ಸಿನಿಮಾ ರಂಗದಲ್ಲಿ ಹೀರೋ ಮತ್ತು ಹೀರೋಯಿನ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಬೇಡಿಕೆಗೆ ತಕ್ಕಂತೆ ಅವರ ಸಂಭಾವನೆ ಕೂಡ ಹೆಚ್ಚಾಗಿ ಇರುತ್ತದೆ. ಸಾಮಾನ್ಯವಾಗಿ ಕಲಾವಿದರು ಸಿನಿಮಾರಂಗಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಾಗ ಅವರ ಸಂಭಾವನೆ ಕಡಿಮೆ ಇರುತ್ತದೆ. ಸಿನಿಮಾಗಳು ಯಶಸ್ವಿಯಾಗುತ್ತಾ ಹೋದಷ್ಟು, ಸಂಭಾವನೆ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದು ಸಿನಿಮಾ ಯಶಸ್ಸು ಪಡೆದ ನಂತರ ತಮ್ಮ ಸಂಭಾವನೆ ಇಷ್ಟು ಎಂದು ನಿಗದಿಮಾಡಿಕೊಳ್ಳುತ್ತಾರೆ. ಹಾಗಿದ್ದರೆ, ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆಯಲ್ಲಿರುವ ನಟಿಯರ ಸಂಭಾವನೆ ಎಷ್ಟು ಗೊತ್ತಾ ? ತಿಳಿಯಲು ಮುಂದೆ ಓದಿ..

money

ಮಾನ್ವಿತಾ ಕಾಮತ್.. ಮೂಲತಃ ಕರಾವಳಿ ಪ್ರದೇಶದವರು. ದುನಿಯಾ ಸೂರಿ ಅವರು ನಿರ್ದೇಶನ ಮಾಡಿದ ಕೆoಡಸಂಪಿಗೆ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಮಾನ್ವಿತಾ ಕಾಮತ್ ತಮ್ಮ ನಟನೆ ಮೂಲಕ ಛಾಪನ್ನು ಮೂಡಿಸಿ, ಮೊದಲ ಸಿನಿಮಾದಲ್ಲೇ ಅವಾರ್ಡ್ ಗಳನ್ನು ಪಡೆದುಕೊಂಡರು. ನಂತರ ಟಗರು, ಚೌಕ ಸೇರಿದಂತೆ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಟಗರು ಸಿನಿಮಾಗೆ ಸೈಮಾ ಅವಾರ್ಡ್ ಪಡೆದರು ಮಾನ್ವಿತಾ. ಸಧ್ಯಕ್ಕೆ ಇವರು ಶಿವ143, ರಾಜಸ್ತಾನ್ ಡೈರಿಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾಹಿತಿಗಳ ಪ್ರಕಾರ ನಟಿ ಮಾನ್ವಿತಾ ಕಾಮತ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ 20 ಲಕ್ಷ ರೂಪಾಯಿಗಳು.

money

ಕಿ-ಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ. ಕಿಸ್ ಸಿನಿಮಾ ಇಂದ ಕರ್ನಾಟಕದ ಹುಡುಗರ ಕ್ರಶ್ ಆಗಿದ್ದಾರೆ. ನಂತರ ರೋರಿo-ಗ್ ಸ್ಟಾರ್ ಶ್ರೀಮುರಳಿ ಅವರ ಭರಾಟೆ ಸಿನಿಮಾದಲ್ಲಿ ನಟಿಸಿ ಯಶಸ್ಸು ಪಡೆದರು. ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ 15ಲಕ್ಷ ರೂಪಾಯಿಗಳು. ನಟಿ ಆಶಿಕಾ ರಂಗನಾಥ್, ಜಾಲಿಬಾಯ್ ಸಿನಿಮಾ ಮೂಲಕ ಇವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು, ಮೊದಲೆರಡು ಸಿನಿಮಾಗಳು ಹೆಚ್ಚಿನ ಯಶಸ್ಸು ಕೊಡಲಿಲ್ಲ. ಆದರೆ, ನಂತರ ತೆರೆಕಂಡ ರಾಂಬೋ2, ಮುಗುಳುನಗೆ, ತಾಯಿಗೆ ತಕ್ಕ ಮಗ ಸಿನಿಮಾಗಳು ಇವರ ಬೇಡಿಕೆಯನ್ನು ಹೆಚ್ಚಿಸಿದವು. ಒಂದು ಸಿನಿಮಾಗೆ ಆಶಿಕಾ ರಂಗನಾಥ್ ಪಡೆಯುವ ಸಂಭಾವನೆ 15 ರಿಂದ 20 ಲಕ್ಷ ರೂಪಾಯಿಗಳು.

money

ನಟಿ ಶಾನ್ವಿ ಶ್ರೀವಾಸ್ತವ್, ಮೂಲತಃ ವಾರಣಾಸಿಯವರಾದ ಇವರು ಚಂದ್ರಲೇಖ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೋಟ್ಟರು. ನಂತರ ಯಶ್ ಅವರ ಜೊತೆ ಮಾಸ್ಟರ್ ಪೀಸ್, ದರ್ಶನ್ ಅವರ ಜೊತೆ ತಾರಕ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಇವರ ಬೇಡಿಕೆ ಹೆಚ್ಚಾಯಿತು. ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಿದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಕನ್ನಡದಲ್ಲಿ ತಾವೇ ಡಬ್ ಮಾಡಿ, ಕನ್ನಡ ಸಿನಿಪ್ರಿಯರಿಗೆ ಇನ್ನಷ್ಟು ಹತ್ತಿರವಾದರು. ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದರು ಕೂಡ, ಕನ್ನಡಕ್ಕೆ ಮೊದಲ ಆದ್ಯತೆ ಎನ್ನುವ ಈ ನಟಿ ಒಂದು ಸಿನಿಮಾಗೆ ಪಡೆಯುವ ಸಂಭಾವನೆ 20 ರಿಂದ 25 ಲಕ್ಷ ರೂಪಾಯಿಗಳು.

money

ಸ್ಯಾಂಡಲ್ ವುಡ್ ನ ಮತ್ತೊಬ್ಬ ಟ್ಯಾಲೆಂಟರಡ್ ನಟಿ ಹರಿಪ್ರಿಯಾ ಅವರು. ಇವರನ್ನು ಸ್ಯಾಂಡಲ್ ವುಡ್ ನ ಲಕ್ಕಿ ಹೀರೋಯಿನ್ ಎಂದೇ ಕರೆಯುತ್ತಾರೆ. ಉಗ್ರ-o, ಬೆಲ್ ಬಾ-ಟಮ್, ನೀರ್ ದೋಸೆ, ಕನ್ನಡ್ ಗೊತ್ತಿಲ್ಲ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಇವರ ಬೇಡಿಕೆಯನ್ನು ಹೆಚ್ಚು ಮಾಡಿದೆ. ನಟಿ ಹರಿಪ್ರಿಯಾ ಒಂದು ಸಿನಿಮಾಗೆ 30 ರಿಂದ 35 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ಹರಿಪ್ರಿಯಾ ಅವರು ಕನ್ನಡ ಚಿತ್ರರಂಗದಲ್ಲಿ 25 ಸಿನಿಮಾಗಳನ್ನು ಕಂಪ್ಲೀಟ್ ಮಾಡಿದರು. ನಟಿ ಶ್ರದ್ಧಾ ಶ್ರೀನಾಥ್, ಯೂ-ಟರ್ನ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರದ್ಧಾ, ನಂತರ ಆ-ಪರೇಷನ್ ಅಲಮೇಲಮ್ಮ, ಊರ್ವಿ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿರುವ ಇವರಿಗೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇವರ ಸಂಭಾವನೆ 10 ಲಕ್ಷ ರೂಪಾಯಿಗಳು!

money

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು, ಪ್ರಸ್ತುತ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಮತ್ತು ಬ್ಯುಸಿ ಇರುವ ನಟಿ. ರಚಿತಾ ರಾಮ್ ಅವರು ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ 1 ಕೋಟಿ ರೂಪಾಯಿಗಳು ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಖ್ಯಾತಿ ರಚಿತಾ ಅವರದ್ದು. ರಶ್ಮಿಕಾ ಮಂದಣ್ಣ, ಕಿರಿಕ್ ಪಾ-ರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ, ಮೊದಲ ಸಿನಿಮಾದಲ್ಲೇ ಬೇಡಿಕೆ, ಯಶಸ್ಸು, ಜನಪ್ರಿಯತೆ ಎಲ್ಲವನ್ನು ಪಡೆದರು. ನಂತರ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದ ಟಾಪ್ ನಟಿಯಾದರು. ಈಗ ಕಾಲಿವುಡ್ ಮತ್ತು ಬಾಲಿವುಡ್ ಗು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ರಶ್ಮಿಕಾ. ಮೂಲಗಳ ಪ್ರಕಾರ ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಅವರು ಪಡೆದಿರುವ ಸಂಭಾವನೆ 1.5 ಕೋಟಿ ರೂಪಾಯಿಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •