ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ಇಲ್ಲಿದೆ. 30 ಲಕ್ಷ ಉದ್ಯೋಗಿಗಳಿಗೆ ಇನ್ನು ಒಂದು ವಾರದಲ್ಲಿ ಬೋನಸ್ ವಿತರಣೆ ಮಾಡಲಾಗುತ್ತದೆ. ಈ ಬಗ್ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಆದ್ದರಿಂದ 3,737 ಕೋಟಿ ರುಪಾಯಿ ಮೊತ್ತವನ್ನು ಬೋನಸ್ ವಿತರಣೆಗಾಗಿ ಬಿಡುಗಡೆ ಮಾಡಲಾಗುತ್ತದೆ. ಹಬ್ಬದ ಸೀಸನ್ ನಲ್ಲಿ ಇದರಿಂದ ಬೇಡಿಕೆಗೆ ಉತ್ತೇಜನ ಸಿಕ್ಕಂತಾಗುತ್ತದೆ.

Bonus-for-employees

ಈ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಣೆ ಮಾಡಿದರು. ಕನಿಷ್ಠ 30 ಲಕ್ಷ ಮಂದಿ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಇದರಿಂದ ಅನುಕೂಲ ಆಗುತ್ತದೆ. ವಿಜಯ ದಶಮಿಗೆ ಮುಂಚೆ ಒಂದೇ ಸಲಕ್ಕೆ ಈ ಬೋನಸ್ ಮೊತ್ತವನ್ನು ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ರೈಲ್ವೆ, ಪೋಸ್ಟ್ ಆಫೀಸ್, ಇಪಿಎಫ್ ಒ, ಇಎಸ್ ಐಸಿ ಮತ್ತು ಪ್ರೊಡಕ್ಷನ್ ನಲ್ಲಿ ಇರುವವರು 17 ಲಕ್ಷ ಮಂದಿ ಇದ್ದು, ಅವರಿಗೆ 2791 ಕೋಟಿ ರುಪಾಯಿ ವಿತರಣೆಯಾದಲ್ಲಿ, ಬಾಕಿ 13 ಲಕ್ಷ ಸಿಬ್ಬಂದಿಗೆ ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ 946 ಕೋಟಿ ರುಪಾಯಿ ವಿತರಣೆ ಆಗಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •