ಮತ್ತೊಮ್ಮೆ ಟ್ರೊಲ್:ನನ್ ಹೆಂಡ್ತಿ ಜೊತೆ ಕೋಳಿ ಸಾರು ಆದ್ರೂ ಮಾಡ್ತೀನಿ/ರಸಂ ಮಾಡ್ತೀನಿ!!ಫುಲ್ ಗರಂ ಚಂದನ್ ಶೆಟ್ಟಿ

ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ, ಚಂದನ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆ ಒಳಗೆ ಅಣ್ಣ-ತಂಗಿ ಎಂದು ಹೇಳಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೌದು ತದನಂತರ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದ ವಿಚಾರವೂ ಕೂಡ ತುಂಬಾ ಚರ್ಚೆಯಾಗಿತ್ತು. ಜೊತೆಗೆ ಇವರಿಬ್ಬರನ್ನು ಅಣ್ಣ-ತಂಗಿ ಎಂಬುದಾಗಿ ಟ್ರೋಲ್ ಮಾಡಲಾಗಿತ್ತು. ಮತ್ತೆ ಇತ್ತೀಚಿಗೆ ಕೋಲುಮಂಡೆ ಸಾಂಗ್ನಲ್ಲಿ ವಿವಾದ ಸೃಷ್ಟಿಸಿಕೊಂಡ ಚಂದನ್ ಅವರು, ಆಗಾಗ ತಮ್ಮ ಮತ್ತು ತಮ್ಮ ಹೆಂಡತಿ ನಿವೇದಿತಾ ಗೌಡ ಅವರ ವಿಚಾರವಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ.

ಹೌದು ಇತ್ತೀಚಿಗೆ ಚಂದನ್ ಮತ್ತು ನಿವೇದಿತಾ ಗೌಡ ಅವರು ಜಾಹೀರಾತೊಂದರಲ್ಲಿ ರಸಂ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು, ತದನಂತರ ಈ ವಿಡಿಯೋ ನೋಡಿದ ಕೆಲವರು, ಸಕಾರಾತ್ಮಕ ಅಭಿಪ್ರಾಯ ತಿಳಿಸಿದರೆ, ಇನ್ನು ಕೆಲವರು ನಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಹೌದು ಒಬ್ಬ ಯುವಕ ಇನ್ಸ್ಟಾಗ್ರಾಮ್ ನ ಚಂದನ್ ಖಾತೆಯಲ್ಲಿ ಈ ವಿಡಿಯೋ ನೋಡಿ ಬಳಿಕ ‘ಏನ್ ಗುರು ಕನ್ನಡನ ಇಂಟರ್ನ್ಯಾಷನಲ್ ಗೆ ತಗೊಂಡು ಹೋಗ್ತೀನಿ ಅಂತ ಹೇಳಿ, ಹೆಂಡತಿ ಜೊತೆ ರಸಂ ಮಾಡುತ್ತಿದ್ದೀಯಾ’ ಎಂಬುದಾಗಿ ಕಾಮೆಂಟ್ ಮಾಡಿದ್ದರು.

Chandan-Shetty

ಇದಕ್ಕೆ ಪ್ರತ್ಯುತ್ತರವಾಗಿ ಚಂದನ್ ಶೆಟ್ಟಿ ಕೂಡ ಕಾಮೆಂಟ್ ಮಾಡಿದ್ದು, ‘ ಹೌದು ಗುರು ನಾನು ರಸಂ ಆದ್ರೂ ಮಾಡ್ತೀನಿ, ಕೋಳಿಸಾರು ಆದ್ರೂ ಮಾಡುತ್ತೇನೆ, ನಿಮ್ಮನೆ ಸ್ಟೌ ಮೇಲೆ ಮಾಡುತ್ತಿಲ್ಲವಲ್ಲ ಎಂದು ಖಾರವಾಗಿ ಉತ್ತರ ನೀಡಿದ್ದಾರೆ. ಮತ್ತು ಈಗಾಗಲೇ ನನ್ನ ಕನ್ನಡ ಆಲ್ಬಮ್ ಸಾಂಗ್ ಗಳು ವಿದೇಶದ ಪಬ್ಬುಗಳಲ್ಲಿ ಪ್ಲೇ ಆಗುತ್ತಿವೆ, ಕನ್ನಡ ಆಲ್ಬಮ್ ಸಾಂಗ್ ಪ್ರೋತ್ಸಾಹ ನೀಡುವವರು ಈ ರೀತಿ ಮಾತನಾಡುವುದಿಲ್ಲ, ನೀವು ಹೀಗೆ ನನ್ನ ಬಗ್ಗೆ ಮಾತನಾಡುತ್ತೀರಿ, ನನಗೆ ವೈರಿಗಳು ಇರಬೇಕು ನನ್ನ ಗುರಿಮುಟ್ಟುವವರೆಗೂ ದ್ವೇಷ ಮಾಡುತ್ತಿರಿ’ ಎನ್ನುವ ನಿಟ್ಟಿನಲ್ಲಿ ಚಂದನ್ ಅವರು ಪ್ರತಿಕ್ರಿಯಿಸಿದ್ದಾರೆ. ಮತ್ತು ಹೆಂಡ್ತಿ ಬಗ್ಗೆ ಮಾತಾಡಿದ ವ್ಯಕ್ತಿಗೆ ಉತ್ತರ ನೀಡಿದ್ದು, ಹೆಂಡಿತಿ ಬಗ್ಗೆ ತುಂಬಾ ಚೆನ್ನಾಗಿ ಕೇರ್ ಮಾಡಿದ್ದಾರೆ. ಹೌದು ಮೇಲಿನ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ. ಇದರಲ್ಲಿ ಚಂದನ್ ಮಾತನಾಡಿದ್ದು ಸರಿಯ ತಪ್ಪಾ ತಿಳಿಸಿ, ಅಥವಾ ಅಭಿಮಾನಿ ಕಾಮೆಂಟ್ ಮಾಡಿದ್ದು ಸರಿಯೇ? ತಪ್ಪಾ ? ತಿಳಿಸಿ. ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •