ನಮ್ಮ ರಾಜ್ಯ ಸರ್ಕಾರವು ಜನರ ಅನುಕೂಲದ ದೃಷ್ಟಿಯಿಂದ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ದೇಶದ ಜನರ ಆರ್ಥಿಕ ಪರಿಸ್ಥಿತಿ ಯಾವ ರೀತಿಯಲ್ಲಿ ಹದಗೆಟ್ಟು ಹೋಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇನ್ನು ಜನರ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಲು ಮತ್ತು ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣವನ್ನ ಕಡಿಮೆ ಮಾಡಲು ನಮ್ಮ ರಾಜ್ಯ ಸರ್ಕಾರ ಈಗ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನ ಜಾರಿಗೆ ತರಲು ಮುಂದಾಗಿದ್ದು ಇದು ಜನರ ಸಂಸತಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ರಾಜ್ಯದ ನಿರುದ್ಯೋಗ ಯುವಕರಿಗಾಗಿ ರಾಜ್ಯ ಸರಕಾರ ಈಗ ಬಂಪರ್ ಕೊಡುಗೆಯನ್ನ ನೀಡಿದೆ. ಹೌದು ಯುವಕರಿಗೆ ಕಾರು ಮತ್ತು ಟ್ಯಾಕ್ಸಿ ಖರೀದಿ ಮಾಡಲು ಉಚಿತವಾಗಿ ಎರಡು ಲಕ್ಷದ ತನಕ ಸಹಾಯಧನವನ್ನ ನೀಡಲು ರಾಜ್ಯ ಸರ್ಕಾರ ಈಗ ಮುಂದಾಗಿದ್ದು ಇದು ರಾಜ್ಯದ ಕೆಲವು ಯುವಕರ ಸಂತಸಕ್ಕೆ ಕಾರಣವಾದರೆ ಇನ್ನು ಕೆಲವು ಯುವಕರ ಬೇಸರಕ್ಕೆ ಕೂಡ ಕಾರಣವಿದೆ. ಹಾಗಾದರೆ ಈ ಯೋಜನೆಯ ಲಾಭವನ್ನ ಪಡೆಯುವುದು ಹೇಗೆ ಮತ್ತು ಈ ಯೋಜನೆಯ ಲಾಭವನ್ನ ಪಡೆಯಲು ನಾವು ಏನು ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ರಾಜ್ಯ ಸರ್ಕಾರ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Bumper-Offer

ಹೌದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರಾಜ್ಯದ ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗವನ್ನ ಆರಂಭಿಸಿಕೊಳ್ಳಲು ಹೊಸ ಕಾರು ಮತ್ತು ಟ್ಯಾಕ್ಸಿಗಳನ್ನ ವಿತರಣೆ ಮಾಡಲಾಗುತ್ತಿದೆ. ಇನ್ನು SSLC ಆಗಿರುವ ನಿರುದ್ಯೋಗಿ ಯುವಕರು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಿ ಉಚಿತ ಕಾರುಗಳನ್ನ ಪಡೆಯಬಹುದಾಗಿದೆ. ಇನ್ನು ಕಾರುಗಳನ್ನ ಖರೀದಿ ಮಾಡಲು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎರಡು ಲಕ್ಷ ರೂಪಾಯಿಯನ್ನ ನೀಡಲಾಗುತ್ತಿದ್ದು ನೀವು ಆಯ್ಕೆ ಮಾಡಿಕೊಳ್ಳುವ ಕಾರಿನ ಉಳಿದ ಹಣವನ್ನ ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಕೊಡಿಸಲಾಗುತ್ತದೆ ಮತ್ತು ಈ ಹಣವನ್ನ ನೀವು ಬ್ಯಾಂಕುಗಳಿಗೆ ಪ್ರತಿ ತಿಂಗಳು EMI ಮೂಲಕ ಪಾವತಿ ಮಾಡಲು ಅವಕಾಶವನ್ನ ಕೂಡ ಕಲ್ಪಿಸಿಕೊಡಲಾಗುತ್ತದೆ.

ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2014-2015 ನೇ ಸಾಲಿನಿಂದ ಹಿಡಿದು 2016-2017 ಸಾಲಿನ ವರೆಗೆ ಭಾಕಿ ಉಳಿದ ಕಾರುಗಳನ್ನ ಈಗ ನೀಡಲಾಗುತ್ತಿದೆ ಮತ್ತು ಇದಕ್ಕಾಗಿ ಈಗ ಅರ್ಜಿಯನ್ನ ಕೂಡ ಕರೆಯಲಾಗಿದೆ. ಇನ್ನು ಈ ಯೋಜನೆಯಲ್ಲಿ ಕಾರುಗಳನ್ನ ಪಡೆಯುವ ಅಭ್ಯರ್ಥಿಗಳಿಗೆ ತಲಾ 2 ಲಕ್ಷ ರೂಪಾಯಿಯನ್ನ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸುವವರು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಇನ್ನು ಅರ್ಜಿ ಸಲ್ಲಿಸುವವರು SSLC ಪಾಸ್ ಆಗಿರಬೇಕು, ಇನ್ನೂ ನವೆಂಬರ್ 25 ನೇ ತಾರೀಕಿನಿಂದಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ಅರ್ಜಿಗಳನ್ನ ಉಚಿತವಾಗಿ ನೀಡಲಾಗುತ್ತಿದ್ದು ಡಿಸೆಂಬರ್ 19 ನೇ ತಾರೀಕು ಕೊನೆಯ ದಿನಾಂಕ ಆಗಿದೆ.

ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿ ತಮ್ಮ SSLC ಅಂಕಪಟ್ಟಿ, ವಾಹನ ಚಲನ ಪರವಾನಿಗೆ ಪತ್ರ, ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳೊಂದಿಗೆ ಅರ್ಜಿಯನ್ನ ಭರ್ತಿ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಬೇಕು. ಇನ್ನು ಯುವಕರು ಗಮನದಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ವಿಷಯ ಏನು ಅಂದರೆ, ಈ ಯೋಜನೆಯ ಲಾಭವನ್ನ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಮಾತ್ರ ಅವಕಾಶವನ್ನ ನೀಡಲಾಗಿದೆ. ಇನ್ನು ಸದ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಮಾತ್ರ ಅವಕಾಶವನ್ನ ನೀಡಲಾಗಿದ್ದು ಇದು ಉಳಿಯ ಯುವಕರ ನಿರಾಸೆಗೆ ಕೂಡ ಕಾರಣವಾಗಿದ್ದು ಉಳಿದ ವರ್ಗದವರಿಗೂ ಕೂಡ ಅವಕಾಶ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ. ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!