ಮೇಜರ್ ಚಿತ್ರೇಶ್ ಬಿಶ್ತ್ (31) ಅವರ ಮದುವೆಗಾಗಿ ಮುಂದಿನ ತಿಂಗಳು ಡೆಹ್ರಾಡೂನ್ ನಲ್ಲಿ ಆಯೋಜನೆಗೊಂಡಿತ್ತು. ಚಿತ್ರೇಶ್ ತಂದೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುತ್ತಿದ್ದರು. ಆದರೆ ಈಗ ಆತನ ಕಳೇಬರ ಮಾತ್ರ ಶವಪೆಟ್ಟಿಗೆಯಲ್ಲಿ ಬರಲಿದೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆ ಸಮೀಪದ ನೌಶೇರಾ ಸೆಕ್ಟರ್ ಬಳಿ ನೆಲಬಾಂಬ್ ಅನ್ನು ನಿಷ್ಕ್ರಿಯಗೊಳಿಸುವಾಗ ಚಿತ್ರೇಶ್ ಮೃತಪಟ್ಟಿದ್ದಾರೆ. ಸೈನ್ಯದ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಜೊತೆಗಿದ್ದ ಮೇಜರ್ ಬಿಶ್ತ್ ಅವರ ಪೋಷಕರು ಮತ್ತು ವಿದೇಶದಲ್ಲಿ ನೆಲೆಸಿರುವ ಹಿರಿಯ ಸಹೋದರನನ್ನು ಅಗಲಿದ್ದಾರೆ. ಅವರ ತಂದೆ ಎಸ್ ಎಸ್ ಬಿಶ್ತ್, ನಿವೃತ್ತ ಪೊಲೀಸ್ ಅಧಿಕಾರಿ.

“ಅವನು ನಮ್ಮ ಕಿರಿಯ ಮಗ. ನಾವು ಪ್ರತಿದಿನ ದೂರವಾಣಿಯಲ್ಲಿ ಮಾತನಾಡುತ್ತಿದ್ದೆವು ಆದರೆ ಇಂದು ನಮಗೆ ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ಈ ಘಟನೆ ಸಂಭವಿಸಿದೆ. ಅವರು ಮುಂದಿನ ತಿಂಗಳು ಮದುವೆಯಾಗಲಿದ್ದ “ಎಂದು ಅವರ ಚಿತ್ರೇಶ್ ತಂದೆ ಸುದ್ದಿಗಾರರಿಗೆ ತಿಳಿಸಿದರು.

ಮೇಜರ್ ಬಿಶ್ತ್ ಒಂದು ಬಾಂಬ್ ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಮುಂದಿನ ಬಾಂಬ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಆತನ ಜೊತೆಯಲ್ಲಿದ್ದ ಮತ್ತೊಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ

ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಮತ್ತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅಧಿಕಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಮತ್ತು ಅವರನ್ನು ಸರ್ವೋಚ್ಚ ತ್ಯಾಗ ಮಾಡಿದ ಧೀರ ಸೈನಿಕ ಎಂದು ವಿವರಿಸಿದರು. ಬಿಜೆಪಿ ರಾಜ್ಯ ಮುಖ್ಯಸ್ಥ ಅಜಯ್ ಭಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಅವರ ಮನೆಗೆ ಆಗಮಿಸಿದರು. ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಪ್ರೀತಂ ಸಿಂಗ್ ಕೂಡ ಮೇಜರ್ ಚಿತ್ರೇಶ್ ಬಿಶ್ತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •