ಇದೀಗ ಭಾರತ ದೇಶ ಸಂಪೂರ್ಣವಾಗಿ ಡಿಸ್ಟರ್ಬ್ ರೂಪದಲ್ಲಿ ಬದಲಾಗುತ್ತಿದೆ. ಹೌದು ಇದೀಗ ಮುಂಜಾನೆಯಿಂದ ಸಂಜೆವರೆಗೆ ಎಲ್ಲಾ ಕೆಲಸಗಳು ಕೂಡ ಡಿಜಿಟಲ್ ರೂಪದಲ್ಲಿ ಮಾಡಲು ಸರ್ಕಾರ ಮುಂದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಡಿಜಿಟಲ್ ನಲ್ಲಿ ಮಾಡಬಹುದಾಗಿದೆ. ಇನ್ನು ಇದೀಗ ಡಿಜಿಟಲ್ ಸೇವೆ ಸಾರಿಗೆ ಹಾಗೂ ಟ್ರಾಫಿಕ್ ಇಲಾಖೆಗೂ ಕೂಡ ಮೀಸಲಾಗಿದ್ದು, ಸಾಕಷ್ಟು ಬದಲಾವಣೆಗಳು ಈಗಾಗಲೇ ಆಗಿದೆ. ಇದೀಗ ಮತ್ತೊಂದು ಬದಲಾವಣೆ ಹೊರಬಿದ್ದಿದೆ. ಹೌದು ಇದೀಗ ವಾಹನಗಳು ಹಾಗೂ ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಡ್ರೈವಿಂಗ್ ಲೈಸೆನ್ಸ್ ಹೊಂದಿದವರಿಗೆ ಎರಡು ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಹಾಗಾದರೆ ಅವು ಏನು ಎಂಬುದರ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಈ ಮೊದಲು ಬೇರೆ ಬೇರೆ ರಾಜ್ಯಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತಿತ್ತು. ಆದರೆ ಇದೀಗ ಹಾಗೆ ಇಲ್ಲ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಎಲ್ಲಾ ಡ್ರೈವಿಂಗ್ ಲೈಸೆನ್ಸ್ ಕೂಡ ಒಂದೇ ಆಗಿವೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಸ್ಮಾರ್ಟ್ ಕಾರ್ಡ್ ಬಣ್ಣ, ಸುರಕ್ಷತಾ ಸೆಕ್ಯೂರಿಟಿ, ಅದರ ವಿನ್ಯಾಸ ಒಂದೇ ರೀತಿಯಲ್ಲಿ ಇರಲಿದೆ. ಇನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡುವ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕ್ಯೂಆರ್ ಕೋಡ್ ಹಾಗೂ ಮೈಕ್ರೋಚಿಪ್ ಕೂಡ ಒಂದೇ ರೀತಿಯಲ್ಲಿ ಇರಲಿದೆ. ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವ್ಯಕ್ತಿಯ ಸಂಪೂರ್ಣವಾದ ವಿವರಣೆಗಳು ಈ ಮೈಕ್ರೋಚಿಪ್ ನಲ್ಲಿ ಇರಲಿವೆ. ಇನ್ನು ಇದರಿಂದ ಯಾವುದೇ ವ್ಯಕ್ತಿ ಟ್ರಾಫಿಕ್ ನಿಯಮಗಳನ್ನು ಮುರಿದಾಗ ಕ್ಯೂಆರ್ ಕೋಡ್ ಅಥವಾ ಮೈಕ್ರೋಚಿಪ್ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಇನ್ನು ಟ್ರಾಫಿಕ್ ನಿಯಮಗಳಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಮಹತ್ವದ ಇನ್ನೊಂದು ನಿಯಮವೆಂದರೆ, ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಇನ್ನು ಇದರಿಂದ ಹಲವಾರು ಅನುಕೂಲಗಳು ಇದ್ದು, ಹಲವಾರು ಕಾರಣಗಳಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ ಬಳಕೆ ಮಾಡುವ ಹಾಗೂ ಕೆಲವು ಸುರಕ್ಷಿತ ಕ್ರಮಗಳಿಂದಾಗಿ ಐರಿಸ್ ಬೆರಳಚ್ಚು ಬಯೋಮೆಟ್ರಿಕ್ ದಾಖಲೆಗಳನ್ನು ಹೊಂದಿರುವ ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಗೆ ಲಿಂಕ್ ಮಾಡುವುದರಿಂದ ಡುಬ್ಲಿಕೇಟ್ ಲೈಸೆನ್ಸ್ ತಡೆಗಟ್ಟಬಹುದಾಗಿದೆ. ಈ ಹಿನ್ನಲೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಸದ್ಯದಲ್ಲಿಯೇ ಜಾರಿಗೆ ತರುವುದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •