ಜನನ ಪ್ರಮಾಣ ಪತ್ರ ಬರ್ತ್ ಸರ್ಟಿಫಿಕೇಟ್ ನಲ್ಲಿ ಹೆಸರು ತಪ್ಪಿದ್ದರೆ ತಿದ್ದುಪಡಿ ಮಾಡಿಕೊಳ್ಳಬಹುದು ಅಥವಾ ಹೆಸರನ್ನು ಬದಲಾಯಿಸಿಕೊಳ್ಳಬಹುದು, ತಂದೆ ಅಥವಾ ತಾಯಿಯ ಹೆಸರಿನಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಬಹುದು. ಅಡ್ರೆಸ್ ತಪ್ಪಿದ್ದರೆ ತಿದ್ದುಪಡಿ ಮಾಡಬಹುದು ಅಥವಾ ಬದಲಾಯಿಸಬಹುದು. ಹಾಗಾದರೆ ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಿಸಬೇಕಾದರೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಏನೇನು ದಾಖಲಾತಿಗಳು ಬೇಕಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಬೇಕೆಂದರೆ ಕೆಲವು ದಾಖಲೆಗಳು ಬೇಕಾಗುತ್ತದೆ. ಮಗುವಿನ ಹಳೆಯ ಜನನ ಪ್ರಮಾಣ ಪತ್ರ, ತಂದೆ ಹಾಗೂ ತಾಯಿಯ ಆಧಾರ್ ಕಾರ್ಡ್ ಪ್ರತಿ, ಈ ಸ್ಟಾಂಪ್ ಪೇಪರ್ ಅಫಿಡೆವಿಟ್ ಮಾಡಿಸಬೇಕು. ಅಫಿಡೆವಿಟ್ ನಲ್ಲಿ ತಿದ್ದುಪಡಿಯನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎಂಬುದನ್ನು ನಮೂದಿಸಬೇಕು. ಜನನ ಪ್ರಮಾಣಪತ್ರದಲ್ಲಿ ಏನಿದೆ ಅದನ್ನು ಏನೆಂದು ತಿದ್ದುಪಡಿ ಮಾಡಬೇಕು ಎಂಬುದನ್ನು ಅಫಿಡವಿಟ್ ನಲ್ಲಿ ಸರಿಯಾಗಿ ಬರೆದಿರಬೇಕು. ಹೆಸರಿನಲ್ಲಿ ಯಾವುದೇ ರೀತಿಯ ಸ್ಪೆಲಿಂಗ್ ಮಿಸ್ಟೇಕ್ ಆಗಬಾರದು. ಪುರಸಭೆ ಅಥವಾ ಸಿವಿಲ್ ಕೋರ್ಟ್ ಬಳಿಯ ಅಂಗಡಿಗಳಲ್ಲಿ ಅಫಿಡೆವಿಟ್ ಮಾಡಿಕೊಡುತ್ತಾರೆ. ಅಂಗಡಿಗಳಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿಗಾಗಿ ಒಂದು ಅರ್ಜಿ ಸಿಗುತ್ತದೆ ಅದನ್ನು ತೆಗೆದುಕೊಂಡು ಭರ್ತಿ ಮಾಡಬೇಕು.

ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಜನನ ಪ್ರಮಾಣಪತ್ರವನ್ನು ಮೊದಲು ಎಲ್ಲಿ ಮಾಡಿಸಿದ್ದೀರಾ ಅದೇ ಕಛೇರಿಯಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು. ನಂತರ ತಿದ್ದುಪಡಿಯಾದ ಜನನ ಪ್ರಮಾಣ ಪತ್ರವು ಪುರಸಭೆಯಾದರೆ ಬೇಗ ಸಿಗುತ್ತದೆ, ಮಹಾನಗರ ಪಾಲಿಕೆಯಾಗಿದ್ದಲ್ಲಿ ಸ್ವಲ್ಪ ತಡವಾಗಬಹುದು. ಹೆಚ್ಚೆಂದರೆ 7ದಿನಗಳವರೆಗೆ ಕಾಯಬೇಕಾಗುತ್ತದೆ. ಪ್ರತಿ ಪೇಜ್ ಗೆ ಐದರಿಂದ ಏಳು ರೂಪಾಯಿ ಚಾರ್ಜ್ ಮಾಡಬಹುದು ಅದನ್ನು ಪೇ ಮಾಡಿ ನಿಮಗೆ ಎಷ್ಟು ಕಾಪಿ ಬೇಕೊ ಅಷ್ಟು ಕಾಪಿಗಳನ್ನು ತೆಗೆದುಕೊಳ್ಳಲು ಅವಕಾಶವಿದೆ.

ಪ್ರತಿ ಮಗುವಿಗೆ ಜನನ ಪ್ರಮಾಣ ಪತ್ರವನ್ನು ಮಾಡಿಸಬೇಕಾಗುತ್ತದೆ. ಈ ಪತ್ರವೂ ಕೂಡ ಕೆಲವು ಸರ್ಕಾರಿ ಕೆಲಸಗಳಿಗೆ ಅವಶ್ಯಕವಾಗಿ ಬೇಕಾಗುತ್ತದೆ ಆದ್ದರಿಂದ ಈ ಪತ್ರವನ್ನು ಕಳೆದುಕೊಳ್ಳದೆ ಜೋಪಾನವಾಗಿ ಇಟ್ಟುಕೊಳ್ಳಬೇಕು. ಜನನ ಪ್ರಮಾಣ ಪತ್ರದಲ್ಲಿ ಹೆಸರು, ತಂದೆ ತಾಯಿಯರ ಹೆಸರು, ಅಡ್ರೆಸ್ ಸರಿಯಾಗಿರಬೇಕು. ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ, ನಿಮ್ಮ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •