ಈ ಭೂಮಿಯ ಮೇಲೆ ಮಾನವನನ್ನ ಎರಡು ರೀತಿಯಾಗಿ ವಿಂಗಡಣೆ ಮಾಡಲಾಗಿದೆ. ಹೆಣ್ಣು ಮತ್ತು ಗಂಡು ಎಂದು ವಿಂಗಡಣೆ ಮಾಡಲಾಗಿದೆ. ಈ ಭೂಮಿಯ ಮೇಲೆ ಬದುಕುವ ಪ್ರತಿಯೂಯೊಂದು ಜೀವಿಯೂ ಕೂಡ ಇಂತಿಷ್ಟು ವರ್ಷ ಬದುಕುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಮಾನವರು ಕೂಡ ಸರಾಸರಿ ಇಷ್ಟು ವರ್ಷ ಬದುಕುತ್ತಾರೆ ಎಂದು ಹೇಳಬಹುದು. ಇನ್ನು ಕೆಲವರು ಯಾವುದೋ ಆರೋಗ್ಯ ಸಮಸ್ಯೆಯಿಂದ ಮತ್ತು ಅಪಘಾತದಿಂದ ಸತ್ತರೆ ಇನ್ನೂ ತಮ್ಮ ಕೆಲವರು ತಮ್ಮ ಜೀವವನ್ನ ಕಳೆದುಕೊಳ್ಳುತ್ತಾರೆ ಎಂದು ಕೂಡ ಹೇಳಬಹುದು. ಇನ್ನು ಇತ್ತೀಚಿಗೆ ನಡೆದ ಒಂದು ಸಂಶೋಧನೆಯಲ್ಲಿ ಈ ಭೂಮಿಯ ಮೇಲೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ವರ್ಷ ಬದುಕುತ್ತಾರೆ ಅನ್ನುವುದು ವರದಿಯಾಗಿದೆ.human health info

ಹಾಗಾದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ವರ್ಷ ಬದುಕಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವೋ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವರ್ಜೀನಿಯಾ ಜರುಲ್ಲಿ, ವಿಶ್ವದಾದ್ಯಂತ ಮಹಿಳೆಯರ ಸರಾಸರಿ ವಯಸ್ಸು ಪುರುಷರಿಗಿಂತ ಹೆಚ್ಚಾಗಿರುತ್ತದೆ ಎಂದಿದ್ದಾರೆ ಮತ್ತು ಅದರ ಹಿಂದೆ ಎರಡು ದೊಡ್ಡ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಲೈಂಗಿಕ ಹಾರ್ಮೋನುಗಳಲ್ಲಿ ಆಗುವ ವ್ಯತ್ಯಾಸವು ಇದಕ್ಕೆ ಪ್ರಮುಖವಾದ ಕಾರಣ ಏನು ಹೇಳಲಾಗುತ್ತಿದೆ.human health info

ಮಹಿಳೆಯಲ್ಲಿ ಹೆಚ್ಚು ಈಸ್ಟ್ರೊಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಉತ್ಪಾದನೆಯಾಗುತ್ತದೆ ಮತ್ತು ಈ ಈಸ್ಟ್ರೊಜೆನ್ ಕಾರಣದಿಂದಾಗಿ ಮಹಿಳೆಯರಿಗೆ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ ಹಾಗೆ ಇದರಲ್ಲಿ ಹೃದಯ ಸಂಬಂಧಿ ಖಾಯಿಲೆಯೂ ಸೇರಿದೆ. ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚಾದಾಗ ಕೆಲವು ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರ ಎಕ್ಸ್ ವರ್ಣತಂತುಗಳು ಕೆಟ್ಟ ರೂಪಾಂತರಗಳಿಂದ ರಕ್ಷಿಸುತ್ತದೆ. ಇನ್ನು ಬಂದಿರುವ ಒಂದು ವರದಿಯ ಪ್ರಕಾರ ಮಹಿಳೆಯರು ಪ್ರಕೃತಿಯಿಂದ ಒಂದು ರೀತಿಯ ಜೈವಿಕ ಉಡುಗೊರೆಯನ್ನು ಪಡೆದಿದ್ದಾರೆ. ಇದು ಪುರುಷರಿಗಿಂತ ಹೆಚ್ಚು ಬದುಕಲು ಅನುವು ಮಾಡಿಕೊಡುತ್ತದೆ.

ಇನ್ನು 1890 ರಿಂದ 1995 ರವರೆಗೆ 11,000 ಬವೇರಿಯನ್ ಕ್ಯಾಥೊಲಿಕ್ ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ವಯಸ್ಸನ್ನು ವಿಶ್ಲೇಷಿಸಿದಾಗ ಮಹಿಳೆಯರು ಹೆಚ್ಚು ವರ್ಷ ಬದುಕುತ್ತಾರೆಂಬುದು ತಿಳಿದಿದೆ. ಇನ್ನು 2018 ರಲ್ಲಿ ಬಂದಿರುವ ಒಂದು ಮಾಹಿತಿಯ ಪ್ರಕಾರ ವೀಪತ್ತು, ಬರ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನಿಸಿದ ಹುಡುಗಿಯರು ಹುಡುಗರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಆ ಸಮಯದಲ್ಲಿ ಜನಿಸಿದ ಹುಡುಗರಿಗಿಂತ ನಾಲ್ಕೈದು ವರ್ಷ ಹುಡುಗಿಯರು ಹೆಚ್ಚು ಬದುಕುತ್ತಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ.human health info

ಇನ್ನು ಮಹಿಳೆಯರು ಹೆಚ್ಚು ವರ್ಷ ಬದುಕಲು ಮುಖ್ಯವಾದ ಕಾರಣ ಅವರು ಆರೋಗ್ಯ ಕಡೆ ವಹಿಸುವ ಹೆಚ್ಚಿನ ಕಾಳಜಿ ಎಂದು ಹೇಳಬಹುದು. ಮಹಿಳೆಯರು ಹೆಚ್ಚು ಪೌಷ್ಠಿಕಾಂಶದ ಆಹಾರ ಸೇವನೆ ಮಾಡಿದರೆ ಪುರುಷರು ಕೊಬ್ಬಿನ ಆಹಾರ ಸೇವನೆ ಮಾಡ್ತಾರೆ. ಶೇಕಡಾ 33ರಷ್ಟು ಮಹಿಳೆಯರು ಆಸ್ಪತ್ರೆಗೆ ಹೋದರೆ ಆಸ್ಪತ್ರೆಗೆ ಹೋಗುವ ಪುರುಷರ ಸಂಖ್ಯೆ ಕಡಿಮೆ ಎನ್ನಲಾಗಿದೆ. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •