ಕನ್ನಡದ ಕುವರಿ ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಅಂದ್ರೆ ಆ ಮುದ್ದು ಮುಖ ಲೀಲಾಜಾಲವಾದ ನಟನೆ, ಕೆಲಸದಲ್ಲಿನ ಡೆಡಿಕೇಶನ್ ಎಲ್ಲ ನೆನಪಾಗುತ್ತದೆ. ಕನ್ನಡ, ತೆಲುಗು, ತಮಿಳು ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ ಡೈಸಿ ಸಿನಿಪ್ರಿಯರ ನೆಚ್ಚಿನ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಮ್ಮೂಟಿ, ಅಕ್ಷಯ್ ಕುಮಾರ್, ಕಮಲ್ ಹಾಸನ್, ಶಿವಣ್ಣ, ದರ್ಶನ್,ಉಪೇಂದ್ರರಿಗೆ ಜೋಡಿಯಾಗಿ ಪಂಚಭಾಷೆಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಡೈಸಿ ಬೋಪಣ್ಣ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಗೊತ್ತಾ? ರಾಮ ಶ್ಯಾಮ ಭಾಮ, ಭಗವಾನ್, ಚಂಟಿ, ಗರಂ ಮಸಾಲಾ ಸಿನಿಮಾಗಳಲ್ಲಿ ನಾಯಕನಟಿಯಾಗಿ ಅಭಿನಯಿಸಿ ತನ್ನ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕ ಪ್ರಭುಗಳ ಮನಗೆದ್ದ ನಟಿ ಡೈಸಿ ಬೋಪಣ್ಣ.

ಚಿಕ್ಕ ವಯಸ್ಸಿನಿಂದಲೇ ಸಿನಿಮಾದ ಮೇಲೆ ಅಪಾರ ಒಲವಿಟ್ಟುಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸನಲ್ಲಿ ಪದವಿ ಮಾಡಿ ನಂತರ ಸಿನಿ ಪಯಣವನ್ನು ಶುರುಮಾಡಿದ ನಟಿ ಚಂದನವನದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಬೆಳೀತಾರೆ. ಗಾಳಿಪಟ ಸಿನಿಮಾದಲ್ಲಿ ಗಣೇಶ್‌ಗೆ ಜೋಡಿಯಾಗಿ ಅಭಿನಯಿಸಿ ಕನ್ನಡ ಸಿನಿರಸಿಕರ ಮನದಲ್ಲಿ ಬೇರೂರಿದ್ರು. ಸಿನಿ ಕೆರಿಯರ್‌ನಲ್ಲಿ ಬಹಳ ಎತ್ತರದಲ್ಲಿದ್ದಾಗಲೇ ಅವಕಾಶಗಳು ಸಾಕಷ್ಟು ಕೈಯಲ್ಲಿದ್ದಾಗಲೇ ಸಿನಿರಂಗದಿಂದ ಇದ್ದಕ್ಕಿದ್ದಂತೆ ಡೈಸಿ ದೂರಾಗ್ತಾರೆ. ಕಾರಣ ಏನು ಗೊತ್ತಾ? ,2012ರಲ್ಲಿ ದಿಢೀರ್ ಅಂತ ಡೈಸಿ ಫಿಲ್ಮ್ ಇಂಡಸ್ಟ್ರಿಯಿಂದ ದೂರ ಉಳಿಯಲು ಕಾರಣವಿದೆ.

2011ರ ಹೊತ್ತಿಗೆ ಖ್ಯಾತ ಬ್ಯುಸಿನೆಸ್ ಮ್ಯಾನ್ ಅಮಿತ್ ಜಾಜು ಅವರೊಂದಿಗೆ ವೈವಾಹಿಕ ಜೀವನಕ್ಕೆ ಡೈಸಿ ಕಾಲಿಡ್ತಾರೆ. ವಿವಾಹದ ಬಳಿಕ ಸಿನಿಮಾ ರಂಗದಿಂದ ದೂರಾನೇ ಉಳಿದಿದ್ದಾರೆ. ಆದರೆ ನಟಿಯಾಗಿ ಗುರುತಿಸಿಕೊಂಡಿದ್ದವರು ದಿಢೀರ್ ಬೇರೆ ಕೆಲಸ ಮಾಡಲಿಕ್ಕೆ ಶುರು ಮಾಡಿದ್ದಾರೆ ಏನ್ ಗೊತ್ತಾ? ಹೌದು ನಟಿಯಾಗಿ ಅಭಿನಯಿಸಿದ ಡೈಸಿ ವಿವಾಹದ ಬಳಿಕ ಚಿತ್ರಕಲೆಯಲ್ಲಿ ತೊಡಗಿಕೊಳ್ತಾರೆ. ಬ್ಯುಟಿಫುಲ್ ಪೈಂಟಿಂಗ್ ಮಾಡ್ತಾರಲ್ಲಪ್ಪ ಅಂತ ಹುಬ್ಬೇರಿಸುವಷ್ಟರಲ್ಲೇ ಫೋಟೋಗ್ರಾಫಿಯನ್ನು ಶುರು ಮಾಡಿದ್ರು. ಆರಂಭದಲ್ಲಿ ಕೇವಲ ಮನೆಯವರ ಫೋಟೋಗ್ರಾಫಿ ಮಾಡ್ತಿದ್ದ ಡೈಸಿ ಹೋಗ್ತಾ ಹೋಗ್ತಾ ಬಿ ಟೌನ್‌ನ ಮಾಡೆಲ್‌ಗಳ ಶೂಟ್ ಮಾಡ್ಲಿಕ್ಕೆ ಆರಂಭಿಸ್ತಾರೆ.

ಹೀಗೆ ಮಾಡೆಲ್ಸ್ಗಳ ಶೂಟ್‌ನ್ನ ಮಾಡುವ ಡೈಸಿ ಈಗ ಮುಂಬೈನ ಬಹು ಬೇಡಿಕೆಯ ಫೋಟೋಗ್ರಾಫರ್ಗಳಲ್ಲಿ ಒಬ್ಬರಾಗಿದ್ದಾರೆ. ಕೇವಲ ಮಾಡೆಲ್‌ಗಳ ಅಂದವನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವುದಷ್ಟೇ ಅಲ್ಲದೇ ಮಾಡೆಲ್‌ಗಳ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡ್ತಾರೆ. ಎಸ್.. ತಾವು ಫೋಟೋಶೂಟ್ ಮಾಡುವ ಮಾಡೆಲ್‌ಗಳಿಗೆ ತಾವೇ ಹೇರ್‌ಸ್ಟೈಲ್ ಮಾಡಿ, ಮೇಕಪ್ ಸಹ ಮಾಡಿ ಅವರು ಇನ್ನಷ್ಟು ಬ್ಯುಟಿಫುಲ್ ಆಗಿ ಕಾಣುವಂತೆ ಮಾಡ್ತಾರೆ. ಮೊದಲು ಸಿನಿಮಾದಲ್ಲಿ ಗುರುತಿಸಿಕೊಂಡು ನಂತರ ಸಿನಿಮಾತೇರ ಚಟುವಟಿಕೆಯಲ್ಲಿಯೂ ಲವಲವಿಕೆಯಿಂದ ತೊಡಗಿಸಿಕೊಂಡ ನಟಿ ಡೈಸಿ ಎಲ್ಲ ಕೆಲಸಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ತಾನೊಬ್ಬ ನಟಿ ನಾನ್ಯಾಕೆ ಇನ್ನೊಬ್ಬರ ಫೋಟೋ ತೆಗಿಬೇಕು? ತನ್ನ ಕೆಲಸ ನಟನೆ ಮಾಡೋದಷ್ಟೆ ಅನ್ನೋ ಅಹಂ ಇದ್ದಿದ್ರೆ ಬಹುಶಃ ಡೈಸಿ ಬೋಪಣ್ಣ ಅವರಲ್ಲಿ ಅಡಗಿರುವ ಅಪಾರ ಪ್ರತಿಭೆ ಜನರ ಕಣ್ಣಿಗೆ ಬೀಳುತ್ತಿರಲಿಲ್ಲ. ಡೈಸಿ ಇವತ್ತು ಬಹುಮುಖ ಪ್ರತಿಭೆ ಅಂತಾನೂ ಗುರುತಿಸಿಕೊಳ್ತಿರಲಿಲ್ಲ. ತನ್ನ ಕೆಲಸದ ಮೇಲಿನ ಬದ್ಧತೆ, ಸಮಯೋಚಿತ ನಿರ್ಧಾರವೇ ಡೈಸಿಯನ್ನ ಇವತ್ತು ಜನರು ಕೊಂಡಾಡುವಂತೆ ಆಗಿದೆ. ನಟಿ ಡೈಸಿ ಅವರು ಮಾಡುತ್ತಿರುವ ಈಗಿನ ಕೆಲಸದ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟ ಪಡ್ತೀರಾ? ನಟಿಯಾಗಿದ್ದವರು ಈಗ ಫೋಟೋಗ್ರಾಫರ್ ಆಗಿರೋದು ಸರಿಯಾ? ತಪ್ಪಾ? ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •