ಅಹ್ಮದಾಬಾದ್: ಮಹಿಳೆಯೊಂದಿಗೆ ತಾನಿದ್ದ ಖಾಸಗಿ ಫೋಟೋಗಳನ್ನು ಎಕ್ಸ್ ಲವರ್ ಆಕೆಯ ಮಕ್ಕಳಿಗೆ ಕಳುಹಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಮಾಜಿ ಪ್ರಿಯತಮನ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಪ್ರಕರಣ ನಡೆದಿದ್ದು, 43 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಂಬಾವಾಡಿಯಲ್ಲಿ ನೆಲೆಸಿದ್ದು, ಕ್ಯಾಟರಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ 15 ವರ್ಷಗಳಿಂದ ಪತಿಯಿಂದ ತಾನು ದೂರವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಸುಮಾರು ಒಂದೂವರೆ ವರ್ಷದ ಹಿಂದೆ ಮಹಿಳೆ ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ವತ್ವ ಮೂಲದ ಆರೋಪಿ ಮಿತೇಶ್ ಪರ್ಮರ್‍ನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಬಾಂಧ್ಯವ್ಯ ವೃದ್ಧಿಸಿದೆ. ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾರೆ.

childrens-mobile

ಸ್ನೇಹ ಬೆಳೆದ ಸುಮಾರು ಮೂರು ತಿಂಗಳ ಬಳಿಕ ಅಂಬಾವಾಡಿ ನಿವಾಸಿ ಮಹಿಳೆ ತನ್ನ ಮಕ್ಕಳಿಗೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದಾಳೆ. ಇದನ್ನು ಸಹಿಸದ ಪರ್ಮರ್, ತಾನು ಸಂಬಂಧ ಹೊಂದಿದಾಗಿನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಸಲು ಆರಂಭಿಸಿದ್ದಾನೆ ಎಂದು ಮಹಿಳೆ ಆರೋಪಿದ್ದಾಳೆ.

ಸಂಬಂಧವನ್ನು ಮುಂದುವರಿಸದಿದ್ದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಆದರೆ ಮಹಿಳೆ ಇದನ್ನು ಧಿಕ್ಕರಿಸಿ, ಆರೋಪಿಯೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಪಶ್ಚಾತ್ತಾಪ ಪಟ್ಟು ನಿರಾಕರಿಸಿದ್ದರಿಂದ ಆರೋಪಿ ಮಹಿಳೆಯೊಂದಿಗಿದ್ದ ಖಾಸಗಿ ಫೋಟೋಗಳನ್ನು ಆಕೆಯ ಮಕ್ಕಳಿಗೆ ಕಳುಹಿಸಿದ್ದಾನೆ. ಬಳಿಕ ಗುರುವಾರ ಮಹಿಳೆ ಅಹ್ಮದಾಬಾದ್‍ನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೈಬರ್ ಸೆಲ್‍ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!