ಬೆಂಗಳೂರಿನಲ್ಲಿ ಮನೆ ಪಡೆಯಬೇಕು ಎಂಬ ಹಂಬಲ ನಿಮಗಿದೆಯಾ? ಹಾಗಾದರೆ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ ಸೃಷ್ಟಿಸಲಾಗಿರುವ ಈ ಯೋಜನೆ ಅಡಿ ನೀವು ಕೂಡ ಮನೆ ಅನ್ನೂ ಪಡೆದುಕೊಳ್ಳಿ. ಹಾಗಾದರೆ ಬೆಂಗಳೂರಿನಲ್ಲಿ ಮನೆ ಪಡೆಯಬೇಕು ಅಂದರೆ ಏನು ಮಾಡಬೇಕು ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಈ ಮಾಹಿತಿಯನ್ನು ಪಡೆದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ಹಾಗೂ ನಿಮಗೂ ಕೂಡ ಬೆಂಗಳೂರಿನಲ್ಲಿ ಮನೆ ಮಾಡಬೇಕು ಎಂಬ ಆಲೋಚನೆ ಇದ್ದರೆ.

ಹಾಗೂ ಯಾರು ಬೆಂಗಳೂರಿನಲ್ಲಿ ವಾಸ ಮಾಡುವವರು ಬಾಡಿಗೆ ಮನೆಯಲ್ಲಿ ಇದ್ದೀರಾ ಅಂಥವರಿಗೂ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಆದರೆ ಈ ಯೋಜನೆ ಅಡಿ ಕೆಲವೊಂದು ನಿಯಮಗಳಿವೆ ಅದನ್ನು ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ ಹಾಗೂ ಬೆಂಗಳೂರಿನಲ್ಲಿ ವಸತಿಯನ್ನು ಪಡೆದುಕೊಳ್ಳಬೇಕು ಎಂದರೆ ಸಾಲವನ್ನು ನೀಡಲಾಗುತ್ತದೆ ಹಾಗೂ ಸಬ್ಸಿಡಿ ಹಣವನ್ನು ಕೂಡ ನೀವು ಪಡೆದುಕೊಳ್ಳಬಹುದು.

ಬೆಂಗಳೂರಿನ ವಸತಿ ಯೋಜನೆ ಅಡಿ ಸೃಷ್ಟಿಸಲಾಗಿರುವ ಈ ವ್ಯವಸ್ಥೆಗೆ ಯಾರು ಅರ್ಜಿ ಅನ್ನೂ ಸಲ್ಲಿಸುತ್ತಾರೆ ಅಂಥವರು ಸುಮಾರು 5ವರ್ಷಗಳಿಂದ ಬೆಂಗಳೂರಿನಲ್ಲಿ ಇರಬೇಕಾಗುತ್ತದೆ ಹಾಗೂ ಬೆಂಗಳೂರು ವಲಯದಲ್ಲಿಯೇ ಹಾಗೂ ಬೆಂಗಳೂರಿನಲ್ಲಿ ಅಂಥವರು ವಾಸ ಮಾಡಬೇಕಾಗುತ್ತದೆ ಇನ್ನು ಕರ್ನಾಟಕದಲ್ಲಿ ಬೇರೆಲ್ಲೆಯೂ ಸಹ ಇವರು ಸ್ವಂತ ಮನೆಯನ್ನು ಹೊಂದಿರಬಾರದು. ಈ ಷರತ್ತು ಯಾರಿಗೆ ಅನ್ವಯಿಸುತ್ತದೆ ಅಂಥವರಿಗೆ ಮಾತ್ರ ಈ ಯೋಜನೆ ಅಡಿ ಮನೆ ದೊರೆಯುತ್ತದೆ .

ಹಾಗೂ ಅರ್ಜಿ ಅನ್ನೋ ಹಾಕುವುದಕ್ಕಾಗಿ ಬೇಕಾಗಿರುವ ದಾಖಲಾತಿಗಳು ಹೀಗಿವೆ, ಮನೆಯವರ ವಾರ್ಷಿಕ ಆದಾಯ 3ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು ಮತ್ತು ಜಾತಿ ಪ್ರಮಾಣ ಪತ್ರ ವಂಶವೃಕ್ಷ ಇನ್ಕಮ್ ಸರ್ಟಿಫಿಕೇಟ್ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಓಟರ್ ಐಡಿ ಹಾಗೂ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

ಇಂತಹ ದಾಖಲಾತಿಗಳನ್ನು ಯಾರು ಹೊಂದಿರುತ್ತೀರಾ ಹಾಗೂ ಯಾರು ಸುಮಾರು ಐದು ವರುಷಗಳಿಂದ ಬೆಂಗಳೂರಿನಲ್ಲಿಯೇ ಇದ್ದಾರೆ ಹಾಗೂ ಅವರಿಗೆ ಸ್ವಂತ ಮನೆ ಇರುವುದಿಲ್ಲ ಅಂಥವರು ಮಾತ್ರ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಆಗಬಹುದು. ಈ ವಸತಿ ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಆನ್ ಲೈನ್ ಮೂಲಕ ಅಥವಾ ಸೈಬರ್ ನಲ್ಲಿ ಅಥವಾ ಬೆಂಗಳೂರು ಒನ್ ಕಚೇರಿಯಲ್ಲಿ ಅಥವಾ ಬಿಬಿಎಂಪಿ ಕಚೇರಿ ಅಲ್ಲಿಯೂ ಕೂಡ ಅರ್ಜಿಯನ್ನು ಹಾಕಬಹುದಾಗಿದೆ.

ಈ ವೆಬ್ಸೈಟ್ನಲ್ಲಿ ಹೋಗಿಯೂ ಕೂಡ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು ಇನ್ನೂ ಅರ್ಜಿ ಅನ್ನೋ ಹಾಕಿದ ನಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಸುಮಾರು ನೂರು ರೂಪಾಯಿಗಳನ್ನು ಶ್ರೀ ಶುಲ್ಕವೆಂದು ಕಟ್ಟಬೇಕು. ಆನ್ ಲೈನ್ ಮೂಲಕ ಅಥವಾ ಕಛೇರಿಗಳಲ್ಲಿ ಈ ಹಣವನ್ನು ಪಾವತಿಸಬಹುದು. ವಸತಿ ಪಡೆಯುವುದಕ್ಕೆ ಸಾಲದ ಸೌಲಭ್ಯ ಕೂಡ ಇದು ಸುಮಾರು 1ಘಟಕಕ್ಕೆ ಅಂದರೆ 1ಬಿಎಚ್ ಕೆ ಮನೆಗೆ ಸುಮಾರು ಹತ್ತು ಲಕ್ಷದ.

ಅರುವತ್ತು ಸಾವಿರ₹ಆಗುತ್ತದೆ ಹಾಗೂ ಇದರಲ್ಲಿ 2ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಸಬ್ಸಿಡಿ ಹಣವಾಗಿ ನಿಮಗೆ ಸಿಗುತ್ತದೆ ಹಾಗೂ 7ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳನ್ನು ನೀವು ಸಾಲವಾಗಿ ಕಟ್ಟಬೇಕಾಗುತ್ತದೆ. ಈಗಲೇ ಈ ಎಲ್ಲ ಷರತ್ತುಗಳು ಯಾರಿಗೆ ಅನ್ವಯಿಸುತ್ತದೆ ಅಂಥವರು ಈ ಯೋಜನೆಯಡಿ ಫಲವನ್ನು ಪಡೆದುಕೊಳ್ಳಿ, ಹಾಗೂ ಬೇರೆಯವರಿಗೂ ಈ ಮಾಹಿತಿ ತಿಳಿಸಿಕೊಡಿ ಧನ್ಯವಾದ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •