ಕಳೆದ ವರ್ಷ ಕರುಣಾ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳು ಚಿತ್ರೀಕರಣವಾಗಿದೆ ಹಾಗೆ ಉಳಿದುಕೊಂಡಿದ್ದವು. ಮತ್ತೆ ಇನ್ನು ಕೆಲವು ಸಿನಿಮಾಗಳು ಚಿತ್ರೀಕರಣವಾದರೂ ಕೂಡ ಚಿತ್ರಮಂದಿರಗಳು ತೆರೆಯದೇ ಇರುವ ಕಾರಣ ಸಿನಿಮಾಗಳು ರಿಲೀಸ್ ಆಗದೆ ಹಾಗೆ ಇದ್ದವು. ಆದರೆ ಇದೀಗ ಕರುನಾ ಕಾಟ ಸ್ವಲ್ಪ ಮಟ್ಟಿಗೆ ತಗ್ಗಿದ್ದರಿಂದ ಚಿತ್ರಮಂದಿರಗಳು ತೆರದು ಸಿನಿಮಾಗಳು ತೆರೆ ಕಾಣುತ್ತಿದೆ. ಇನ್ನು ಇತ್ತೀಚಿಗೆ ಹಲವಾರು ಸಿನಿಮಾಗಳು ತೆರೆಕಂಡಿದ್ದು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

Cinema

ಇನ್ನು ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕೂಡ ಕಂಡಿದೆ. ಇನ್ನು ಸಾಕಷ್ಟು ಅಭಿಮಾನಿಗಳು ಈ ಸಿನಿಮಾದ ಕಥೆ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಜನರು ಸಿನಿಮಾವನ್ನು ಮೆಚ್ಚಿಕೊಂಡಿದ್ದು, ನಟ ದರ್ಶನ್ ಅವರ ನಟನೆಗೆ ಕೆಕೆ ಹೊಡೆದಿದ್ದಾರೆ. ಇನ್ನು ಈ ಸಿನಿಮಾ ಯಶಸ್ವಿ ಪ್ರದರ್ಶನ ಕೂಡ ಕಾಣುತ್ತಿದೆ. ಏನೋ ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೂಡ ತೆರೆಕಂಡಿತ್ತು. ಇನ್ನು ಈ ಸಿನಿಮಾದ ತೆಲುಗು ಹಾಡು ‘ಕಣ್ಣೆ ಅದಿರಿಂದಿ’ ಎಂಬ ಹಾಡು ಸಾಕಷ್ಟು ಫೇಮಸ್ ಕೂಡ ಆಗಿತ್ತು. ಇನ್ನು ಇದನ್ನು ಹಾಡಿದ ಗಾಯಕಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಇತ್ತೀಚೆಗೆ ತೆರೆಕಂಡ ರಾಬರ್ಟ್ ಸಿನಿಮಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಇನ್ನು ಈ ಸಿನಿಮಾ ತೆಲುಗು ಭಾಷೆಯಲ್ಲಿ ತೆರೆಕಂಡಿದ್ದು, ತೆಲುಗು ಭಾಷೆಯ ‘ಕಣ್ಣೆ ಅದಿರಿಂದಿ’ ಎಂಬ ಹಾಡು ಸಾಕಷ್ಟು ಫೇಮಸ್ ಆಗಿದೆ. ಇನ್ನು ಈ ಹಾಡನ್ನು ನೀವು ಕಾಲರ್ ಟ್ಯೂನ್ ಆಗಿ ಹಾಗೂ ವಾಟ್ಸಪ್ ಸ್ಟೇಟಸ್ ಗಳಲ್ಲಿ ನೋಡಿರಬಹುದು. ಇನ್ನು ಈ ಹಾಡನ್ನು ಹಾಡಿದ ಗಾಯಕಿ ಹೆಸರು ಮಂಗ್ಲಿ. ಇವರ ನಿಜವಾದ ಹೆಸರು ಸತ್ಯವತಿ ರಾಥೋಡ್. ಇವರು ಆಂಧ್ರಪ್ರದೇಶದ ಅನಂತಪುರ ಎಂಬಲ್ಲಿ 10 ಜೂನ್ 1994 ರಂದು ಜನಿಸಿದರು. ಇವರು ವೃತ್ತಿಯಿಂದ ಗಾಯಕಿ, ನಿರೂಪಕಿ ಹಾಗೂ ಪತ್ರಕರ್ತೆ. ಇನ್ನು ಇವರು ಹಲವಾರು ಸಿನಿಮಾಗಳಲ್ಲಿ ಗಾಯಕಿಯಾಗಿ, ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಇದೀಗ ರಾಬರ್ಟ್ ಸಿನಿಮಾದ ಈ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ.

ಮಂಗ್ಲಿ ಅವರು ಬಡತನದ ಬಂಜಾರ ಕುಟುಂಬದಲ್ಲಿ ಜನಿಸಿದರು. ನಂತರ ಅವರು ಸಂಗೀತದಲ್ಲಿ ಡಿಪ್ಲೊಮಾ ಪದವಿ ಪಡೆದ ನಂತರ ಗಾಯನದಲ್ಲಿ ಮುಂದುವರೆದರು. ಬಾಲ್ಯದಿಂದಲೇ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಮಂಗ್ಲಿ ಅವರಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು 2013ರಲ್ಲಿ. ಹೌದು ಆಗ ತೆಲುಗಿನ ನ್ಯೂಸ್ ಚಾನಲ್ ಒಂದರಲ್ಲಿ ನಿರೂಪಣೆ ಮಾಡುವ ಮೂಲಕ ಸಾಕಷ್ಟು ಫೇಮಸ್ ಆದರು. ನಂತರ ಅವರು ಹಲವಾರು ಚಾನೆಲ್ಗಳಲ್ಲಿ ಕೆಲಸ ಮಾಡಿ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ತೆರೆದರು.

ಇದೀಗ ಅವರ ಯೂಟ್ಯೂಬ್ ಚಾನೆಲ್ ಗೆ ಸುಮಾರು 1.3 ಮಿಲಿಯನ್ ಅಭಿಮಾನಿಗಳಿದ್ದಾರೆ. ಇನ್ನು ಇವರು ಕೆಲವು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಒಂದು ಹಾಡನ್ನು ಹಾಡಲು ಪಡೆಯುವ ಸಂಭಾವನೆ 1.5 ಲಕ್ಷ ರೂಪಾಯಿ. ಇನ್ನು ರಾಬರ್ಟ್ ಸಿನಿಮಾದ ‘ಕಣ್ಣೆ ಅದಿರಿಂದಿ’ ಹಾಡಿಗೂ ಕೂಡ ಅವರು ಅಷ್ಟೇ ಸಂಭಾವನೆಯನ್ನು ಪಡೆದಿದ್ದಾರೆ. ಈ ಹಾಡು ಮಂಗ್ಲಿ ಅವರಿಗೆ ಮತ್ತಷ್ಟು ಯಶಸ್ಸನ್ನು ತಂದುಕೊಟ್ಟಿದೆ. ಹೀಗಾಗಿ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •