ಹುಡುಗಿಯರಾಗಲಿ ಹುಡುಗರಾಗಲಿ ತಮ್ಮ ಜೀವನಸಂ  ಗಾತಿ ಹೀಗೆ ಇರಬೇಕು ಎಂಬ ಆಸೆ ಕಲ್ಪನೆಗಳಿರುತ್ತವೆ. ತಾವು ಇಷ್ಟಪಟ್ಟವರು ತಮ್ಮೊಂದಿಗೆ ಹೇಗಿರುತ್ತಾರೆ ಎನ್ನುವುದರ ಮೇಲೆ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾದರೆ ಹುಡುಗಿಯರು ಹುಡುಗರಲ್ಲಿ ಇಷ್ಟಪಡುವ ಗುಣಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಬ್ಬ ಹುಡು ಗಿಯು ತನ್ನನ್ನು ಪ್ರೀತಿ ಸುವ ಹುಡುಗ ಹೀಗೆ ಇರಬೇಕು ಎಂಬ ಆಸೆ ಕನ ಸುಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ತಮಗೆ ಗೌರವ ಕೊಡಲಿ ಎಂದು ಬಯಸುತ್ತಾರೆ. ಅದರಂತೆ ತನ್ನನ್ನು ಹೆಚ್ಚು ಗೌರವಿಸುವ ಹುಡುಗನನ್ನು ಇಷ್ಟಪ ಡುತ್ತಾರೆ. ಹುಡು ಗಿಯು ತನ್ನ ನಿರ್ಧಾರಗಳನ್ನು, ತನ್ನ ಮಾತನ್ನು, ತನ್ನ ಸಂ ತೋಷವನ್ನು ಗೌರವಿಸುವ ಹುಡು ಗನನ್ನು ಇಷ್ಟಪ ಡುತ್ತಾಳೆ.

ಹು ಡುಗಿಯರು ಪ್ರಾಮಾಣಿಕ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಹುಡುಗರು ಇಷ್ಟಪಡುವ ಹು ಡುಗಿಗೆ ಸುಳ್ಳು ಹೇಳುತ್ತಾರೆ ಆದರೆ ಒಮ್ಮೆ ಹೇಳಿದ ಸುಳ್ಳಿನ ಬಗ್ಗೆ ಹುಡುಗಿಗೆ ಗೊತ್ತಾದಾಗ ಅವರು ಬಹಳ ನೊಂದುಕೊಳ್ಳುತ್ತಾರೆ ಮತ್ತು ಅವರು ಎಂದಿಗೂ ಅಂತಹ ಪುರು ಷನನ್ನು ಕ್ಷಮಿಸುವುದಿಲ್ಲ. ಇದರಿಂದ ಪ್ರೀತಿಯಲ್ಲಿ ವೈಮನಸ್ಸು ಉಂಟಾಗುತ್ತದೆ ಅಲ್ಲದೆ ಬೇರೆ ಬೇರೆ ಆಗುವ ಸಂಭವ ಕೂಡ ಬರುತ್ತದೆ. ಎಂಥ ಸಂದರ್ಭದಲ್ಲೂ ನಿಜವನ್ನೆ ಹೇಳುವ ಪ್ರಾಮಾಣಿಕರಾಗಿರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.

ಸಾಮಾನ್ಯವಾಗಿ ಹು  ಡುಗಿಯರು ತಮಗಿಂತ ಹೆಚ್ಚು ಎತ್ತರವಿರುವ ಹುಡುಗರನ್ನು ಇಷ್ಟ ಪಡುತ್ತಾರೆ. ತಮಗಿಂತ ಕುಳ್ಳಗಿರುವ ಅಥವಾ ತಮ್ಮಷ್ಟೆ ಎತ್ತರವಿರುವ ಹುಡುಗರನ್ನು ಅವರು ಇಷ್ಟಪಡುವುದಿಲ್ಲ. ಕೆಲವು ಹುಡು  ಗಿಯರು ರೌಡಿಯಂತೆ ವರ್ತಿಸುವ, ಸ್ಟ್ರಾಂಗ್ ಆಗಿರುವ ಹುಡುಗರನ್ನು ಇಷ್ಟ ಪಡುತ್ತಾರೆ ಏಕೆಂದರೆ ಯಾವಾಗಲೂ ಅವರು ತಮ್ಮನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯಿಂದ. ಕಷ್ಟದ ಸಮಯದಲ್ಲಿ ಸಲಹೆ ಕೊಡುವ, ನಿನ್ನೊಂದಿಗೆ ನಾನಿದ್ದೇನೆ ಎಂದು ಭರವಸೆ ಮೂಡಿಸುವ ಹುಡುಗರನ್ನ ಹುಡು  ಗಿಯರು ಇಷ್ಟಪಡುತ್ತಾರೆ. ಸಮಸ್ಯೆ ಬಂದಾಗ ಹೇ  ಡಿತನದಿಂದ ಓಡಿಹೋಗುವ ಹುಡುಗರನ್ನು ಹು ಡುಗಿಯರು ಎಂದಿಗೂ ಇಷ್ಟಪಡುವುದಿಲ್ಲ.

ಹು  ಡುಗಿಯರು ಸಾಮಾನ್ಯವಾಗಿ ಹೆಚ್ಚು ಮಾತನಾಡುತ್ತಿರುತ್ತಾರೆ. ಅವರೊಂದಿಗೆ ಹೆಚ್ಚು ಮಾತನಾಡುವ, ಸಲಹೆ ಕೇಳುವ, ತಮ್ಮ ಸುಖ-ದುಃಖ ಎಲ್ಲ ವಿಷಯವನ್ನು ಹಂಚಿಕೊಳ್ಳುವ, ಹು  ಡುಗಿಯ ಎಲ್ಲ ಮಾತಿಗೂ, ಅವರ ಭಾವನೆಗಳಿಗೂ ಸ್ಪಂದಿಸುವ ಹುಡುಗರನ್ನು ಇಷ್ಟ ಪಡುತ್ತಾರೆ. ಹು  ಡುಗಿಯರು ಹಾಸ್ಯಪ್ರಜ್ಞೆಯನ್ನು ಹೊಂದಿರುವ ಹುಡುಗರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹುಡುಗಿಯು ತನ್ನನ್ನು ನಗಿಸುವ, ತನ್ನ ಬೇಸರವನ್ನು ದೂರಮಾಡುವ ಸದಾ ಮುಗುಳುನಗುತ್ತಾ ತಮಾಷೆ ಮಾಡುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಹುಡುಗರು ತಾವು ಇಷ್ಟಪಡುವ ಹು  ಡುಗಿಗಾಗಿ ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •