ರಾಜ್ಯ ಸರ್ಕಾರದಿಂದ ಎಲ್ಲಾ ರೇಷನ್ ಪಡೆಯುತ್ತಿರುವ ಸದಸ್ಯರಿಗೆ ಮಹತ್ವದ ಮಾಹಿತಿಯೊಂದನ್ನು ರವಾನಿಸಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಇದೀಗ ಎಲ್ಲ ಬಿಪಿಎಲ್, ಎಪಿಎಲ್ ಹಾಗೂ ಅಂತಹದೇ ರೇಷನ್ ಕಾರ್ಡ್ ಹೊಂದಿರುವವರಿಗೆ ಎಲ್ಲಾ ಗ್ರಾಹಕರಿಗೆ ಮಹತ್ವದ ಮಾಹಿತಿ ಬಂದಿದ್ದು, ನಿಮ್ಮ ಬಳಿ ಬಿಪಿಎಲ್-ಎಪಿಎಲ್ ಅಥವಾ ಅಂತಹದ್ದೇ ರೇಷನ್ ಕಾರ್ಡ್ ಹೊಂದಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಿ.

ರೇಷನ್ ಕಾರ್ಡ್ ಪಡಿತರಿಗೆ ಪ್ರತಿ ತಿಂಗಳಿಗೊಮ್ಮೆ ಹೊಸ ಹೊಸ ನಿಯಮಗಳು ಹಾಗೂ ಹೊಸದಾಗಿ ಬದಲಾವಣೆಗಳನ್ನು ಮಾಡುತ್ತಾರೆ. ಇನ್ನೂ ಈ ತಿಂಗಳಿನಲ್ಲಿ ಮಹತ್ವದ ಆದೇಶವನ್ನು ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲಾ ಗ್ರಾಹಕರಿಗೆ ಅಂದರೆ ರೇಷನ್ ಕಾರ್ಡ್ ಗ್ರಾಹಕರಿಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜನಸಾಮಾನ್ಯರು ಇನ್ನು ಮುಂದೆ ರೇಷನ್ ಕಾರ್ಡ್ ಪಡೆಯಲು ತಪ್ಪದೇ ಈ ಕೆಲಸವನ್ನು ಮಾಡಲೇಬೇಕು. ಹೌದು, ಏನಪ್ಪಾ ಅಂದರೆ ಎಲ್ಲಾ ರೇಷನ್ ಕಾರ್ಡ್ ಗ್ರಾಹಕರು ತಮ್ಮ ರೇಷನ್ ಕಾರ್ಡ್ ಈ ಕೆವೈಸಿಯನ್ನು ಮಾಡಿಸಬೇಕಾಗಿರುವುದು ಕಡ್ಡಾಯ. ಏನಪ್ಪಾ ಈ ಕೆವೈಸಿ ಎಂದು ನೀವು ಇಲ್ಲಿ ಕೇಳಬಹುದು.

BPL-Card-karnataka

ಈ ಕೆವೈಸಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ನಿಮ್ಮ ವಲಯಕ್ಕೆ ಬರುವಂತಹ ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ಕಾರ್ಡ್ ಸಮೇತವಾಗಿ ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ಈ ಕೆವೈಸಿಯನ್ನು ಮಾಡಿಕೊಂಡ ನಂತರ ನಿಮಗೆ ರೇಷನ್ ಸಿಗಲಿದೆ ಇಲ್ಲವಾದಲ್ಲಿ ನಿಮಗೆ ಅಕ್ಕಿ ವಿತರಣೆ ಮಾಡಲಾಗುವುದಿಲ್ಲ.

ಈ ಕೆವೈಸಿಯನ್ನು ಏಕೆ ಮಾಡಿಕೊಳ್ಳಬೇಕು ಎಂದರೆ ಕೆಲವೊಂದು ಬಿಪಿಎಲ್ ಕುಟುಂಬಗಳು ಮೃತರ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದಾರೆ ಹಾಗೂ ಇನ್ನೂ ಕೆಲ ಕುಟುಂಬಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳ ಹೆಸರಿನ ಮೇಲೆ ಈಗಾಗಲೇ ರೇಷನ್ ಪಡೆಯುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಮನಿಸಿದೆ.

ಹೀಗಾಗಿ ಕುಟುಂಬದ ಪ್ರತಿ ಯೊಬ್ಬ ಸದಸ್ಯರೂ ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕಾಗಿರುವುದು ಕಡ್ಡಾಯ. ಈಗಾಗಲೇ ಈ ಹಿಂದೆ ಹಲವು ಕುಟುಂಬಗಳು ಈ ಕೆವೈಸಿಯನ್ನು ಮಾಡಿಸಿಕೊಂಡಿದೆ ಇನ್ನೂ ಕೆಲವೊಂದು ಕುಟುಂಬಗಳು ಇಲ್ಲಿಯತನಕ ಮಾಡಿಸಿಕೊಂಡಿಲ್ಲ. ಹಾಗಾಗಿ ನೀವು ಕೂಡ ಈ ಕೆವೈಸಿಯನ್ನು ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •