ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಿದೆ. ಚಿರು ಇಲ್ಲದಿದ್ದರೂ ಅವರ ಸಿನಿಮಾಗಳ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್ ಆಗಿರುವ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆೆ.

ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ನ ವಿಶೇಷ ಎಂದರೆ ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡುತ್ತಿದ್ದಾರೆ. ಹೌದು ಅದು ಮತ್ಯಾರು ಅಲ್ಲ ಚಿರಂಜೀವಿ ಮತ್ತು ಮೇಘನಾ ರಾಜ್ ಮುದ್ದಿನ ಪುತ್ರ ಜೂ.ಚಿರು. ಪುಟ್ಟ ಪೋರ ಜೂ.ಚಿರು ಅಪ್ಪನ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾನೆ.

ಇಂದು ಸಿನಿಮಾದ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ನಟಿ ಮೇಘನಾ ರಾಜ್ ಮಗನನ್ನು ಕೂರಿಸಿಕೊಂಡು ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್ ನೋಡಿ ಮೇಘನಾ ಮೆಚ್ಚಿಕೊಂಡ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •