ಕನ್ನಡ ಚಿತ್ರರಂಗ ಈ ಬಾರಿ ಅದೇಕೋ ಬಹಳ ಜನ ಕಲಾವಿದರನ್ನು ಕಳೆದುಕೊಳ್ಳುತ್ತಿದೆ. ಒಬ್ಬರು ಇಬ್ಬರು ಅಲ್ಲ, ಸಾಲು ಸಾಲು ಬರೀ ಸಾವಿನ ಸುದ್ದಿಯೇ ಕೇಳಿಬರುತ್ತಿದೆ. ಒಂದಲ್ಲಾ ಒಂದು ದಿನ ಎಲ್ಲರೂ ಸಾಯಬೇಕು. ಆದರೆ ಈ ರೀತಿ ಅರ್ಧ ಆಯಸ್ಸನ್ನು ಕಳೆದಿರುವುದಿಲ್ಲ. ಇಂತಹವರೇ ತಮ್ಮ ಬದುಕಿನ ವ್ಯಾಪಾರವನ್ನು ಮುಗಿಸಿಬಿಟ್ಟರೆ ನಿಜಕ್ಕೂ ಶಾಕ್‌ ಆಗುತ್ತದೆ. ಇಂತಹದ್ದೇ ಸಾಲಿನಲ್ಲಿ ಅದೆಷ್ಟು ಜನರು ನಿಂತಿದ್ದಾರೆ ಎಂಬುದು ಲೆಕ್ಕಕ್ಕಿಲ್ಲ.

 

ಈಕೆಯನ್ನು ನೀವು ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ಬಾರಿ ಪೋಷಕ ಪಾತ್ರಗಳಲ್ಲಿ ನೋಡಿರುತ್ತೀರಿ. ಈಕೆಯ ಅಭಿನಯವಂತೂ ಅದ್ಭುತವಾದುದು. ಪೊಲೀಸ್‌, ಗಯ್ಯಾಳಿ, ಅತ್ತೆ ಪಾತ್ರ ಹೀಗೆ ನಾನಾ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಈ ನಟಿಯ ಹೆಸರು ಪಂಕಜ ಎಂದು. ರಾಜ್ಯದಲ್ಲಿ ಈಗ ಲಾಕ್‌ ಡೌನ್‌ ಆಗಿರುವುದರಿಂದ ಇವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಲ್ಲದೇ ಅವಕಾಶಗಳು ಕಡಿಮೆ ಬರುತ್ತಿರುವುದರಿಂದ ಹೊಟ್ಟೆ ಹೊರೆಯಲು ಕಷ್ಟವಾಗುತ್ತಿದೆ.

 

 

ಇಂತಹ ಸಂದರ್ಭದಲ್ಲೇ ನಟಿ ಪಂಕಜ ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಇದೇ ಕೊರೊನಾ ಪಂಕಜಾ ಅವರ ಪತಿಯನ್ನು ಬಲಿ ತೆಗೆದುಕೊಂಡಿದೆ. ಇತ್ತ ಪೋಷಕ ಪಾತ್ರಗಳಲ್ಲಿ ಹೆಚ್ಚು ಅವಕಾಶವೂ ಸಿಗದೇ, ಅತ್ತ ಪತಿಯನ್ನು ಕಳೆದುಕೊಂಡು ಜೀವನ ನಡೆಸುವುದೇ ಕಷ್ಟ ಎಂಬಂತಹ ಸ್ಥಿತಿಗೆ ಬಂದು ನಿಂತಿದ್ದಾರೆ.

ಇವರು ಸುಮಾರು ೨ ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ಶೈಲಿಯನ್ನು ತೋರಿಸಿದ್ದಾರೆ. ಇವರು ದೊಡ್ಡ ದೊಡ್ಡ ಕಲಾವಿದರ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಸಿನಿಮಾಗಳ ಚಿತ್ರೀಕರಣವೂ ನಡೆಯದೇ ಇರುವುದರಿಂದ ಮನೆಯಲ್ಲೇ ಉಳಿದುಬಿಟ್ಟಿದ್ದಾರೆ.

 

 

ಇವರ ಈ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿ ಒಂದೆರಡು ದಿನಸಿ ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ. ಈ ಮೊದಲು ಅವರಿಗೆ ಎಲ್ಲಾ ಚಿತ್ರಗಳಲ್ಲೂ ಒಂದಾದರೂ ಪಾತ್ರವಿರುತ್ತಿತ್ತು. ಆದರೆ ಈಗ ಅವಕಾಶಗಳೂ ಕಡಿಮೆಯಾಗಿರುವುದರಿಂದ ಕೈಯಲ್ಲಿ ದುಡ್ಡಿಲ್ಲದೇ ಖಾಲಿ ಕೂತಿದ್ದಾರೆ.

 

ಇಂತಹ ಕಷ್ಟ ಯಾರಿಗೂ ಬರಬಾರದು. ಒಂದು ಕಾಲದಲ್ಲಿ ಉತ್ತಮ ನಟಿ ಎಂದು ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದವರು ವಯಸ್ಸಾದಂತೆ ಅವಕಾಶವೇ ಇಲ್ಲದೇ ಮೂಲೆಯಲ್ಲಿ ಕೂರತೆ ಬದುಕಿನ ಬಂಡಿಯನ್ನು ಎಳೆಯವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ. ಸಿನಿಮಾ ರಂಗಕ್ಕೆ ಬಂದ ಮಾತ್ರಕ್ಕೆ ಸಾಕಷ್ಟು ಹಣ ಮಾಡಬಹುದು ಎಂಬುದು ಮಾತ್ರ ಸುಳ್ಳು ಎಂಬುದು ಇಂತಹ ನಟ ನಟಿಯರನ್ನು ನೋಡಿದರೇನೆ ತಿಳಿಯುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •