ಡಿ-ಸ್ಕೊ ಗಳಲ್ಲಿ ಹಾಗು ಪ-ಬ್ ಗಳಲ್ಲಿ ಹಿಂದಿ ಅಥವಾ ಇಂಗ್ಲಿಷ್ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದಾಗ, ಅಲ್ಲಿ ಕನ್ನಡಕ್ಕೆ ಆದ್ಯತೆ ಇಲ್ಲದೆ ಇದ್ದಾಗ ಕನ್ನಡ ಹಾಡನ್ನು ಪ್ಲೇ ಮಾಡುವಂತೆ ಮಾಡಿದ್ದು ಕನ್ನಡ ರಾಪರ್ ಚಂದನ್ ಶೆಟ್ಟಿ. ರಾಪ್ ಹಾಡುಗಳು ಎಂದರೆ ಹಿಂದಿ ಇಂಗ್ಲಿಷ್ ಎನ್ನುತ್ತಿದ್ದವರ ನಡುವೆ ಕನ್ನಡದಲ್ಲಿ ರಾಪ್ ಹಾಡುಗಳನ್ನು ಕಂಪೋಸ್ ಮಾಡಿ, ರಾಪ್ ಕಿಂಗ್ ಎನ್ನಿಸಿಕೊಂಡರು ಚಂದನ್ ಶೆಟ್ಟಿ. ಹೊರದೇಶಗಳಲ್ಲಿ ಕೂಡ ಇವರು ಕಂಪೋಸ್ ಮಾಡಿದ್ದ 3 ಪೆ-ಗ್ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಸದ್ಯ ಚಂದನ್ ಶೆಟ್ಟಿ ಅವರ ಹೊಸದಾದ “ನೋಡು ಶಿವ” ಎಂಬ ಹಾಡನ್ನು ಮಾಡುತ್ತಿದ್ದಾರೆ. ಇದರಲ್ಲಿ ಮೇಘ ಶೆಟ್ಟಿ ಸ್ಟೆಪ್ ಹಾಕಿದ್ದಾರೆ.ಇನ್ನು ಇತ್ತೀಚಿನ ದಿನಗಳಲ್ಲಿ ಕಿರುತೆರೆ ಲೋಕದ ಸೆನ್ಸೇಷನ್ ಆಗಿರುವವರು ನಟಿ ಮೇಘಾ ಶೆಟ್ಟಿ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ. ಧಾರಾವಾಹಿ ಜೊತೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಮೇಘಾ ಶೆಟ್ಟಿ ಅವರಿಗೆ ಸಿಕ್ಕಿದ್ದು, ಮೊದಲ ಸಿನಿಮಾದಲ್ಲೇ ಗೋಲ್ಡನ್ ಸ್ಟಾರ್ ಗಣೇಶ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಮೇಘಾ ಶೆಟ್ಟಿ. ರಾಪ್ ಲೋಕದ ಸೆನ್ಸೇಷನ್ ಚಂದನ್ ಶೆಟ್ಟಿ ಮತ್ತು ಕಿರುತೆರೆ ಲೋಕದ ಸೆನ್ಸೇಷನ್ ಮೇಘಾ ಶೆಟ್ಟಿ ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ ಎನ್ನುವ ವಿಷಯ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು.
ಇದೀಗ ಇದರ ಕುರಿತು ಇನ್ನಷ್ಟು ಮಾಹಿತಿಗಳು ಸಿಕ್ಕಿವೆ. ಚಂದನ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ಹಾಡಿನ ಚಿತ್ರೀಕರಣ ಬೆಂಗಳೂರಿನ ಪ್ರತಿಷ್ಠಿದ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಭರ್ಜರಿಯಾಗಿ ನಡೆದಿದ್ದು, ಚಂದನ್ ಮೇಘಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ “ನೋಡು ಶಿವಾ” ಎಂದು ಟೈಟಲ್ ಇಡಲಾಗಿದೆ. ನೋಡು ಶಿವಾ ಹಾಡು ಚಂದನ್ ಮತ್ತು ಪರಾರಿ ಸಿನಿಮಾ ಖ್ಯಾತಿಯ ಸುಮಿತ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಮೊದಲ ಹಾಡಾಗಿದೆ. ಭಜರಂಗಿ ಸಿನಿಮಾ ಖ್ಯಾತಿಯ ಮೋಹನ್ ಅವರು ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ.
ಈ ಹಾಡಿನಲ್ಲಿ 60 ಡ್ಯಾನ್ಸರ್ಸ್ ಗಳು ಮತ್ತು 150 ಜ್ಯೂನಿಯರ್ ಆರ್ಟಿಸ್ಟ್ ಗಳನ್ನು ಬಳಸಿಕೊಳ್ಳಲಾಗಿದೆ. ಚಂದನ್ ಶೆಟ್ಟಿ ಮೇಘಾ ಶೆಟ್ಟಿ ಇಬ್ಬರು ಭರ್ಜರಿಯಾಗಿ ಸ್ಟೆ-ಪ್ಸ್ ಹಾಕಿದ್ದಾರೆ. ಈ ಹಾಡನ್ನು ಮೋನಿಕಾ ಕಲ್ಲೂರಿ ಅವರು ನಿರ್ಮಾಣ ಮಾಡಿದ್ದು, ಶೀಘ್ರದಲ್ಲೇ ವೀಕ್ಷಕರ ಮುಂದೆ ಬರಲಿದೆ. ಚಂದನ್ ಶೆಟ್ಟಿ ಅವರ ಹೊಸ ಹಾಡಿನ ಚಿತ್ರೀಕರಣದಲ್ಲಿ ಮೇಘ ಶೆಟ್ಟಿ ಅವರು ಪಾಲ್ಗೊಂಡಿದ್ದಾರೆ. ಇದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.
ಸದ್ಯ ಕನ್ನಡದ ಕಿರುತೆರೆ ನಟಿ ಮೇಘ ಶೆಟ್ಟಿ ಅವರು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಕೂಡ ಹೊಸ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇದಲ್ಲದೆ ಇವರಿಗೆ ಈಗಾಗಲೇ ಸಾಕಷ್ಟು ಸಿನಿಮಾ ಆಫರ್ ಗಳು ಬರಲು ಶುರುವಾಗಿದ್ದು, ಜೊತೆಜೊತೆಯಲಿ ಧಾರಾವಾಹಿಯ ಚಿತ್ರೀಕರಣದಿಂದ ಬೇರೆ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶಗೋಳ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.