ಕನ್ನಡ ಕಿರುತೆರೆಯಲ್ಲಿ ಹ್ಯಾಂಡ್ಸಮ್ ಹುಡುಗ ಎನಿಸಿಕೊಂಡ ವಿಜಯ ಸೂರ್ಯ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಅಗ್ನಿಸಾಕ್ಷಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ನಟರಾಗಿ ಗುರುತಿಸಿಕೊಂಡ ಇವರು ಸಾಕಷ್ಟು ಯುವ ಮನಸ್ಸು ಹುಡುಗಿಯರ ಹೃದಯವನ್ನು ಕದ್ದವರು.

ಇನ್ನು ಇವರು ಇತ್ತೀಚಿಗಷ್ಟೇ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹೀಗೆ ಅಗ್ನಿಸಾಕ್ಷಿಯ ಮೂಲಕ ಬಣ್ಣದ ಲೋಕಕ್ಕೆ ಬಂದ ವಿಜಯ ಸೂರ್ಯ ಅವರು 2019ರಲ್ಲಿ ಚೈತ್ರ ಎಂಬುವರನ್ನು ಮದುವೆಯಾದರು. ಚೈತ್ರ ಅವರು ವೃತ್ತಿಯಿಂದ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ಹೌದು ವಿಜಯ್ ಸೂರ್ಯ ಅವರು ಚೈತ್ರ ಅವರೊಂದಿಗೆ 2019ರಲ್ಲಿ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಇದೀಗ ಅವರ ಮದುವೆಯ ಅಲ್ಬಮ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಆ ವಿಡಿಯೋವನ್ನು ನೀವು ಇಲ್ಲಿ ವೀಕ್ಷಿಸಬಹುದು.

ಹೌದು ನಟ ವಿಜಯ್ ಸೂರ್ಯ ಹಾಗೂ ಚೈತ್ರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೊನ್ನೆಯಷ್ಟೇ ಎರಡು ವರ್ಷ ತುಂಬಿದೆ. ಇನ್ನು ಇದೀಗ ಅವರ ಮದುವೆಯಾದ ವಿಡಿಯೋ ವೈರಲ್ ಆಗಿದ್ದು, ಈ ಜೋಡಿ ಸಾಕಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದೆ. ಇನ್ನು ಚೈತ್ರ ಹಾಗೂ ವಿಜಯ್ ಸೂರ್ಯ ಅವರ ಎರಡು ಕುಟುಂಬಗಳು ಸುಮಾರು ಒಂಬತ್ತು ವರ್ಷಗಳಿಂದ ಪರಿಚಿತರಾಗಿದ್ದರು. ವಿಜಯ್ ಸೂರ್ಯ ಅವರ ತಾಯಿಗೆ ಚೈತ್ರ ಅವರ ನಡತೆ ಹಾಗೂ ಅವರ ವ್ಯಕ್ತಿತ್ವ ಇಷ್ಟವಾಗಿ ತಮ್ಮ ಮಗನಿಗೆ ಅವರನ್ನು ತಂದು ಕೊಳ್ಳಬೇಕೆಂದು ನಿಶ್ಚಯಿಸಿದರು. ಇನ್ನು ವಿಜಯ್ ಸೂರ್ಯ ಅವರು ತಮ್ಮ ತಾಯಿ ಇಷ್ಟದಂತೆ ಚೈತ್ರ ಅವರನ್ನು ಮದುವೆಯಾದರು.

ಎರಡು ಕುಟುಂಬಗಳು ಸುಮಾರು ಒಂಬತ್ತು ವರ್ಷಗಳಿಂದ ಪರಿಚಿತರಾಗಿದ್ದರು ಕೂಡ ಚೈತ್ರ ಮತ್ತು ವಿಜಯಸೂರ್ಯ ಭೇಟಿಯಾಗಿದ್ದು ಕೇವಲ ಒಂದೆರಡು ಬಾರಿ ಮಾತ್ರ. ನಂತರ ಎರಡು ಕುಟುಂಬಗಳು ಜೊತೆಗೂಡಿ ಜಾತಕ ತೆಗೆದು ನೋಡಿದಾಗ ಕೂಡಿ ಬಂದಿತ್ತು. ನಂತರ ಎರಡು ಕುಟುಂಬಗಳು ಒಪ್ಪಿಕೊಂಡು ಶಾಸ್ತ್ರೋಕ್ತವಾಗಿ 2019 ಫೆಬ್ರುವರಿ 14ರಂದು ಈ ಜೋಡಿಗೆ ಮದುವೆಮಾಡಿಸಿದರು. ಇದೀಗ ವಿಜಯ್ ಸೂರ್ಯ ಹಾಗೂ ಚೈತ್ರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ಅವರ ಮದುವೆಯ ಆಲ್ಬಮ್ ವಿಡಿಯೋವನ್ನು ನೀವು ಈ ಕೆಳಗೆ ವೀಕ್ಷಿಸಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •