ಸುದ್ದಿ ಕೃಪೆ – ಕಲಾಮಾಧ್ಯಮ ಚಾನಲ್- ಸ್ಯಾಂಡಲ್ ವುಡ್ ನಲ್ಲಿ 2007ರಲ್ಲಿ ತೆರೆಕಂಡ ಸಿನಿಮಾ ಚೆಲುವಿನ ಚಿತ್ತಾರ. ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಗಣೇಶ್ ಮತ್ತು ಅಮೂಲ್ಯ ಅವರ ಪಾತ್ರದ ಮರೆಯಲಾಗದ ಒಂದು ಪಾತ್ರ ಬು-ಲ್ಲಿ. ಗ್ಯಾರೇಜ್ ನಲ್ಲಿ ಗಣೇಶ್ ಜೊತೆ ಕೆಲಸ ಮಾಡಿಕೊಂಡು ಮಾಡುವ ಪುಟ್ಟ ಹುಡುಗನ ಪಾತ್ರವದು. ಬು-ಲ್ಲಿ ಪಾತ್ರದಲ್ಲಿ ನಟಿಸಿದ್ದ ಬಾಲನಟನ ನಿಜವಾದ ಹೆಸರು ರಾಕೇಶ್. ಚೆಲುವಿನ ಚಿತ್ತಾರ ಸಿನಿಮಾ ನಂತರ ಈ ಹುಡುಗನ ಡೈಲಾಗ್ ಗಳು ಮತ್ತು ಅಭಿನಯ ಬಹಳ ಫೇಮಸ್ ಆಗಿತ್ತು. ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಬಾಲನಟನಾಗಿ ಬಹಳ ಬೇಡಿಕೆಯಲ್ಲಿದ್ದ ರಾಕೇಶ್ ಇಂದು ನ-ಮ್ಮೊಂದಿಗಿಲ್ಲ. 2017 ರಲ್ಲಿ ತೀವ್ರ ಆರೋಗ್ಯ ಸ-ಮಸ್ಯೆಯಿಂದ ಅ-ಕಾಲಿಕ ಮ-ರಣ ಹೊಂದಿದರು. ಇವರಿಗೆ ಗ್ಯಾo-ಗ್ರೀನ್ ಇತ್ತು, ಕ್ಯಾ-ನ್ಸರ್ ಇತ್ತು , ಎಂದೆಲ್ಲ ಸು-ಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ಹ-ಬ್ಬಿದ್ದವು. ಆದರೆ ನಿಜಕ್ಕೂ ನಡೆದಿರುವುದೇ ಬೇರೆ. ರಾಕೇಶ್ ಅಕಾಲಿಕ ನಿ-ಧನದ ಕುರಿತು ಅವರ ತಾಯಿ ಖಾಸಗಿ ಸಂದರ್ಶನ ಒಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ..

chaluvina-chittar

ಬಾಲನಟ ರಾಕೇಶ್ ತಾಯಿ ಆಶಾರಾಣಿ ಇವರು ಕೂಡ ನಾಟಕ, ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವವರು. ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅಮೂಲ್ಯ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದರು. ಪ್ರಸ್ತುತ ಉದಯ ಟಿವಿಯಲ್ಲಿ ಪ್ರಸಾರವಾಗುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಾಕೇಶ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಚಾನಕ್ಕಾಗಿ. ತಾಯಿ ಮನೆಯಲ್ಲಿ ಏನೋ ಮರೆತಿದ್ದರಿಂದ ಅದನ್ನು ಕೊಡಲು ಸಿನಿಮಾ ಸೆಟ್ ಗೆ ತಂದೆಯೊಡನೆ ಹೋದಾಗ ನಿರ್ದೇಶಕ ಎಸ್.ನಾರಾಯಣ್ ಅವರು ರಾಕೇಶ್ ನನ್ನು ನೋಡಿ ಬು-ಲ್ಲಿ ಪಾತ್ರವನ್ನ ರಾಕೇಶ್ ಅವರಿಗೆ ನೀಡಿದರು. ಚೆಲುವಿನ ಚಿತ್ತಾರ ಸಿನಿಮಾದ ಬು-ಲ್ಲಿ ಪಾತ್ರ ಪಪ್ಪುಸಿ ಡೈಲಾಗ್ ಇಂದಿಗೂ ಜನಪ್ರಿಯ. ಈ ಡೈಲಾಗ್ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿತ್ತು ಎಂದರೆ ಇದಾದ ನಂತರ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ರಾಕೇಶ್ ಗೆ ಸಿಕ್ಕಿತು.

DFXHFCHGFH

ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ಜೊತೆ ಭಜರಂಗಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಹುಡುಗರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಯ್, ಅರ್ಜುನ್, ಯಶ್ ಅವರ ಜೊತೆ ಮೊದಲಾ ಸಲ, ದುನಿಯಾ ವಿಜಯ್ ಅವರ ಜೊತೆ ಜಾನಿ ಮೇರಾ ನಾಮ್ ಸೇರಿದಂತೆ 50ಕ್ಕು ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದರು ರಾಕೇಶ್. ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಮಿಂಚುವ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿ-ಧಿಯ ಕೈವಾಡ ಕನಸುಗಳು ನನಸಾಗುವ ಮುನ್ನವೇ ರಾಕೇಶ್ ಕ-ಣ್ಮುಚ್ಚಿದರು.. ನಟಿ ಆಶಾರಾಣಿ ಅವರಿಗೆ ಎರಡನೇ ಮಗ ರಾಕೇಶ್. ಮನೆಯಲ್ಲಿ ಅಮ್ಮನ ಜೊತೆ ಬಹಳ ಫ್ರೆo-ಡ್ಲಿ ಆಗಿ ಇರುತ್ತಿದ್ದ ರಾಕೇಶ್, ಕಷ್ಟದಲ್ಲಿದ್ದ ತಾಯಿಯನ್ನು ನೋಡಿ “ಅಮ್ಮ ನಾನು ನಿನ್ನನ್ನು ರಾಣಿಯ ಹಾಗೆ ಬಹಳ ಚೆನ್ನಾಗಿ ನೋಡಿಕೊಳ್ತೀನಿ.. ಹೀರೋ ಆಗಿ ಹೆಸರು ಮಾಡ್ತೀನಿ.. ಕ-ಷ್ಟದಲ್ಲಿ ಇರುವವರಿಗೆ ಸಹಾಯ ಮಾಡ್ತೀನಿ..” ಎನ್ನುತ್ತಾ ಧೈ-ರ್ಯ ನೀಡುತ್ತಿದ್ದರಂತೆ. ರಾಕೇಶ್ ಅವರಿಗೆ ನಟನೆ ಜೊತೆ ಡ್ಯಾನ್ಸ್ ಎಂದರೆ ಬಹಳ ಆಸಕ್ತಿ ಇತ್ತು. ಡ್ಯಾನ್ಸ್ ಕಲಿಯಲು ಆಸಕ್ತಿ ಇರುವವರಿಗೆ ಡ್ಯಾನ್ಸ್ ಕಲಿಸಬೇಕೆಂದು ಡ್ಯಾನ್ಸ್ ಸ್ಕೂಲ್ ಸಹ ಆರಂಭಿಸಿದ್ದರು, ತಮ್ಮ ತಂಡದೊಡನೆ ಹಲವಾರು ಕಾರ್ಯಕ್ರಮಗಳನ್ನು ಕೂಡ ನೀಡಿದ್ದರು.

ಡ್ಯಾನ್ಸ್ ಕ್ಲಾಸ್ ಪಕ್ಕದಲ್ಲಿದ್ದ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಬ್ಲ-ಡ್ ಟೆಸ್ಟ್ ಮಾಡಿಸಿಕೊಂಡು ಬಂದು ಅಮ್ಮ ನನಗೆ ಜಾo-ಡೀಸ್ ಆಗಿದೆ ಎಂದಾಗ ನಿನಗೆ ಏನಾಗಿಲ್ಲ ಕಣೋ ಯಾಕೆ ಚಿಂತೆ ಮಾಡ್ತಿಯ ಎಂದರಂತೆ. ನಾಲ್ಕೈದು ದಿನಗಳ ನಂತರ ಡ-ಲ್ ಆಗಿ ಮನೆಗೆ ಬಂದು ಆರೋಗ್ಯ ಸ-ಮಸ್ಯೆ ಬಗ್ಗೆ ಹೇಳಿಕೊಂಡಾಗ ಗಾ-ಬರಿಗೊಂಡ ತಾಯಿ, ಚಿಕಿತ್ಸೆ ಕೊಡಿಸಲು ಅವರ ಫ್ಯಾಮಿಲಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರಂತೆ. ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ರಾಕೇಶ್ ಗೆ ಪ್ಲೇ-ಟ್ ಲೇಟ್ ಕೌo-ಟ್ ಬಹಳ ಕಡಿಮೆ ಇದೆ, 75,000 ಮಾತ್ರ ಇದೆ ಎನ್ನುವ ವಿಷಯ ತಿಳಿದುಬಂದಿದೆ. ಮುಂದಿನ ದಿನ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ಪ್ಲೇಟ್ ಲೆಟ್ ಕೌಂಟ್ 45,000 ಬಂದಿದೆ. ನಂತರ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಬೋ-ನ್ ಮ್ಯಾ-ರೋ ಮಾಡಿಸಿದ ನಂತರ ಆರೋಗ್ಯ ಸ್ವಲ್ಪ ಸುಧಾರಿಸಿದೆ.

chittar2

ಲ್ಯಾ-ಪ್ರೋಸ್ಕೊಪಿ ಮಾಡಿದರೆ ಸರಿಹೋಗುತ್ತದೆ ಎಂದು ವೈದ್ಯರು ತಿಳಿಸಿ, ಲ್ಯಾ-ಪ್ರೋಸ್ಕೊಪಿ ಮಾಡಿಸಿದ್ದಾರೆ. ಒಂದೆರಡು ದಿನಗಳ ನಂತರ ರಾಕೇಶ್ ಅವರಿಗೆ ಉಸಿರಾಟದ ತೊಂದರೆ ಹಾಗು ತಿನ್ನಲು ಕಷ್ಟವಾಗಿದೆ. ಆಗ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ತಿಳಿದುಬಂದ ವಿಷಯ, ಲ್ಯಾ-ಪ್ರೋಸ್ಕೊಪಿ ಮಾಡುವ ಸಂದರ್ಭದಲ್ಲಿ ಅದಕ್ಕೆ ಬಳಸಿದ್ದ ಡಿವೈಸ್ ರಾಕೇಶ್ ಅವರ ಕ-ರುಳನ್ನು ಕ-ತ್ತರಿಸಿಕೊಂಡು ಹೋಗಿದೆ. ಕ-ರುಳಿನ 80 ಭಾಗ ನಾ-ಶವಾಗಿದ್ದು 20 ಭಾಗ ಮಾತ್ರ ಕೆಲಸ ಮಾಡುತ್ತಿದೆ. ಆ ಸಮಯದಲ್ಲಿ ಆ ಹುಡುಗನ ದೇ-ಹದಿಂದ ಪ್ರತಿದಿನ ಕ-ರುಳನ್ನು ಹೊರತೆಗೆದು ಸ್ವ-ಚ್ಛಗೊಳಿಸಿ ಮತ್ತೆ ಅದನ್ನು ದೇಹದ ಒಳಗೆ ಸೇರಿಸಲಾಗುತ್ತಿತ್ತು ಎಂದು ರಾಕೇಶ್ ತಾಯಿ ಆಶಾರಾಣಿ ಬಹಳ ನೋ-ವಿನಿಂದ ಕ-ಣ್ಣೀರಿಡುತ್ತಾ ಹೇಳಿದ್ದಾರೆ. 65 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರಾಕೇಶ್ ಗೆ 7 ಬಾರಿ ಚಿಕಿತ್ಸೆ ನಡೆಸಲಾಗಿದೆ. ಆದರೆ ಏನೇ ಮಾಡಿದರೂ ರಾಕೇಶ್ ರನ್ನು ಉ-ಳಿಸಿಕೊಳ್ಳಲಾಗಲಿಲ್ಲ.

ವೈದ್ಯರ ಅಸ-ಡ್ಡೆಯಿಂದ ಇನ್ನು ಬಾಳಿ ಬ-ದುಕಿ ಸಾಧನೆ ಮಾಡಬೇಕಿದ್ದ ಜೀವ ನಿ-ಧ-ನವಾಯಿತು. ಪುತ್ರ ಶೋ-ಕ ನಿರಂತರಂ ಎನ್ನುವಂತೆ ರಾಕೇಶ್ ತಾಯಿಗೆ ಮಗ ಇ-ಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುವುದು ಇಂದಿಗೂ ಕಷ್ಟವಾಗಿದೆ. ಈ ದಿನವು ಪ್ರತಿದಿನ ಮಗನ ನಂಬರ್ ಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳಿಸಿಯೇ ತಮ್ಮ ದಿನವನ್ನು ಶುರು ಮಾಡುತ್ತಾರೆ. ಪ್ರೀತಿ ಭರವಸೆ ನೀಡಿ ಜೀವನಕ್ಕೆ ಧೈ-ರ್ಯ ತುಂಬುತ್ತಿದ್ದ ಮಗ ಅಷ್ಟು ಕಷ್ಟಪಟ್ಟು ಕಣ್ಣೆದುರೇ ಪ್ರಾ-ಣ ಬಿಟ್ಟಾಗ ಆ ತಾಯಿಯ ಪ-ರಿಸ್ಥಿತಿ ಊ-ಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಮಗನನ್ನು ಮತ್ತೊಮ್ಮೆ ನೋಡುವ ಆಸೆಯಿಂದ 20 ಲಕ್ಷ ಖರ್ಚು ಮಾಡಿದರು ಮಗ ಬದುಕಿ ಬರಲಿಲ್ಲ. ಇಂದು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಆಶಾರಾಣಿ ಅವರ ಕಟುಂಬಕ್ಕೆ ನೆರವಾಗಿ ನಿಲ್ಲಲು ಯಾರು ಇಲ್ಲ. ರಾಕೇಶ್ ಸಹೋದರ ಕೂಡ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕ-ಷ್ಟಪಡುತ್ತಿದ್ದಾರೆ. ಆಶಾರಾಣಿ ಅವರ ಕುಟುಂಬ ಪಟ್ಟಂತ ಕ-ಷ್ಟಗಳು, ತಾಯಿಯಾಗಿ ಮಗನನ್ನು ಆ ಸ್ಥಿತಿಯಲ್ಲಿ ನೋಡಿ ಆಶಾರಾಣಿ ಅವರು ಅನುಭವಿಸಿರುವ ಇನ್ನು ಅ-ನುಭವಿಸುತ್ತಿರುವ ನೋ-ವು ಯಾವ ತಾಯಿಗು ಬ-ರದೆ ಇರಲಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •