ರಸ್ತೆ ಸುರಕ್ಷಿತ ನಿಯಮಗಳ ಪಾಲನೆ ಎನ್ನುವುದು ಇಂದಿನ ದಿನಗಳಲ್ಲಿ ಅಕ್ಷರಶಃ ಪಾಲಿಸಲೇಬೇಕಾದ ನಿಯಮಾವಳಿಗಳಾಗಿವೆ. ಇದನ್ನು ಸರ್ಕಾರದ ನಿಯಮ ಎಂದು ಪಾಲಿಸುವ ಮನಸ್ಸಿಲ್ಲದೇ ಹೋದರೂ ನಮ್ಮ ಹಾಗೂ ನಮ್ಮವರ ಜೀವನಕ್ಕಾಗಿ ನಾವೆಲ್ಲ ಇದನ್ನು ನಮ್ಮ ಕರ್ತವ್ಯ ಎಂದು ತಿಳಿದು ಪಾಲನೆ ಮಾಡಿದರೆ ಅದೆಷ್ಟೋ ಪ್ರಾಣಗಳು ಉಳಿಯುತ್ತವೆ. ಸಾಮಾನ್ಯವಾಗಿ ಬಸ್ಸು ಗಳಲ್ಲಿ ಸಂಚಾರ ಮಾಡುವಾಗ ಪ್ರಯಾಣಿಕರಿಗೆ ಕಿಟಕಿಯಿಂದ ತಲೆಯನ್ನು ಹೊರಗೆ ಇಡಬೇಡಿ ಎಂದು ಮುನ್ನೆಚ್ಚರಿಕೆಯನ್ನು ನೀಡಲಾಗುತ್ತದೆ. ಇದು ಕೂಡಾ ಒಂದು ಸುರಕ್ಷತೆಯ ಮಾರ್ಗಸೂಚಿಯೇ ಆಗಿದೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ತಲೆ ಹೊರಗೆ ಇಡಬೇಕಾಗಿ ಬಂದರೆ ಆಗಲೂ ಪರ್ಯಾಯ ವ್ಯವಸ್ಥೆ ನೋಡಿ ಕೊಳ್ಳುವುದು ಉತ್ತಮ. ಏಕೆಂದರೆ ರಸ್ತೆಯ ಯಾವ ಬದಿಯಿಂದ ಬೇಕಾದರೂ ವಾಹನಗಳು ನುಗ್ಗಿ ಬರಬಹುದು.

ಖಾಂಡ್ವಾ ಮತ್ತು ಇಚ್ಛಾಪುರ ನಗರಗಳ ನಡುವಿನ ಹೈವೆಯಲ್ಲಿ ಬಸ್ಸೊಂದು ತನ್ನ ನಿತ್ಯದ ಹಾಗೆ ಸಂಚಾರ ಹೊರಟಿತ್ತು. ಈ ವೇಳೆ ಬಸ್ಸಿನೊಳಗೆ 11 ವರ್ಷದ ಬಾಲಕಿಯೊಬ್ಬಳು ಬಸ್‌ ನ ಚಾಲಕನ ಹಿಂಭಾಗದ ಸೀಟಿನಲ್ಲಿ ಕುಳಿತುಕೊಂಡಿದ್ದರು. ಹೀಗೆ ಮುಂದೆ ಸಾಗುತ್ತಿದ್ದ ಬಸ್ ಒಳಗಿಂದ ಆ ಹುಡುಗಿ ವಾಂತಿ ಆಗುತ್ತಿದೆ ಎಂದು ವಾಂತಿ ಮಾಡಲು ಕಿಟಕಿಯಿಂದ ತನ್ನ ತಲೆಯನ್ನು ಹೊರಗೆ ಇಟ್ಟಿದ್ದಾಳೆ. ಆದರೆ ದುರದೃಷ್ಟವಶಾತ್ ಅದೇ ವೇಳೆಗೆ ಮುಂದಿನಿಂದ ಬಂದಂತಹ ಲಾರಿಯೊಂದು ಬಸ್ಸಿಗೆ ಸೈಡಿನಿಂದ ಡಿಕ್ಕಿ ಹೊಡೆಯುತ್ತಾ, ಬಸ್ಸನ್ನು ಘರ್ಷಿಸುತ್ತಾ ಮುಂದೆ ಸಾಗಿ ಹೋಗಿದೆ. ಈ ಹೊಡೆತದ ಪರಿಣಾಮವಾಗಿ ಕಿಟಕಿಯಿಂದ ತಲೆಯನ್ನು ಹೊರಗೆ ಇಟ್ಟಿದ್ದ ಬಾಲಕಿಯ ತಲೆ ಅವಳ ದೇಹದಿಂದ ಪ್ರತ್ಯೇಕವಾಗಿದೆ. ಈ ದೃಶ್ಯವು ಬಹಳ ಭ ಯಾ ನ ಕವಾಗಿದ್ದು, ಬಹುತೇಕ ಎಲ್ಲ ಮಾಧ್ಯಮಗಳು ಕೂಡಾ ಫೋಟೋವನ್ನು ಬ್ಲರ್ ಮಾಡಿ ಪೋಸ್ಟ್ ಹಾಕಿದೆ. ಇನ್ನು ಈ ಫೋಟೋ ಹಾಕಿರುವ ಪ್ರಮುಖ ಉದ್ದೇಶವು ಜನರಲ್ಲಿ ಜಾಗೃತಿಯನ್ನು ಮೂಡಿಸುವುದಾಗಿದೆ.

