ಹೆಣ್ಣು ಮಗು

ಸರ್ಕಾರದಿಂದ ಹೆಣ್ಣು ಮಗುವಿಗೆ 1 ಲಕ್ಷ ಪಡೆಯುವ ಸರಳ ವಿಧಾನ.. ಪಡೆಯುವುದು ಹೇಗೆ ನೋಡಿ!

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನೀವು ಈ ಒಂದು ಬಾಂಡ್ ಮಾಡಿಸಿದರೆ ಏನೆಲ್ಲಾ ಒಂದು ಸೌಲಭ್ಯಗಳು ಸಿಗಲಿವೆ ಆಗೇನೆ ಈ ಒಂದು ಬಾಂಡ್ ಅನ್ನು ನೀವು ಹೇಗೆ ಮಾಡಿಸಬೇಕು ಅನ್ನೋದನ್ನ ತಿಳಿಯೋಣ.‌. ಸ್ನೇಹಿತರೆ ಈ ಒಂದು ಭಾಗ್ಯ ಲಕ್ಷ್ಮಿ ಯೋಜನೆಯೂ ಕೇವಲ ಹೆಣ್ಣು ಮಗುವಿಗೆ ಮಾತ್ರ ಸೀಮಿತವಾಗಿದ್ದು ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ ಆದ್ರೆ ಮಾತ್ರ ಈ ಒಂದು ಯೋಜನೆಯನ್ನ ಪಡೆಯಬಹುದು. ಈ ಒಂದು ಯೋಜನೆ ಅಡಿಯಲ್ಲಿ ನೀವೇನಾದ್ರು ಬಾಂಡ್ ಮಾಡಿಸಬೇಕೆಂದ್ರೆ ಕೆಲವೊಂದು ನಿಯಮಗಳು ಇರುತ್ತೆ.. ಆ ಕೆಲವೊಂದು ನಿಯಮಗಳನ್ನು ಏನು ಅಂಥ ನೋಡೋದಾದ್ರೆ.

ಮಗವಿನ ಜನನವನ್ನು ಕಡ್ಡಾಯವಾಗಿ ನೀವು ನೊಂದಣಿ ಮಾಡಬೇಕು.. ಆನಂತರ ಈ ಒಂದು ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿ’ರೋ’ಧಕ ಲಸಿಕೆಯನ್ನ ಹಾಕಸಿಲೇ ಬೇಕಾಗುತ್ತದೆ. ಹಾಗೆನೇ ಅಂಗನವಾಡಿ ಕೇಂದ್ರಕ್ಕೆ ಇದನ್ನ ರಿಜಿಸ್ಟರ್ ಮಾಡಿಸಬೇಕು.. ಇದಾದ ನಂತರ ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಸೇರಿಸಬೇಕಾಗುತ್ತೆ.

ಮಗುವನ್ನು ಯಾವುದೇ ರೀತಿಯಾಗಿ ಬಾಲ ಕಾರ್ಮಿಕರಾಗಿ ಮಾಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಒಂದು ವೇಳೆ ನೀವೇನಾದ್ರು ಬಾಲ ಕಾರ್ಮಿಕರಾಗಿ ಮಾಡಿದ್ರೆ ಆ ಒಂದು ಭಾಗ್ಯ ಲಕ್ಷ್ಮಿ ಯೋಜನೆಯ ಬಾಂಡ್ ಕೂಡ ಕ್ಯಾನ್ಸಲ್ ಆಗುತ್ತೆ.. ಇನ್ನೂ 21 ವರ್ಷ ಪೂರೈಸಿದ ನಂತರವೇ ಮಗುವಿಗೆ ಮದುವೆಯನ್ನ ಮಾಡಬೇಕಾಗುತ್ತೆ. ಒಂದು ವೇಳೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದ್ರೆ ಅಂಥ ಸಂದರ್ಭದಲ್ಲಿ ಕೂಡ ಈ ಒಂದು ಭಾಗ್ಯಲಕ್ಷ್ಮಿ ಬಾಂಡ್ ಕ್ಯಾನ್ಸಲ್ ಆಗುತ್ತೆ.. ಇನ್ನೂ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಏನೇನು ಸೌಲಭ್ಯಗಳನ್ನು ಸಿಗುತ್ತೆ ಅಂಥ ಕೇಳುವುದಾದ್ರೆ ಮೊದಲನೇ ಮಗುವಿಗೆ ಕರ್ನಾಟಕ ಸರ್ಕಾರ 19,300 ರೂಪಾಯಿಯನ್ನ ಡೆಪಾಸಿಟ್ ಆಗಿ ಎಲ್.ಐ.ಸಿ ನಲ್ಲಿ ಇಡುತ್ತೆ.‌. ಎರಡನೇ ಮಗು ಕೂಡ ಹೆಣ್ಣು ಮಗು ಆದ್ರೆ ಆ ಮಗುವಿಗೂ ಕೂಡ 18,350 ರೂಪಾಯಿಗಳ ಒಂದು ಮೊತ್ತವನ್ನು ಡೆಪಾಸಿಟ್ ಆಗಿ ಇಡಲಾಗುತ್ತೆ‌. ಇದೆಲ್ಲಾ ಏನಾಗುತ್ತೆ ಅಂದರೆ ಹೆಣ್ಣು ಮಗು 21 ವರ್ಷ ಪೂರೈಸಿದ ನಂತರ ಮೊದಲನೆ ಮಗು 1 ಲಕ್ಷದ 97 ರೂಪಾಯಿ ಪಡೆದರೆ, ಎರಡನೇ ಮಗು 1 ಲಕ್ಷದ 52 ರೂಪಾಯಿ ಪಡೆಯುತ್ತೆ..

