ಹುಡುಗಿಗೆ  ಮೊದಲ ಬಾರಿಗೆ ಪೀರಿಯಡ್ಸ್ ಆದಾಗ ಆಕೆಯ ಗೆಳೆಯನೊಬ್ಬ ಮಾಡಿದ ಕೆಲಸವೇನು ಗೊತ್ತಾ?

8ನೇ ತರಗತಿಯಲ್ಲಿ ಕಲಿಯುತ್ತಿದ್ದ ಒಂದು ಹುಡುಗಿಗೆ ಶಾಲೆ ಬಿಡುವ ಹೊತ್ತಲ್ಲಿ ಹೊಟ್ಟೆ ನೋವು  ಕಾಣಿಸುತ್ತದೆ.ಸಾಧಾರಣ ಹೊಟ್ಟೆ ನೋವು ಇರಬೇಕು ಈಗ ಮನೆಗೆ ಮುಟ್ಟುತ್ತೇನೆ ಎಂದು ಭಾವಿಸಿ ಹುಡುಗಿ ದಾರಿಯಲ್ಲಿ ಹೋಗುತ್ತಾಳೆ.

ಹೀಗೆ ಹೋಗುವಾಗ ತನ್ನ ಬಟ್ಟೆಯಲ್ಲಿ ಕೆಂಪು ರಕ್ತದ ಕಲೆ ಆಗಿರುವುದು ಗೊತ್ತಾಗುತ್ತದೆ.ತನಗೆ ಏನು ಮಾಡಬೇಕೆಂದು ತಿಳಿಯದೇ ಅಲ್ಲೇ ಮುಚ್ಚಿದ ಒಂದು ಅಂಗಡಿಯಲ್ಲಿ ಕೂತು ಅಳುತ್ತಾಳೆ.

 

ಆಗ ಆಕೆಯ ಗೆಳೆಯ ಬಂದು ಏನಾಯಿತು ಏಕೆ ಅಳುತ್ತಿರುವೆ ಎಂದಾಗ ಆಕೆ ಏನಿಲ್ಲ ಎಂದು ಹೇಳುತ್ತಾಳೆ.ಆದರೇ ಆ ಕಲೆ ಅವನಿಗೆ ಕಾಣುತ್ತದೆ.ತಕ್ಷಣ ಹೋಗಿ ಒಂದು ಹುಡುಗಿಯನ್ನು ಕರೆದು ಕೊಂಡು ಅಲ್ಲಿಗೆ ಬರುತ್ತಾನೆ.

ಆಗ ಆಕೆ ಇದು ಹೆಣ್ಣುಮಕ್ಕಳಿಗೆ ಆಗುವುದು ಸಹಜ.ಇದಕ್ಕೆಲ್ಲ ಹೆದರ ಬಾರದು ನನಗೂ ಹೀಗೆ ಆಗಿದೆ ಎಂದು ನ್ಯಾಪ್ಕಿನ್ ತಗೊಂಡು ಅವಳನ್ನು ಒಂದು ಕಡೆ ಕರೆದುಕೊಂಡು ಹೋಗುತ್ತಾಳೆ.

ಅವಳ ಐಡಿಯ ಮುಖಾಂತರ ಆತ ಅವಳ ಮನೆಯವರಿಗೆ ಕಾಲ್ ಮಾಡಿ ಕರೆಸಿದ.ಮನೆಯವರು ಆ ಹುಡುಗಿಗೆ ಧನ್ಯವಾದ ಹೇಳುತ್ತಾರೆ.

ನಿನಗೆ ಈ ಬಗ್ಗೆ ಹೇಗೆ ಗೊತ್ತು ಎಂದು ಆ ಹುಡುಗನಲ್ಲಿ ಕೇಳಿದಾಗ .ನನಗೆ ಅಕ್ಕ ಇದ್ದಾಳೆ.ಆಗ ಅವಳಿಗೆ ದಾರಿಯಲ್ಲಿ ಹೀಗೆ ಆಗಿತ್ತು.ಅಮ್ಮ ನನಗೆ ನ್ಯಾಪ್ಕಿನ್ ತರಲು ಹೇಳಿದ್ದರು ಎಂದ.ಅವರು ಅವನಿಗೆ ಧನ್ಯವಾದ ಹೇಳಿದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •