ನಿರ್ಮಲಾ ಸೀತಾರಾಮನ್‌ ಮಂಡನೆ ಮಾಡಿದ ಬಜೆಟ್‌ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಕೆಲವೊಂದು ರಿಲೀಫ್‌ ಹಾಗೂ ಕೆಲವೊಂದು ಬರೆಗಳನ್ನು ಕೂಡ ಎಳೆಯಲಾಗಿದೆ. ಯಾವ್ಯಾಕ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ. ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಆದಾಯ ತೆರಿಗೆ

 • ಪಿಂಚಣಿ ಮತ್ತು ಬಡ್ಡಿ ಆದಾಯ ಮಾತ್ರ ಇರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪಾವತಿ ಇಲ್ಲ.
 • ಆದಾಯ ತೆರಿಗೆ ಪಾವತಿ ವ್ಯಾಜ್ಯ ಪರಿಹಾರಕ್ಕೆ, ಸುಲಭ ಹಾಗೂ ಫೇಸ್‌ಲೆಸ್‌ ವ್ಯವಸ್ಥೆ.

ಬ್ಯಾಂಕಿಂಗ್‌ ಹಾಗೂ ಇನ್ಶೂರೆನ್ಸ್‌

 • ಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ 20,000 ಕೋಟಿ ರು. ಮೀಸಲು
 • ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ 49% ರಿಂದ 74%ಕ್ಕೆ ಏರಿಕೆ

Budget-2021

ಆರೋಗ್ಯ

 • ಕೊರೊನಾವೈರಸ್‌ ವ್ಯಾಕ್ಸೀನ್‌ಗೆ 35,000 ಕೋಟಿ ರು. ಮೀಸಲು
 • ಪ್ರಧಾನ ಮಂತ್ರಿ ಆತ್ಮ ನಿರ್ಭರ ಸ್ವಸ್ಥ್‌ ಭಾರತ್‌ ಯೋಜನೆಗೆ 64,180 ಕೋಟಿ ರು. ಮೀಸಲು.

ಮೂಲಭೂತ ಸೌಕರ್ಯ

 • ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 1.18 ಲಕ್ಷ ಕೋಟಿ ಮೀಸಲು
 • 2022ರ ಜೂನ್ ವೇಳೆಗೆ ಪಶ್ಚಿಮ ಹಾಗೂ ಪೂರ್ವ ಕಾರಿಡಾರ್‌ ಘೋಷಣೆ

ಆರ್ಥಿಕತೆ

 • ಹಣಕಾಸಿನ ಕೊರತೆ ಜಿಡಿಪಿಯ ಶೇ.9.5ಕ್ಕೆ ತಂದು ನಿಲ್ಲಿಸುವುದು.
 • ಮುಂದಿನ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಿಂದ 12 ಲಕ್ಷ ಕೋಟಿ ಸಾಲ

ಮೇಕ್‌ ಇನ್‌ ಇಂಡಿಯಾ

 • ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೃಹತ್‌ ಜವಳಿ ಪಾರ್ಕ್‌ ನಿರ್ಮಾಣ
 • ಮುಂದಿನ ಮೂರು ವರ್ಷದಲ್ಲಿ ದೇಶದ ಏಳು ಕಡೆ ಮೂರು ಜವಳಿ ಪಾರ್ಕ್‌ ನಿರ್ಮಾಣ

Budget-2021

ಕಂಪನಿಗಳಿಗೆ

 • ಎನ್‌ಆರ್‌ಐಗಳಿಗೆ ಏಕ ಸದಸ್ಯ ಕಂಪನಿ ಸ್ಥಾಪಿಸಲು ಅವಕಾಶ
 • ಸ್ಟಾರ್ಟ್‌ ಅಪ್ ಕಂಪನಿಗಳಿಗೆ ಒಂದು ವರ್ಷದ ವರೆಗೆ ತೆರಿಗೆ ವಿನಾಯಿತಿ

ಕೃಷಿ ಕ್ಷೇತ್ರಕ್ಕೆ

 • ಇನ್ನೊಂದು ವರ್ಷದಲ್ಲಿ ರೈತರಿಗೆ 16.5 ಲಕ್ಷ ಕೋಟಿ ಸಾಲ
 • ಹಳ್ಳಿಗಳ ಮೂಲಭೂತ ಸೌಕರ್ಯಕ್ಕೆ 40,000 ಕೋಟಿ ಮೀಸಲು

ರೈಲ್ವೇ

 • ರೈಲ್ವೇ ಇಲಾಖೆಗೆ ಒಟ್ಟು 1.10 ಲಕ್ಷ ಕೋಟಿ ಅನುದಾನ
 • ರೈಲ್ವೇ ಸುರಕ್ಷತೆಗೆ ಹೆಚ್ಚಿನ ಒತ್ತು. ಹಳಿಗಳ ವಿದ್ಯುತ್ತೀಕರಣ

ಪರಿಸರ

 • 42 ನಗರಗಳಿಗೆ ವಾಯು ಮಾಲಿನ್ಯ ತಡೆಯಲು 2,217 ಕೋಟಿ ರು. ಮೀಸಲು
 • 15 ವರ್ಷಕ್ಕಿಂತ ಹಳೇಯ ವಾಹನಳನ್ನು ಗುಜರಿಗೆ ಸೇರಿಸುವ ಯೋಜನೆ
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
 •  
 •  
 •  
 •  
 •  
 •  
 •