Little Cute Radha Look | Mom -Daughter Radha | Radha Makeup For little Girl - YouTube

15 ವರ್ಷ ತಲುಪಿದ ನಂತರ ಅಂದರೆ ಎಸ್,ಎಸ್, ಎಲ್, ಸಿ ನಲ್ಲಿ ಪಾಸ್ ಆದ ನಂತರ ಮುಂದಿನ ಒಂದು ವಿದ್ಯಾಭ್ಯಾಸ ಮುಂದುವರೆಯುವ ಆಸಕ್ತಿ ಇದ್ದರೆ ಈ ಒಂದು ಬಾಂಡ್ ಅನ್ನು ಯಾವುದಾದ್ರು ಬ್ಯಾಂಕ್ ನಲ್ಲಿ ಇಟ್ಟು 50 ಸಾವಿರ ಸಾಲವನ್ನು ಕೂಡ ನೀವು ಪಡೆಯಬಹುದು.. ಇನ್ನೂ ಸ್ನೇಹಿತರೆ ಈ ಒಂದು ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಹೇಗೆ ಮಾಡಿಸಬೇಕು, ಏನೇನು ದಾಖಲೆಗಳು ನೀಡಬೇಕು ಅಂದರೆ.. ಮಗುವಿನ ಜನನ ಪ್ರಮಾಣ ಪತ್ರ ನೀವು ಮಾಡಿಸಬೇಕಾಗುತ್ತೆ.. ಆ ಒಂದು ಹೆಣ್ಣು ಮಗು ಹುಟ್ಟಿದ ನಂತರ ನೀವು ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಹೆಸರನ್ನ ನೊಂದಾಯಿಸಬೇಕಾಗುತ್ತೆ.. ನೊಂದಾಯಿಸಿದ ನಂತರ ನಿಮಗೆ ಜನನ ಪ್ರಮಾಣ ಪತ್ರಕ್ಕೆ ಅರ್ಜಿಯನ್ನ ಸಲ್ಲಿಸಿದ್ರೆ ನಿಮಗೆ ಸ್ವಲ್ಪ ದಿನಗಳಲ್ಲಿ ಜನನ ಪ್ರಮಾಣ ಸಿಗುತ್ತೆ.. ಇದಾದ ನಂತರ ತಾಯಿಯ ಒಂದು ಆಧಾರ್ ಕಾರ್ಡ್ ಬೇಕಾಗುತ್ತೆ ಮತ್ತೆ ತಾಯಿ ಮತ್ತು ಮಗುವಿನ ಫೋಟೊ ಬೇಕಾಗುತ್ತೆ‌‌..

ಇದರ ನಂತರ ತಾಯಿ ಮತ್ತು ಮಗುವಿನ ಜಂಟಿ ಖಾತೆಯನ್ನು ನೀವು ಸಮೀಪದ ಬ್ಯಾಂಕ್ ನಲ್ಲಿ ತೆಗೆಸಬೇಕಾಗುತ್ತೆ. ಅಲ್ಲಿ ಅಕೌಂಟ್ ಮಾಡಿದ ನಂತರ ನಿನಗೆ ಪಾಸ್ ಬುಕ್ ನೀಡ್ತಾರೆ.. ಇದೆಲ್ಲದರ ಜೊತೆಗೆ ಬಿಪಿಎಲ್ ರೇಶನ್ ಕಾರ್ಡ್ ನ ಒಂದು ಜೆರಾಕ್ಸ್ ಅನ್ನು ಕೂಡ ಈ ಅರ್ಜಿಯಲ್ಲಿ ಸಲ್ಲಿಸಬೇಕಾಗುತ್ತೆ. ಬಿಪಿಎಲ್ ರೇಶನಗ ಕಾರ್ಡ್ ಇದ್ದವರಿಗೆ ಮಾತ್ರ ಭಾಗ್ಯಲಕ್ಷ್ಮಿ ಬಾಂಡ್ ನಿಮಗೆ ದೊರಕುತ್ತದೆ.. ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಗುವಿಗೆ ಮಾತ್ರ ಈ ಯೋಜನೆ ಫಲವನ್ನು ನೀವು ಪಡೆದುಕೊಳ್ಳಬಹುದು. ಇವೆಲ್ಲಾ ದಾಖಲಾತಿಗಳೊಂದಿಗೆ ನೀವು ಅರ್ಜಿಯನ್ನು ನಿಮ್ಮ ಸಮೀಪದ ನೆಮ್ಮದಿ ಕೇಂದ್ರಕ್ಕೆ ಸಲ್ಲಿಸಿದರೆ ಸಾಕು ನಿಮಗೆ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಸಿಗುತ್ತೆ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...