Bus

ಈ ಹೃದಯವಿದ್ರಾವಕ ಘಟನೆಯ ಬಗ್ಗೆ ದೇಶ ಗಾವ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯು ಮಾತನಾಡುತ್ತಾ, ಪ್ರಭಾತ್ ಹೆಸರಿನ ಬಸ್ ಪ್ರತಿದಿನ 8:00 ಗಂಟೆಗೆ ಖಾಂಡ್ವದಿಂದ ಇಂದೋರ್ ನ ಕಡೆಗೆ ಚಲಿಸುತ್ತದೆ. ಅಂದು ಬೆಳಿಗ್ಗೆ ಒಂಬತ್ತು ಗಂಟೆಯ ಸಮಯದಲ್ಲಿ ಬಸ್ಸು ರೋಷಿಯಾ ಫೇಟ್ ನಲ್ಲಿರುವ ಕಾಶ್ಮೀರಿ ಕಾಲುವೆಯ ಬಳಿ ತಲುಪಿದಾಗ, ಬಾಲಕಿಯು ವಾಂತಿಯನ್ನು ಮಾಡಲು ಕಿಟಕಿಯಿಂದ ತನ್ನ ತಲೆಯನ್ನು ಹೊರಗೆ ಇಟ್ಟಿದ್ದಾಳೆ. ಇದೇ ಸಮಯದಲ್ಲಿ ಎದುರಿನಿಂದ ಬಂದಂತಹ ಟ್ರಕ್ಕು ಬಸ್ಸನ್ನು ಒಂದು ಬದಿಯನ್ನು ಘರ್ಷಿಸುತ್ತಾ ಮುಂದೆ ಸಾಗಿದ್ದು, ಆ ಘರ್ಷಣೆಯಲ್ಲಿ ತಲೆ ಹೊರಗಿಟ್ಟಿದ ಬಾಲಕಿ ತಮನ್ನಾಳ ಶಿರವು ಅವಳ ದೇಹದಿಂದ ಬೇರ್ಪಟ್ಟು ರಸ್ತೆಯ ಮೇಲೆ ಬಿದ್ದಿದೆ ಎಂದಿದ್ದಾರೆ.

ಅ ಪ ಘಾ ತಕ್ಕೆ ಕಾರಣವಾದ ಟ್ರಕ್ಕನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಚಾಲಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ದೂರನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ಈ ಪ್ರಕರಣವು ಕಳೆದ ಮಂಗಳವಾರ ಬೆಳಿಗ್ಗೆ ಒಂಬತ್ತು ಗಂಟೆಯ ಸಮಯದಲ್ಲಿ ದೇಶಗಾಂವ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೋಷಿಯ ಫೇಟ್ ಬಳಿ ಸಂಭವಿಸಿದೆ. ಖಾಂಡ್ವಾ ದಿಂದ ಇಂದೋರ್ ಕಡೆಗೆ ಚಲಿಸುತ್ತಿದ್ದ ಪ್ರಭಾತ್ ಹೆಸರಿನ ಬಸ್ಸಿನಲ್ಲಿ 11 ವರ್ಷದ ಬಾಲಕಿ ತಮನ್ನಾ ತನ್ನ ತಂದೆ ಹೈದರ್ ಜೊತೆ ಪ್ರಯಾಣ ಮಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಬಾಲಕಿ ಯು ತಾಯಿ ರುಕ್ಸಾನ ಮತ್ತು ಅಕ್ಕ ಹೀನಳ ಜೊತೆಗೆ ಕುಳಿತುಕೊಂಡಿದ್ದಾಳೆ.

ತಮನ್ನಾ ತನ್ನ ಕುಟುಂಬ ಸಮೇತರಾಗಿ ಸನಾವದ್ ನ ಬಳಿಯಿರುವ ಬಡವಾಹ್ ಎನ್ನುವ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದರು ಎನ್ನಲಾಗಿದೆ. ಹಾಗೆ ಬಸ್ ನಲ್ಲಿ ಸಂಚರಿಸುವಾಗ ರೋಷಿಯಾ ದಿಂದ ಸ್ವಲ್ಪ ದೂರದಲ್ಲಿ ಇಂತಹದೊಂದು ದು ರ್ಘ ಟನೆ ಸಂಭವಿಸಿದೆ. ಪೊಲೀಸರು ಬಾಲಕಿಯ ಶವವನ್ನು ಪೋಸ್ಟ್ಮಾರ್ಟಮ್ ಗಾಗಿ ಚೈಂಗಾವ್ ಮಾಖನ್ ಎನ್ನುವ ಸ್ಥಳಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದೊಂದು ಭೀ ಕ ರ ಅಪಘಾತವಾಗಿದ್ದು, ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಕಿಟಕಿಯಿಂದ ತಲೆಯನ್ನು ಹೊರಗಡೆ ಇಡುವ ಮಂದಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಪ್ರಯಾಣ ಯಾವುದೇ ಆಗಿರಲಿ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •