ದೇಶ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಅವಾಂತರವನ್ನ ಸೃಷ್ಟಿ ಮಾಡಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಅದೆಷ್ಟೋ ಜನರು ಕರೋನ ಮಹಾಮಾರಿಯ ಕಾರಣ ತಮ್ಮ ಜೀವವನ್ನೆ ಕಳೆದುಕೊಂಡರು ಮತ್ತು ಅದೆಷ್ಟೋ ಕುಟುಂಬಗಳು ವಾರಸುದಾರರನ್ನ ಕಳೆದುಕೊಂಡು ಒಬ್ಬಂಟಿಯಾಗಿದೆ ಎಂದು ಹೇಳಬಹುದು. ಇನ್ನು ಇದೆ ಸಮಯದಲ್ಲಿ ಈಗ ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು.

Corona help karnataka

ಹೌದು ಬಿಪಿಎಲ್ ಕಾರ್ಡ್ ಇರುವವರಿಗೆ 1 ಲಕ್ಷ ರೂಪಾಯಿ ಸಿಗಲಿದ್ದು ಅರ್ಜಿಯನ್ನ ಆಹ್ವಾನಿಸಲಾಗಿದೆ. ಹಾಗಾದರೆ ಏನದು ಗುಡ್ ನ್ಯೂಸ್ ಮತ್ತು ಈ ಹಣಕ್ಕೆ ಅರ್ಜಿಯನ್ನ ಸಲ್ಲಿಸುವುದು ಎಲ್ಲಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಸ್ನೇಹಿತರೆ ಕರೋನ ಮಹಾಮಾರಿಯ ಕಾರಣ ಜೀವವನ್ನ ಕಳೆದುಕೊಂಡ ಬಿಪಿಎಲ್ ಕುಟುಂಬದವರಿಗೆ ಪರಿಹಾರದ ಹಣವಾಗಿ 1 ಲಕ್ಷ ರೂಪಾಯಿಯನ್ನ ನೀಡುವುದಾಗಿ ಸರ್ಕಾರ ಈ ಹಿಂದೆ ಘೋಷಣೆಯನ್ನ ಮಾಡಿತ್ತು ಮತ್ತು ಅದೇ ರೀತಿಯಲ್ಲಿ ಈಗ ಈ ಹಣವನ್ನ ಪಡೆದುಕೊಳ್ಳಲು ಅರ್ಜಿಯನ್ನ ಆಹ್ವಾನಿಸಲಾಗಿದ್ದು ಕುಟುಂಬದ ವಾರಸುದಾರನನ್ನ ಕಳೆದುಕೊಂಡ ಬಿಪಿಎಲ್ ಕುಟುಂಬದವರು ಈಗ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

Corona help karnataka

ಸಂತ್ರಸ್ಥ ಕುಟುಂಬದವರು ಈ ಕುರಿತಂತೆ ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯ ನಾಡಕಚೇರಿಯಲ್ಲಿ ನಿಗದಿತ ನಮೂನೆ-1 ಅನ್ನು ಪಡೆದುಕೊಂಡು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ವ್ಯಾಪ್ತಿಯ ನಾಡಕಚೇರಿಯಲ್ಲಿ ಸಲ್ಲಿಸುವಂತೆ ಕೋರಿದೆ ಮತ್ತು ಈಗಾಗಲೇ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಇನ್ನು ಅರ್ಜಿಯನ್ನ ಸಲ್ಲಿಸುವವರು ಕರೋನ ಸೋಂಕಿನ ಪಾಸಿಟಿವ್ ಅಥವಾ ನೆಗೆಟಿವ್ ವರದಿ, ರೋಗಿ ಸಂಖ್ಯೆ ಪಿ ನಂಬರ್ ಮತ್ತು ಕ್ಲೀನಿಕಲ್ ರೇಡಿಯಾಲಜಿ ಮತ್ತು ಪ್ರಯೋಗಾಲಯ ವರದಿ ವೈದ್ಯರಿಂದ ದೃಢೀಕರಿಸಿರಬೇಕು.

ಇನ್ನು ಇದರ ಜೊತೆಗೆ ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ, ಅರ್ಜಿದಾರರ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನಮೂನೆ-2 ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ-3 ರಲ್ಲಿ ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕೆಂದು ಹೇಳಲಾಗಿದೆ. ಕುಟುಂಬದ ವಾರಸುದಾರನನ್ನ ಕಳೆದುಕೊಂಡು ನೋವನ್ನ ಅನುಭವಿಸುತ್ತಿರುವವರಿಗೆ ಕೊಂಚ ಸಹಾಯವನ್ನ ಮಾಡಲು ಸರ್ಕಾರ ಮುಂದಾಗಿದ್ದು ಈ ಮಾಹಿತಿಯನ್ನ ಎಲ್ಲರಿಗೂ ತಲುಪಿಸಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •