ಒಂದಷ್ಟು ಜನರು ಸೋಶಿಯಲ್ ಮೀಡಿಯಾಗಳಲ್ಲಿ ಹೇಗಾದರೂ ಮಾಡಿ ಬಹು ಬೇಗ ಪ್ರಚಾರವನ್ನು ಪಡೆದುಕೊಳ್ಳಲು ಹಪಹಪಿಸುತ್ತಿರುತ್ತಾರೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಲೇ ಅದೆಷ್ಟೋ ಜನ ಸ್ಟಾರ್ ಗಳಾಗಿ ಬಿಟ್ಟಿರುವುದು ಇಂತಹವರಿಗೆ ಪ್ರೇರಣೆಯಾಗಿದೆ. ಹೀಗೆ ಪ್ರಚಾರಕ್ಕಾಗಿ, ಜನಪ್ರಿಯತೆಗಾಗಿ ಅನೇಕರು ಅನೇಕ ರೀತಿಯ ಸ್ಟಂಟ್ ಗಳನ್ನು, ಚಿತ್ರ ವಿಚಿತ್ರ ಎನಿಸುವ ವೀಡಿಯೋಗಳನ್ನು ಶೇರ್ ಮಾಡುವುದು ಉಂಟು. ಆದರೆ ಇಲ್ಲಿಯೂ ಸಹಾ ಒಂದಷ್ಟು ಜನ ತಮ್ಮ ಕಲೆ ಹಾಗೂ ಕೌಶಲ್ಯದಿಂದಲೂ ಜನಪ್ರಿಯತೆಯನ್ನು ಪಡೆದ ಉದಾಹರಣೆಗಳುಂಟು. ಆದರೆ ಕೆಲವೊಮ್ಮೆ ಕೆಲವರು ಮಾಡುವ ತರಲೇ ಆಟಗಳು ಕೂಡಾ ವೈರಲ್ ಆಗಿ ರಾತ್ರೋರಾತ್ರಿ ಕೆಲವರು ಫೇಮಸ್ ಆಗೋದು ನಡೆಯುತ್ತೆ. ಬಹುತೇಕ ಮಂದಿ ವೀಡಿಯೋಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ.

ಕೆಲವೊಮ್ಮೆ ಫನ್ನಿ ವೀಡಿಯೋಗಳ ಮೂಲಕ ಜನರನ್ನು ನಗಿಸಲು, ಅವರಿಂದ ಹೆಚ್ಚು ಲೈಕ್, ಕಾಮೆಂಟ್ ಗಳನ್ನು ಪಡೆಯಲು ಕೆಲವರು ಏನೋನೋ ಸರ್ಕಸ್ ಮಾಡಿ ವೀಡಿಯೋ ಮಾಡುತ್ತಾರೆ. ಅವುಗಳು ಕ್ಲಿಕ್ ಆಗಬಹುದು ಅಥವಾ ಮಾಡಲು ಹೋದ ಕೆಲಸ ಎಡವಟ್ಟಾಗಿ ಆಪತ್ತನ್ನು ಸಹಾ ತಂದು ಒಡ್ಡಬಹುದು. ಆದರೆ ಜನಪ್ರಿಯತೆಯ ಗೀಳಿಗೆ ಬಿದ್ದವರಿಗೆ ಇದ್ಯಾವುದರ ಅರಿವೆಯೂ, ಪರಿವೆಯೂ ಇಲ್ಲದೇ ಏನೋ ಒಂದು ಮಾಡಿ, ಹೇಗೋ, ಎಲ್ಲೋ ಸುದ್ದಿಯಾಗಿ ಜನರ ಮುಂದೆ ಬಂದು ಬಿಡಬೇಕೆಂಬ ತವಕ ಉತ್ಕಟವಾಗಿರುತ್ತದೆ. ಈಗ ಅಂತಹುದೇ ಒಂದು ವೀಡಿಯೋ ಮಾಡುವಾಗ ಆದ ಅವಾಂತರದ ಬಗ್ಗೆ ನಾವಿಲ್ಲಿ ಹೇಳಲು ಹೊರಟಿದ್ದೇವೆ.

ಯೂಟ್ಯೂಬ್ ನಲ್ಲಿ ಒಂದು ವೀಡಿಯೋ ಒಂದಷ್ಟು ಜನರ ಗಮನವನ್ನು ಸೆಳೆಯುತ್ತಿದೆ‌. ಈ ವೀಡಿಯೋದಲ್ಲಿ ವೀಡಿಯೋ ರೆಕಾರ್ಡ್ ಮಾಡುವ ವೇಳೆಯಲ್ಲಿ ಎಮ್ಮೆಯ ಬಳಿ ಆಟವಾಡಲು ಹೋದ ಮಹಿಳೆ, ತಾನು ಎಮ್ಮೆಯ ಮೇಲೇರಿ ಸವಾರಿ ಮಾಡಲು ಹೋಗಿ ಮಾಡಿಕೊಂಡ ಎಡವಟ್ಟಿನ ದೃಶ್ಯ ರೆಕಾರ್ಡ್ ಆಗಿದೆ. ಮಹಿಳೆಯ ಪರಿಸ್ಥಿತಿ ನೋಡಿದಾಗ ಅಯ್ಯೋ ಪಾಪ ಎನಿಸುತ್ತದೆ. ಅದೇ ವೇಳೆ ಮೂಕ ಪ್ರಾಣಿಯ ಜೊತೆಗೆ ಇಂತಹುದೊಂದು ಆಟವಾಡುವ ಅಗತ್ಯ ಇತ್ತೇ? ಎಂದು ಕೂಡಾ ನಮಗೆ ಅನಿಸದೇ ಇರಲಾರದು. ಇಷ್ಟಕ್ಕೂ ಅಲ್ಲಿ ನಡೆದ ಘಟನೆಯೇನು ಎಂದು ತಿಳಿಯೋಣ ಬನ್ನಿ.

ರಾಮ್ ಪ್ರತಾಪ್ ವರ್ಮಾ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಒಂದು ಕೆಲವೇ ಸೆಕೆಂಡ್ ಗಳ ವೀಡಿಯೋವನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಮಹಿಳೆಯೊಬ್ಬಳು ಕಟ್ಟಿ ಹಾಕಿರುವ ಎಮ್ಮೆಯ ಮೇಲೆ ತನ್ನ ಮೊಣಕಾಲೂರಿ ಅದನ್ನು ಸವಾರಿ ಮಾಡುವಂತೆ ಪೋಸ್ ಕೊಡುತ್ತಿರುತ್ತಾಳೆ. ಈ ವೇಳೆಯಲ್ಲಿ ವೀಡಿಯೋ ಮಾಡುವಾಗ, ಆಕೆ ಜೋಶ್ ಗೆ ಒಳಗಾಗಿ ಎಮ್ಮೆಯ ಮೇಲೆ ಕುಳಿತು ಸವಾರಿ ಮಾಡಲೆಂದು ತನ್ನ ಕಾಲನ್ನು ಎತ್ತಿ ಎಮ್ಮೆಯ ಮೇಲೆ ಕೂರುವ ಪ್ರಯತ್ನವನ್ನು ಮಾಡುತ್ತಾಳೆ. ಆದರೆ ಅದೇ ವೇಳೆಗೆ ಸರಿಯಾದ ಮುಗ್ಧ ಎಮ್ಮೆ ಭ ಯ ದಿಂದ ಸ್ವಲ್ಪ ಹಿಂದೆ ಸರಿದು ಹೋಗುತ್ತದೆ.

ವಿಡಿಯೋ ನೋಡಿ

ಮಹಿಳೆ ನಿಂತಿದ್ದ ಜಾಗದಲ್ಲಿ ಆಕೆಯು ಕಾಲು ಹಿಡಿತ ತಪ್ಪಿದೆ. ಕೂಡಲೇ ಆಗ ಎಮ್ಮೆಯ ಮೇಲೆ ಏರಲು ಹೋದವಳು ಎಮ್ಮೆ ಅನಿರೀಕ್ಷಿತವಾಗಿ ಹಿಂದೆ ಸರಿದ ಕಾರಣದಿಂದ ತನ್ನನ್ನು ತಾನು ನಿಯಂತ್ರಣ ಮಾಡಿಕೊಳ್ಳಲು ಅಸಾಧ್ಯವಾಗಿ ನೆಲದ ಮೇಲೆ ದೊಪ್ಪೆಂದು ಬಿದ್ದಿದ್ದಾಳೆ. ಆಕೆ ಬೀಳುವ ದೃಶ್ಯವಂತೂ ನೋಡಲು ಅಯ್ಯೋ!!! ಭಗವಂತ ಏನಿದು ಎನ್ನುವ ಹಾಗಿದೆ. ವೀಡಿಯೋಗೆ ಪೋಸ್ ಕೊಡುವ ಧಾವಂತದಲ್ಲಿ ಹಿಂದೆ ಮುಂದೆ ನೋಡದೆ ಆಕೆ ಮಾಡಲು ಹೋದ ಸ್ಟಂಟ್ ನ ಪರಿಣಾಮ ಬಿದ್ದು ಗಾಯ ಮಾಡಿಕೊಳ್ಳುವಂತಾಗಿದೆ. ಒಟ್ಟಾರೆ ವೀಡಿಯೋ ಇಂತಹ ಪ್ರಯತ್ನ ಮಾಡಬೇಡಿ ಎನ್ನುವ ಸಂದೇಶ ನೀಡುವಂತೆ ಇದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •