ಅಮೂಲ್ಯ ಗರ್ಭಿಣಿಯಾಗಿದ್ದು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಎಂದ BTV: ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್, ನೋಡಿ ಒಮ್ಮೆ ನಕ್ಕುಬಿಡಿ

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಮಾಧ್ಯಮಗಳು ಸಿನಿಮಾ ನಟ-ನಟಿಯರ ಪ್ರತಿ ವಿಚಾರದಲ್ಲಿ ‘ಮಾಧ್ಯಮ ಕರ್ತವ್ಯ’ವನ್ನು ಮರೆತು ಕೆಟ್ಟದಾಗಿ ವರ್ತಿಸುತ್ತವೆ. ಜನಪ್ರಿಯ ನಟ-ನಟಿಯರ ಸಾವು, ಅಪಘಾತ, ಅನಾರೋಗ್ಯ, ಪ್ರೀತಿ-ಪ್ರಣಯ ಮತ್ತು ಅವರ ಖುಷಿಯ ಘಳಿಗೆಯನ್ನು ಭಾವನಾತ್ಮಕವಾಗಿ ವೀಕ್ಷಕರ ಮೇಲೆ ಹೇರಿ ಬಿಡುತ್ತದೆ. ಜೊತೆಗೆ ಬೇರೆ ಅಂತಹದ್ದೇ ಸುದ್ದಿಗಳು ಸಿಗುವವರೆಗೂ ಅವುಗಳ ಸುತ್ತ ಗಿರಕಿ ಹೊಡೆಯುತ್ತಲೆ ಇರುತ್ತವೆ.

ಈ ವೇಳೆ ಅವು ನಟ ನಟಿಯರ ಖುಷಿ-ದುಃಖಗಳಷ್ಟೇ ರಾಜ್ಯದ ಸಮಸ್ಯೆ ಎಂದು ಬಿಂಬಿಸಿ ಉಳಿದ ಬಹುಮುಖ್ಯವಾದ ಸುದ್ದಿಗಳನ್ನು ತೆರೆಮರೆಯಲ್ಲಿ ಹುದುಗಿಸಿ ಬಿಡುತ್ತದೆ. ಕನ್ನಡದ ಸುದ್ದಿ ವಾಹಿನಿ ಬಿಟಿವಿ ಕೂಡಾ ಗುರುವಾರ ಅದೇ ರೀತಿಯಲ್ಲಿ ವರ್ತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಹಲವಾರು ನೆಟ್ಟಿಗರು ಈ ಬಗ್ಗೆ ಬಿಟಿವಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ಬಾರಿ ಕನ್ನಡದ ನಟಿ ಅಮೂಲ್ಯಾ ಅವರು ಗರ್ಭಿಣಿಯಾಗಿರುವುದನ್ನು ಬಿಟಿವಿ ‘ರಾಜ್ಯಕ್ಕೆ ಶುಭ ಸುದ್ದಿ’ ಎಂದು ವರದಿ ಮಾಡಿದೆ. ಅಮೂಲ್ಯಾ ಅವರು ಗರ್ಭಿಣಿ ಆಗಿರುವುದನ್ನು ‘ಮೆಘಾ ಬ್ರೇಕಿಂಗ್’ ಸುದ್ದಿ ಎಂದು ಉಲ್ಲೇಖಿಸಿರುವ ಬಿಟಿವಿ, “ಉಲ್ಲಾಸದ ಹೂಮಳೆ ಸುರಿಸುವ ಖುಷಿಖುಷಿಯ ಸುದ್ದಿ, ಸ್ಯಾಂಡಲ್‌ವುಡ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್, ಇಡೀ ರಾಜ್ಯ ಖುಷಿ ಪಡುವ ಸುದ್ದಿ-ನಟಿ ಅಮೂಲ್ಯಾ ಪ್ರಗ್ನೆಂಟ್‌” ಎಂದು ಸ್ಕ್ರೀನ್‌ನಲ್ಲಿ ಬರೆದು ವೀಕ್ಷಕರಿಗೆ ಸುದ್ದಿಯನ್ನು ತಿಳಿಸಿದೆ.

ಆದರೆ ಪ್ರಜ್ಞಾವಂತರು ಬಿಟಿವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ರೋಲ್ ಕೂಡಾ ಮಾಡಲಾಗುತ್ತಿದೆ.

ಇರ್ಶಾದ್ ಯುಟಿ ಅವರು, ‘ಈ ಮಟ್ಟಕ್ಕೆ ನಮ್ಮ ಕನ್ನಡದ ಸುದ್ದಿಮಾಧ್ಯಮಗಳು ಇಳಿದಿರುವುದು ನಾಚಿಕೆಯಿಲ್ಲವೇ…???’

ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು, “ಕೇವಲ ಕರ್ನಾಟಕ ರಾಜ್ಯವಷ್ಟೇ ಅಲ್ಲದೆ ಇಡೀ ವಿಶ್ವದ ಕನ್ನಡಿಗರು ಖುಶಿಪಡಬೇಕಾದ ಸುದ್ದಿ ಇದು!. Btv ಕಂಜೂಸುಗಳು ಅಮೂಲ್ಯ ಬಸಿರಾಗಿರುವ ಖುಶಿಯ ಸುದ್ದಿಯನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ!!” ಎಂದು ವ್ಯಂಗ್ಯವಾಡಿದ್ದಾರೆ.

“ಮಾನವನ ಜನ್ಮದಲ್ಲಿ ಹಿಂದೆಯೂ ಆಗಲಿಲ್ಲ ಮುಂದೆಯೂ ಆಗುವುದಿಲ್ಲ ಇಂದು ಇತಿಹಾಸ ಸೃಷ್ಟಿಸುವ ನಟಿ ಅಮೂಲ್ಯ ಅವರ ತಾಯಿತನ. ಬಿಟಿವಿ ಗೆ ಬೇರೆ ಸುದ್ದಿ ಸಿಕ್ಕಿಲ್ಲ”

ಪತ್ರಕರ್ತ ನಿಖಿಲ್ ಕೊಲ್ಪೆ, “ಬಿಟಿವಿಯ ಅತ್ಯಂತ ಮಹತ್ವದ ಸ್ಫೋಟಕ “ಪ್ರೆಗ್ನೆಂಟ್ ಸುದ್ದಿ”ಯ ಬಗ್ಗೆ ತನಿಖಾ ವರದಿ ಪ್ರಸಾರವಾಗಲಿ! ಈ ಅಧಿವೇಶನದಲ್ಲಿ ಗಂಭೀರ ಚರ್ಚೆಯಾಗಲಿ!” ಎಂದು ವ್ಯಂಗ್ಯವಾಡಿದ್ದಾರೆ.

“ಕರ್ನಾಟಕದ ಸುತ್ತಮುತ್ತಲಿನ ರಾಜ್ಯಗಳ ಪತ್ರಕರ್ತರು, ನಮ್ಮ ರಾಜ್ಯದ ಕೆಲ! ‘ಮೂರೂ ಬಿಟ್ಟ ಮಾಧ್ಯಮಗಳ’ ವರದಿಗಳನ್ನು ನೋಡಬೇಕು. ನಾವು ಅವರಿಗೆ ತಿಳಿಸಬೇಕು. ಇವರು ಮಾಡುವ ನಾಲಾಯಕ್ ವರದಿಗಳನ್ನು ನೋಡಿ ಆವರ ಚಾನಲ್‌ಗಳಲ್ಲಿ ಇವರಿಗೆ ಉಗಿಯಬೇಕು… ಮಲಯಾಳಿಗಳಿಗೆ ತಿಳಿದರೆ ಖಂಡಿತವಾಗಿಯೂ ಟ್ರೋಲ್ ಮಾಡಿ ಇವರನ್ನು ಬೆನ್ನಟ್ಟಿ ಕೊಲ್ಲುತ್ತಾರೆ”

ಇದನ್ನೂ ಓದಿ:ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

 ಇದನ್ನೂ ಓದಿ:ಭಾರತ್ ಬಂದ್ ಕುರಿತು ವರದಿ; ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇಲ್ಲವೇ?

 ಇದನ್ನೂ ಓದಿ:ಮೋದಿ ಮುಂದೆಯೆ ಭಾರತೀಯ ಮಾಧ್ಯಮಗಳ ಬಗ್ಗೆ ಬಿಡೆನ್ ವ್ಯಂಗ್ಯ?

??’

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...