ಈಗ ಇಂತಹುದೇ ಒಂದು ಗೋಮಾತೆಯ ಅಂದರೆ ಹಸುವಿನ ಪುಟ್ಟ ಕಂದಮ್ಮನಾದ ಕರುವಿನ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.

ಟ್ವಿಟರ್ ಹಾಗೂ ಫೇಸ್ ಬುಕ್ ಹಾಗೂ ಇನ್ನೂ ಕೆಲವು ಸುದ್ದಿ ಮಾದ್ಯಮಗಳಲ್ಲಿ ಕೂಡಾ ಈ ಕರುವಿನ ವೀಡಿಯೋ ವೈರಲ್ ಆಗುತ್ತಿದ್ದು, ಬಹಳ ಮುದ್ದಾದ ಈ ಕರವನ್ನು ನೋಡಿದವರೆಲ್ಲಾ ಕೂಡಾ ಮೆಚ್ಚುಗೆ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯದಲ್ಲಿ ಈ ಕರುವಿನ ವೀಡಿಯೋ ಮನಸ್ಸಿಗೆ ಮುದವನ್ನು ನೀಡುತ್ತಿದೆ. ಪುಟ್ಟ ಕರುವಿನ ಆ ಮುಗ್ಧ ನೋಟ, ಅದಕ್ಕೆ ಕಟ್ಟಿರುವ ಗೆಜ್ಜೆಗಳು ಅದು ಓಡಾಡುವಾಗ ಮಾಡುವ ಸದ್ದು, ಪುಟ್ಟ ಮಗುವೊಂದು ಮನೆಯಲ್ಲಿ ಓಡಾಡಿದಂತೆ ಭಾಸವಾಗುವ ಹಾಗೆ ಕಾಣುವುದು ವಾಸ್ತವ. ಕರುವಿನ ಸುಂದರವಾದ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರು ಆ ಕರುವಿನ ಬಗ್ಗೆ ಕೆಲವು ಸಾಲುಗಳ ಮೂಲಕ ಅದರ ಬಗ್ಗೆ ಬರೆದು ವಿವರಣೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಕರುವಿನ ವೀಡಿಯೋ ಶೇರ್ ಮಾಡಿದವರು, ಮನೆಯಲ್ಲಿ ಪುಂಗನೂರು ಹಸುವಿನ ಕರು ಎಂದು ಅವರ ಪ್ರಬೇಧ ಯಾವುದು ಎಂಬುದನ್ನು ತಿಳಿಸಿ, ಪುಂಗನೂರು ಹಸುಗಳು ಪ್ರಸ್ತುತ ಅಳಿವಿನಂಚಿನಲ್ಲಿರುವ ಜಾತಿಯಾಗಿದೆ ಎನ್ನುವ ವಾಸ್ತವ ಅಂಶದ ಕಡೆಗೆ ಎಲ್ಲರ ಗಮನವನ್ನು ಕೂಡಾ ಸೆಳೆದಿದ್ದಾರೆ. ಕರುವು ನೋಡಲು ಬಹಳ ಸುಂದರವಾಗಿದೆ ಎನ್ನುತ್ತಾ ಸಾಮಾನ್ಯವಾಗಿ ಈ ಪ್ರಬೇಧದ ಹಸುಗಳು 3-4 ಅಡಿ ಎತ್ತರಕ್ಕೆ ಬೆಳೆಯುತ್ತವೆ ಮತ್ತು ಅವುಗಳು ಸುಮಾರು 150-200 ಕೆ.ಜಿ ತೂಕವಿರುತ್ತವೆ ಹಾಗೂ ಅವು ದಿನಕ್ಕೆ 4-5 ಲೀಟರ್ ನಷ್ಷು ಹೆಚ್ಚಿನ ಕೊಬ್ಬಿನ ಹಾಲನ್ನು ನೀಡುತ್ತವೆ ಎಂದು ವಿವರಣೆಯನ್ನು ನೀಡಿದ್ದಾರೆ.

ಟ್ವಿಟರ್ ನಲ್ಲಿ ಶೇರ್ ಆದ ಈ ವೀಡಿಯೋ ವನ್ನು ಈಗಾಗಲೇ ಎಂಟು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಎಂಟು ಸಾವಿರಕ್ಕಿಂತಲೂ ಅಧಿಕ ಮಂದಿ ಈ ವೀಡಿಯೋವನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಇನ್ನು ವೀಡಿಯೋ ಇಷ್ಟ ಪಟ್ಟವರ ಸಂಖ್ಯೆ ಈಗಾಗಲೇ 38 ಸಾವಿರದ ಗಡಿಯನ್ನು ದಾಟಿದ್ದು, ಇನ್ನೂ ಕೂಡಾ ಮೆಚ್ಚುಗೆಗಳು ಹರಿದು ಬರುತ್ತಿದೆ. ವೀಡಿಯೋ ಕೆಲವೇ ಸೆಕೆಂಡ್ ಗಳೇ ಆದರೂ ಕರುವಿನ ಪುಟ್ಟ ಪುಟ್ಟ ಹೆಜ್ಜೆಗಳು, ಅದರ ಮುಖದಲ್ಲಿನ ಮುಗ್ಧತೆಯು ನೋಡುಗರ ಮನಸ್ಸನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿರುವುದೇ ಈ ವೀಡಿಯೋ ಇಷ್ಟು ವೈರಲ್ ಆಗಲು ಕಾರಣವಾಗಿದೆ.

ವಿಡಿಯೋ ನೋಡಿ

ಇನ್ನು ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಕೂಡಾ ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ನೀಡುತ್ತಾ‌ ಸಾಗಿದ್ದಾರೆ. ಕೆಲವರು ಈ ಕರುವಿನ ಹೆಸರಿನಲ್ಲಿ ಒಂದು ಟ್ವಿಟರ್ ಅಕೌಂಟ್ ಮಾಡಿ ಅದರ ಆಟ, ಚಟುವಟಿಕೆಗಳ ಬಗ್ಗೆ ವೀಡಿಯೋ ಹಂಚಿಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ. ಇನ್ನೂ ಕೆಲವರು ಅದು ಇನ್ನೂ ಎಳೆಯದಾಗಿದೆ ದಯವಿಟ್ಟು ಅದನ್ನು ಹೆಚ್ಚು ಸಮಯ ಅದರ ತಾಯಿಯ ಜೊತೆ ಇರಲು ಬಿಡಿ ಎನ್ನುವ ಸಲಹೆಯನ್ನು ನೀಡಿದ್ದಾರೆ. ಮತ್ತೆ ಕೆಲವರು ಟೈಲ್ಸ್ ನೆಲದ ಮೇಲೆ ಅದು ಜಾರಿ ಬೀಳಬಹುದು ಎಚ್ಚರ ವಹಿಸಿ ಎನ್ನುವ ಸಲಹೆಯನ್ನು ಕೂಡಾ ನೀಡಿದ್ದಾರೆ.‌

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •