಲ್ಲಿ ನಿಯಮ ಮೀರಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಿಡಿಯೋ ವೈರಲ್ ಆಗಿದೆ. ಕಾಲೇಜು ಸಮಯದಲ್ಲೇ ಮಸ್ತಿ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಹೆಚ್ಚಿದ ಆಗ್ರಹ ಕೇಳಿಬಂದಿದೆ. ಅದೂ ಕಾಲೇಜು ಸಮವಸ್ತ್ರದಲ್ಲೇ ಪಾರ್ಟಿ ಮಾಡುತ್ತಿರುವ ವಿದ್ಯಾರ್ಥಿಗಳ ವಿಡಿಯೋ ಕಂಡ ಕಾಲೇಜು ಆಡಳಿತ ಮಂಡಳಿ ಸಹ ಆಕ್ರೋಶ ವ್ಯಕ್ತಪಡಿಸಿದೆ. ಈ ರೀತಿ ಮಾಡಿರುವ ವಿದ್ಯಾರ್ಥಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಇನ್ನೂ ವಿದ್ಯಾರ್ಥಿಗಳ ವರ್ತನೆ ಕಂಡು ಅವರ ಪೋಷಕರು ಹೇಗೆ ಪ್ರತಿಕ್ರಿಯುಸುತ್ತಾರೆ ಪಾಪ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ತಂದೆ-ತಾಯಿಗೆ ನೋವು ಕೊಡಬೇಡಿ ಎಂದ ನೆಟ್ಟಿಗರು!

ಇನ್ನೂ ತಂದೆ-ತಾಯಿ ಮಕ್ಕಳ ಮೇಲೆ ನೂರಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಕೂಲಿ ನಾಲಿ ಮಾಡಿ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ಇವರು ಹೀಗೆ ದಾರಿ ತಪ್ಪಿರುವುದು ನಿಜಕ್ಕೂ ತಪ್ಪು. ಈ  ನಿಮ್ಮ ಮೋಜು, ಮಸ್ತಿಯ ವಿಡಿಯೋವನ್ನು ನಿಮ್ಮ ತಂದೆ-ತಾಯಿ ನೋಡಿದರೆ ನಿಜಕ್ಕೂ ತಡೆದುಕೊಳ್ಳುವುದಿಲ್ಲ. ಈ ರೀತಿಯ ತಪ್ಪನ್ನು  ಮತ್ತೆ ಮಾಡಬೇಡಿ. ತಂದೆ-ತಾಯಿ ಮಾತನ್ನು ಕೇಳಿ ಎಂದು ಗರಂ ಆಗಿದ್ದಾರೆ. ಯಾವ ವಯಸ್ಸಿಗೆ ಏನು ಮಾಡಬೇಕೋ, ಅದನ್ನೇ ಮಾಡಬೇಕು ಎಂದು ತರಾಟೆ ತೆಗೆದುಕೊಂಡಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...