Kid-singing-song

ಡೋಲ್ ಭಾರಿಸುತ್ತಾ,ಸುಮಧುರವಾಗಿ ಹಾಡಿದ ಬಾಲಕ:ಇವನಿಗೊಂದು ಚಾನ್ಸ್ ಸಿಗಬೇಕೆಂದ ನೆಟ್ಟಿಗರು!

Home

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಯಾರೇ ಆಗಲಿ ವೈರಲ್ ಆಗುವುದಕ್ಕೆ ಹೆಚ್ಚಿನ ಸಮಯ ಅಗತ್ಯ ಇರುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಸೋಶಿಯಲ್ ಮೀಡಿಯಾಗಳ ಹೆಚ್ಚುತ್ತಿರುವ ಬಳಕೆದಾರರ ಸಂಖ್ಯೆ. ಕೆಲವು ದಿನಗಳ ಹಿಂದೆ ಸಹದೇವ್ ಬಿರ್ದೋ ಎನ್ನುವ ಬಾಲಕನು ತನ್ನ ಗಾಯನ ಪ್ರತಿಭೆಯನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಜನರ ಮುಂದೆ ತಂದಿದ್ದನು. ಆ ಹುಡುಗ ಹಾಡಿದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಆತನಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.

ಈಗ ಅದರ ಬೆನ್ನಲ್ಲೇ ಮತ್ತೊಬ್ಬ ಪುಟ್ಟ ಬಾಲಕ ತನ್ನ ಹಾಡಿನ ವಿಡಿಯೋ ದಿಂದಾಗಿ ಮೀಡಿಯಾಗಳ ಮೂಲಕ ಜನರ ಗಮನವನ್ನು ಸೆಳೆದಿದ್ದಾನೆ. ಡೋಲ್ ಭಾರಿಸುತ್ತಾ ಪ್ರಖ್ಯಾತ ಗಾಯಕ ಹನಿಸಿಂಗ್ ಅವರ ಹಾಡನ್ನು ಹಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ದಿಗ್ಗಜರಲ್ಲಿ ಒಂದಾಗಿರುವ ಇನ್ಸ್ಟಾಗ್ರಾಂ ನಲ್ಲಿ ಈ ಬಾಲಕನು ಹಾಡಿರುವ ಹಾಡು ಟ್ರೆಂಡ್ ಆಗುತ್ತಾ ಸಾಗುತ್ತಿದೆ.

ವೀಡಿಯೋದಲ್ಲಿನ ಈ ವಿಶೇಷ ಎನಿಸುವ ದೃಶ್ಯವನ್ನು ರೈಲಿನ ಬೋಗಿ ಒಂದರಲ್ಲಿ ಚಿತ್ರೀಕರಿಸಲಾಗಿದ್ದು, ಪುಟ್ಟ ಬಾಲಕನು ಡೋಲನ್ನು ಬಹಳ ಚೆನ್ನಾಗಿ ನುಡಿಸುತ್ತಾ ರಂಜಿಸುವ ಜೊತೆಗೆ, ಆ ಡೋಲಿನ ನಾದಕ್ಕೆ ತಕ್ಕಂತೆ ಹಿಂದಿಯ ಸುಪ್ರಸಿದ್ಧ ರ್ಯಾಪರ್ ಆಗಿರುವ ಹನಿಸಿಂಗ್ ಅವರ ಜನಪ್ರಿಯ ಹಾಡು, ಪಾ ರ್ಟಿ ಆಲ್ ನೈಟ್ ಹಾಡನ್ನು ಹಾಡುವ ಮೂಲಕ ಅಲ್ಲಿರುವ ಜನರಿಗೆ ಭ ರ್ಜ ರಿ ಮನರಂಜನೆಯನ್ನು ನೀಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋ ನೋಡಿದಂತಹ ನೆಟ್ಟಿಗರು ಬಹುತೇಕ ಪಾಸಿಟಿವ್ ಕಮೆಂಟುಗಳನ್ನು ಮಾಡುತ್ತಿದ್ದಾರೆ. ಈ ವೀಡಿಯೋಗೆ ಕಮೆಂಟುಗಳನ್ನು ಮಾಡಿದ ಬಹಳಷ್ಟು ಜನರು ಸಹದೇವನಂತೆ ಈ ಹುಡುಗನಿಗೂ ಕೂಡಾ ಒಂದು ಉತ್ತಮ ಅವಕಾಶ ಸಿಗಬೇಕಿದೆ. ಡೋಲು ಭಾರಿಸುತ್ತಾ ಸುಂದರವಾಗಿ ಹಾಡನ್ನು ಹಾಡುತ್ತಿರುವ ಈ ಹುಡುಗನ ವಿಡಿಯೋ ಕೂಡಾ ವೈರಲ್ ಮಾಡೋಣ ಎಂದಿದ್ದಾರೆ.

ಈ ಹುಡುಗನ ಗಾಯನ ಪ್ರತಿಭೆ ನಿಜಕ್ಕೂ ಅದ್ಭುತವಾಗಿದೆ ಎಂದು ಮೆಚ್ಚುಗೆಗಳನ್ನು ನೀಡುತ್ತಾ, ಆತ ಹಾಡುತ್ತಿರುವ ಪಾರ್ಟಿ ಆಲ್ ನೈಟ್ ಹಾಡು ಬಹಳ ಚೆನ್ನಾಗಿ ಮೂಡಿಬಂದಿದ್ದು ಬಾಲಕನದ್ದು, ಅದ್ಭುತವಾದ ಕಂಠಸಿರಿ ಎಂದು ಹಾಡಿ ಹೊಗಳುತ್ತಿದ್ದಾರೆ. ಹಾಡನ್ನು ಹಾಡುತ್ತಿರುವ ಬಾಲಕನ ಮುಖದಲ್ಲಿರುವ ಮುಗ್ಧತೆಯು ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ಆ ಹುಡುಗ ಹಾಡುವುದರಲ್ಲಿ ತಲ್ಲೀನನಾಗಿ ಹಾಡುತ್ತಿದ್ದರೆ, ಅವನ ಸುತ್ತಮುತ್ತ ಕುಳಿತು ಆ ಹಾಡನ್ನು ಕೇಳುತ್ತಿರುವವರ ಮುಖಗಳಲ್ಲಿ ಒಂದು ಮಂದಹಾಸ ಕಾಣುತ್ತದೆ.

ಬಾಲಕ ತಾನು ಹಾಡುವುದರಲ್ಲಿ ಮನರಂಜನೆ ಪಡೆಯುತ್ತಿದ್ದರೆ, ಜನ ಅದನ್ನು ಕೇಳುವುದರಲ್ಲಿ ಮನರಂಜನೆ ಪಡೆಯುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಒಟ್ಟಾರೆ ವೈರಲ್ ವಿಡಿಯೋ ಮೂಲಕ ನಮ್ಮ ದೇಶದ ರಸ್ತೆಗಳಲ್ಲಿ ಹಾಗೂ ಬೀದಿಗಳಲ್ಲಿ ಇಂತಹ ಅಸಂಖ್ಯಾತ ಅದ್ಭುತ ಪ್ರತಿಭೆಗಳಿದ್ದಾರೆ, ಅವರನ್ನು ಗುರುತಿಸುವ, ಅವರಿಗೊಂದು ಅವಕಾಶ ನೀಡುವ ಅಗತ್ಯ ಎಷ್ಟಿದೆ ಎನ್ನುವುದನ್ನು ತೋರಿಸುತ್ತಿದೆ.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...